ನಮಸ್ಕಾರ ಸ್ನೇಹಿತರೆ ,
ಈ ಪ್ರಪಂಚದಲ್ಲಿ ಜನರು ಏನೇನೋ ಯೋಚನೆ ಮಾಡ್ತಾರೆ. ಏನೇನೋ ಕಂಡು ಹಿಡಿತಾರೆ. ಇವರನ್ನೆಲ್ಲ ನೋಡಿ ನಾನು ಯಾಕೆ ಗಹನವಾದ ವಿಷಯವನ್ನು ಯೋಚನೆ ಮಾಡ್ಬಾರ್ದು ಅಂತ ವಿಚಾರ ಮಾಡಿದೆ. ಸರಿ… ಯೋಚನೆ ಏನೋ ಮಾಡಬೇಕು….ಆದರೆ ವಿಷಯ..??…ಯಾವ ವಿಷಯ ತೆಗೆದುಕೊಳ್ಳಲಿ…..ರಾಜಕೀಯ ಅಂದ್ರೆ…ಜನರು ವಾಂತಿ ಮಾಡ್ಕೊಳ್ತಾರೆ ( ಬ್ರಷ್ಟಾಚಾರ ಸ್ವಾಮಿ ಬ್ರಷ್ಟಾಚಾರ ) .. ಸಿನಿಮಾ ಅಂದ್ರೆ..ಜನರು…” ಸಾಕು ಸ್ವಾಮಿ ಕಿವಿ ಮೇಲೆ ಹೂ ಇಟ್ಟಿದ್ದು .. ಬೇರೆ ವಿಷಯ ಹೇಳಿ…3D ಅಂತೆ 3D” ಅಂತ ಮಾತಾಡಿಕೊಳ್ತಾರೆ…ಆಗ ನೋಡಿ ಹೊಳಿತು ಒಂದು ಸೂಪರ್ ಆದ ವಿಷಯ…ಅದುವೇ ಹೆಸರಿನ ಕರಾಮತ್ತು.
ನೀವು ನೋಡಿರ್ತಿರಿ.. “ದಾವಣಗೆರೆ ಬೆಣ್ಣೆ ದೋಸೆ” , “ಮಂಗಳೊರು ಬಜ್ಜಿ” , “ಮೈಸೂರ್ ಪಾಕ” , “ಧಾರವಾಡ ಪೇಡ” .. ಹೀಗೆ .. ಹಲವಾರು ಬ್ರಾಂಡೆಡ್ ಹೆಸರುಗಳನ್ನ ಇಟ್ಟಿರುತಾರೆ…..ಅಲ್ಲ ಸ್ವಾಮಿ ..ದೋಸೆ ಮಾಡೋದು ಬೆಂಗಳೂರಿನಲ್ಲಿ ..ಆದರೆ ಹೆಸರು ಮಾತ್ರ ದಾವಣಗೆರೆ.. ಯಾಕೆ ಈ ಮೋಸ ಅಂತ! .. ಇದೇ ದೋಸೇನ ನಾನು…. ಶಿವಾಜಿನಗರ ಬೆಣ್ಣೆ ದೋಸೆ , ಮಾರತಹಳ್ಳಿ ಬೆಣ್ಣೆ ದೋಸೆ , ದೇವನಹಳ್ಳಿ ಬೆಣ್ಣೆ ದೋಸೆ, ಸಾರಾಯಿಪಾಳ್ಯ ಬೆಣ್ಣೆ ದೋಸೆ , ಮೂಡಲಪಾಳ್ಯ ಬೆಣ್ಣೆ ದೋಸೆ ಅಂತ ಕರೀಬಹುದು ತಾನೆ ?
ಹೋಗಲಿ ಬಿಡಿ ದೋಸೆ ಮನೆಕಾಯೋತು .
ಈ ಬಜ್ಜಿ ವಿಷೆಯ ತೆಗೆದುಕೊಳ್ಳಿ. “ಮಂಗಳೂರು ಬಜ್ಜಿ ಅಂತೆ…ಅಲ್ಲ ನನ್ನು “ನಮ್ಮ ಅಜ್ಜಿನ ಬಜ್ಜಿ” ಅಂತ ಯಾಕೆ ಕರಿಬಾರದು ? ..ಕರಿದ್ರೆ ಏನು ಮೈಯಲ್ಲ ಕಜ್ಜಿ ಬರುತ್ತಾ ?? ಅಥವಾ “ಮಜೆಸ್ಟಿಕ್ ಬಜ್ಜಿ… ಉಡುಪಿ ಬಜ್ಜಿ…ಹಾಸನ ಬಜ್ಜಿ…ಧಾರವಾಡ ಬಜ್ಜಿ…ಇಲ್ಲ ಸ್ವಲ್ಪ ಲೆವೆಲ್ ಇರಲಿ ಅಂತ ದುಬೈ ಬಜ್ಜಿ ಅಂತ ಯಾಕೆ ಕರಿಬಾರದು
ಜನ ಚೇಂಜ್ ಕೇಳ್ತಾರೆ ಸ್ವಾಮಿ ಚೇಂಜ್ …( ಇಲ್ಲಿ ಜನ ಅಂದ್ರೆ ನಾವು ನೀವು…ಬಸ್ ನಿರ್ವಾಹಕ ಅಲ್ಲ ಬಿಡಿ
ಇಂತಿ ನಿಮ್ಮ,
ಕಾರ್ತಿಕ್ ಎಲ್


ಸೂಪರ್ ಭಟ್ಟರೆ… ಮಿಂಚಿದೀರ. ಆದ್ರೆ ‘ಬ್ರ್ಯಾಂಡ್ ಫಾಲೊವಿಂಗ್’ ಅಂಥ ಒಂದಿದ್ಯಲ್ವಾ…. ಅದನ್ನ ಏನು ಮಾಡಕ್ಕೆ ಆಗೋಲ್ಲ. ಹೋಗ್ಲಿ ‘ಮೇಡ್ ಇನ್ ಇಂಡಿಯ’ ಬ್ರ್ಯಾಂಡೆಡ್ ‘ಸೋನೀ’ ಟೀವೀ ತೊಗೋತೀಯೋ ಅಥ್ವಾ ‘ಮೇಡ್ ಇನ್ ಯು.ಯೆಸ್.ಯೆ’ ಬ್ರ್ಯಾಂಡೆಡ್ ಟೀವೀ ತೊಗೋತಿಯಾ ಗುರು? ಲೈಫು ಇಷ್ಟೇನೆ!