SHRI HARI KATHE.. GOOD MOVIE

ಶ್ರೀ ಹರಿ ಕಥೆ
ಅವತ್ತು ತಾ:೧೧:೦೩:೨೦೧೦.
ಅಯ್ಯೋ ಇನ್ನು ಏನು ಓದಿಲ್ಲ. ಆಗ್ಲೇ ೯ ಗಂಟೆ. ಇವತ್ತು ಟೆಸ್ಟ್ನಲ್ಲಿ ಪಕ್ಕ ಓತ್ಲಹೊಡಿಯೋದೆ.ಅಲ್ಲ ಈ ಟೆಸ್ಟ್ಗಳನ್ನ ಯಾಕಾದ್ರು ಇಡ್ತಾರೋ.ನಮ್ ಕರ್ಮ ಅಂತ ಬೆಳ್ಳೆಗ್ಗೆನೆ ನನ್ನ ಪುರಾಣವನ್ನ ಅಮ್ಮನಿಗೆ ಹೇಳ್ತಾ ಇದ್ದೆ.
ಮೊಬೈಲ್ ಒಂದೇ ಸಮನೆ ಗೊಲಾಡ್ತಾ ಇತ್ತು. ಯಾರ್ದಪ್ಪ ಕಾಲು ಅಂತ ನೋಡಿದ್ರೆ ಸ್ನೇಹಿತ ಅಭಿದು.!!!! ಏನಪ್ಪಾ ಇದು?ಅಭಿ ನನಗೆ ಕಾಲ್ ಮಾಡೋದೇ?? ಸೂಪರ್ ..ಆದ್ರೆ ಮನಸಿನಲ್ಲಿ Full confusion.. ಮತ್ತೆ ಥ್ರಿಲ್ ಯಾಕೆ ಕಾಲ್ ಮಾಡಿದ ಅಂತ. !!
ಹಾಯ್ ಅಭಿ ಅಂತ ಮಾತಿಗೆ ಪೀಠಿಕೆ ಹಾಕಿದೆ. ಅಭಿ ಟೈಮ್ ವೇಸ್ಟ್ ಮಾಡದೇ ಸೀದಾ ವಿಷಯಕ್ಕೇ ಬಂದ. ಕಾರ್ತಿಕ್ ಇವತ್ತು ಸಂಜೆ ಶ್ರೀ ಹರಿ ಕಥೆ ಪ್ರಿವ್ಯೂ ಶೋ ಇದೆ. ಬರ್ತೀಯಾ?

ನನಗೋ ಶಾಕ್.!!ಏನಪ್ಪಾ ಶಿವ ಇದು..:ಇವನು ನನಗೆ ತಾನೆ ಕಾಲ್ ಮಾಡ್ತಿರೋದು ?ಅಥವಾ bymistake ಬೇರೆಯವರೀಗೆ ಕಾಲ್ ಮಾಡಕ್ಕೆ ಹೋಗಿ ನನಗೆ ಮಾಡಿದಾನ? ..ಗೊತ್ತಾಗಲಿಲ್ಲ.
ಪ್ರಿವ್ಯೂ ಶೋ ಅಂದ್ರೆ ತಮಾಷೆನಾ? celebrities ಬರ್ತಾರೆ.ಅದು ಶ್ರೀ ಹರಿ ಕಥೆ ಮೂವಿ ಹೀರೋ ಮುರಳಿ ಮತ್ತೆ ಹೀರೋಇನ್ ಪೂಜಾ ಗಾಂಧಿ ಮತ್ತೆ ರಾಧಿಕಾ ಗಾಂಧಿ… ಜೊತೆ .(ಪಡ್ಡೆ ಹುಡುಗರ ಕನಸು ಇವರು. )
ಇವರ ಜೊತೆ ನಾವು ಸಿನಿಮ ನೋಡ್ಭಹುದು..Wow..this is super… I just can’t imagine. ದೂಸರ ಮಾತೆ ಇಲ್ದೆ ಓಕೆ ಅಭಿ ಅಂದೆ.
ಸರಿ ಹಾಗಾದ್ರೆ ನಿನ್ನ ಇವತ್ತು ೫ ಗಂಟೆಗೆ ಮಲ್ಲೇಶ್ವರಂ ನಲ್ಲಿ ಇರೋ ರೇಣುಕಾಂಬ ಸಿನಿ ಶೋ ನಲ್ಲಿ meet ಮಾಡನ ಅಂತ ಹೇಳಿ ಕಾಲ್ ಕಟ್ ಮಾಡಿದ…. ಸ್ನೇಹಿತರನ್ನು ಕರೆದುಕೊಂಡು ಬಾ ಅಂತನು ಹೇಳಿದ.
ನನಗೆ ಮೊದಲೇ ಇದ್ದ ಚೂರುಪಾರು concentration ಪೂರ್ತಿ ಹೊರಟುಹೋಯಿತು.ಇವತ್ತಿನ ಪರೀಕ್ಷೆ ಗೋವಿಂದ. ಇನ್ನು ನಾಳಿನ ಪರಿಕ್ಷೇನು ಗೋವಿಂದ… ಇರಲಿ ನೋ ಪ್ರಾಬ್ಲಮ್. ಮತ್ತೆ next time test ಬರಿದ್ರೆ ಆಯಿತು ಅಂತ ಅಂದುಕೊಂಡೆ.

ನನ್ನ ಕ್ಲಾಸ್ ಫ್ರೆಂಡ್ ಮಾರ್ಥಿಶ್ ನ ಕಾಲ್ ಮಾಡಿದೆ. ಸಾಹೇಬ್ರು ನಮ್ ತರಾನೇ ..ಸ್ವಲ್ಪ ಸಿನಿಮಾ ಹುಚ್ಚು. ನಾನು ಹೇಳಿದ್ದೆ ತಡ ಅವನು ಓಕೆ ಮಗ ಅಂದ.ಅದೇ ತರ…ನನ್ನ ಇನ್ನಿಬ್ರು ಸ್ನೇಹಿತರನ್ನ ಕರ್ದೆ ..ಭಾನು ಪ್ರಕಾಶ್ ( ಸಿಕ್ಕಾಪಟ್ಟೆ ಪ್ರಕಾಶಾವಾದ ಮನುಷ್ಯ) ಮತ್ತೆ ಕಾರ್ತಿಕ್ ಜೆ ಅಂತ.ಅವರು ಓಕೆ ಅಂದ್ರು. ಹಾಗಾದ್ರೆ ಇವತ್ತು ಪ್ರೊಗ್ರಾಮ್ guarantee …ಅಂತ ಖುಶಿಪಟ್ಟು ಮತ್ತೆ ಓದಕ್ಕೆ ಶುರು ಮಾಡಿದೆ..
ಸಮಯ ೫ ಗಂಟೆ.
ಸ್ಥಳ :ಮಲ್ಲೇಶ್ವರಂ

ನಾವು ನಾಲ್ಕು ಜನ ರೇಣುಕಾಂಬ ಸಿನಿ ಶೋಗೆ ಬಂದ್ವಿ. entranceನಲ್ಲೇ ನವೀನ ಕೃಷ್ಣ ಇದ್ರು. ನಮಗೋ ಒಂಥರಾ ಒಳಒಳಗೆ ನಾಚಿಗೆ.ಅವರು ದೊಡ್ಡ ಸ್ಟಾರ್.ನಾವು ಅವರ ಜೊತೆ ಮಾತನಾಡಿ ಕಿತ್ತು ದಬಾಕೋದು ಅಷ್ಟರಲ್ಲೇ ಇದೆ.ಆದ್ರು ಮನಸಿಗೆ ಕಸಿವಿಸಿ..ಅವರ ಜೊತೆ ಏನಾದ್ರು ಮಾತಾಡ್ಬೇಕು. ಅವರ ಆಕ್ಟಿಂಗ್ನ ಬಗ್ಗೆ ಹೇಳ್ಬೇಕು. ಅವರ ಜೊತೆ ಒಂದು ಫೋಟೋ ತೆಗಿಸಬೇಕು.. ಹೀಗೆ ಹುಚ್ಚು ಆಲೋಚನೆಗಳು..ಅಷ್ಟರಲ್ಲಿ ಅಭಿ ಬಂದ. ಅಹಾ ..ಸುಂದರವಾದ ಲಕ್ಷಣವಾದ ಹುಡುಗ. ಮೊದಲ ನೋಟಕ್ಕೆ ಎಷ್ಟೋ ಹುಡುಗೀರು flat ಆಗಿಹೋಗತಾರೆ ಅವನನ್ನ ನೋಡಿ.
ಅಂತ ಪೆರ್ಸನಾಲಿಟಿ..ಥೇಟ್ ರವಿಚಂದ್ರನ್ ಸ್ಟೈಲ್. 🙂

ಅವನು ನನ್ನ ವಿಶ್ ಮಾಡಿ ಒಳಗೆ ಕರೆದು ಕೊಂಡು ಹೋದ. ಸುಮಾರು ೬ ಗಂಟೆಗೆ ಸಿನಿಮಾ ಶುರು ಆಯಿತು.ಅಷ್ಟರಲ್ಲಿ ರಾಧಿಕಾ ಗಾಂಧಿ ಬಂದಿದ್ರು …ಮತ್ತೆ ದಯಾಲ್ ಸರ್ ನವರು ನಮ್ಮನ್ನ ಆತ್ಮೀಯವಾಗಿ ಮಾತನಾಡಿಸಿದರು…ಸಿನಿಮಾ ಶುರುವಿನಿಂದ -ಮುಗಿಯೋ ತನಕ ನವೀನ ಕೃಷ್ಣ ರವರ ಕಾಮಿಡಿಗೆ ಹೊಟ್ಟೆ ಹುಣ್ಆಗೋದು ಬಾಕಿ. ಇದರ ಮಧ್ಯೆ ಪೂಜಾ ಗಾಂಧಿ,ರಾಧಿಕಾ ಗಾಂಧಿ ಮತ್ತೆ ಮುರಳಿಯವರ ಮನೋಜ್ಞ ಅಭಿನಯದಿಂದ ಸಿನಿಮಾ ಮುಗಿದಿದ್ದೆ ಗೊತ್ತಾಗಲಿಲ್ಲ.ಇಂಟರ್ವಲ್ ನಲ್ಲಿ ಪೂಜಾ ಗಾಂಧಿ ಮತ್ತೆ ಮುರಳಿ ರವರು ಬಂದಿದ್ರು. ನಿಜವಾಗ್ಲೂ.. ಸಿನಿಮಾ ಬಗ್ಗೆ ಹೇಳಬೇಕೆಂದರೆ …ಅದೇ ಲವ್..ಅದೇ…ರೌಡಿಸಂ…ಅದೇ..ಮಚ್ಚು..ಅದೇ..ಮರ ಸುತ್ಹೋ ಕಥೆ ಬದ್ಲು ದಯಾಲ್ ಸರ್ ನವರು ಒಂಚೂರು experiment ಮಾಡಿದಾರೆ. ಅದು ಖುಶಿ ಕೊಡೊ ವಿಷೆಯ.ಹರಿನ ಗೊಂದಲ… ಪೂಜಾ ಗಾಂಧಿರವರ ಅಸಹಾಯ ಕಥೆ… ನವೀನರವರ ಕಾಮಿಡಿ timing ..ರಾಧಿಕಾ ಗಾಂಧಿರವರ…ಮುಗ್ಧ ಅಭಿನಯ ..ಮನಸಿಗೆ..ನಾಟುತೆ.

Sameer Kulkarni ರವರ ಮ್ಯೂಸಿಕ್ ನಲ್ಲಿ ಹೊಸತನ ಇದೆ.cinematography ತುಂಬಾನೆ ಚೆನ್ನಾಗಿ ಮೂಡಿಬಂದಿದೆ…ಓವರ್ ಆಲ್ ಒಂದು ಫ್ಯಾಮಿಲಿ entertainer. ನೀವು ಹಾಕಿರೋ ದುಡ್ಡಿಗೆ ಖಂಡಿತ ಮೋಸ ಆಗಲ್ಲ. ಅದಕ್ಕೆ..ಈ ಕೂಡಲೇ..ಇಡೀ ಫ್ಯಾಮಿಲಿನ ಕರೆದು ಕೊಂಡು ಹೋಗಿ ಸಿನಿಮಾ ನೋಡ್ಕೊಂಡು ಬನ್ನಿ.ಹೇಗಿತ್ತು ಅಂತ ಕಮೆಂಟ್ ಮಾಡಿ 🙂

ಇಂತಿ ನಿಮ್ಮ
ಕಾರ್ತಿಕ್ ಎಲ್ ಭಟ್.

9 thoughts on “SHRI HARI KATHE.. GOOD MOVIE

 1. Well, abhi kardidda movie nodoke interest irovru msg maadi antha……….

  As int was there, wasn’t interested……..

  Aamele bhatta call maadi baa maga hogona anda, hegidru company ge bhatta idanalla antha jai andvi…….

  It was really nice meeting naveen krishna,pooja gandhi,radhika gandhi, murali n all…….. they all were very friendly n talked with us nicely………

  We enjoyed the movie a lot n even talking to those celebs…………

 2. ನಮಸ್ತೆ ಕಾರ್ತಿಕ್.. ಅಂಕಣ ತುಂಬಾ ಸೊಗಸಾಗಿ ಹಾಸ್ಯಪೂರ್ಣವಾಗಿ ಮೂಡಿಬಂದಿದೆ. ಹೀಗೆ ಬರೆಯುತ್ತಿರು..
  ಅಂದ ಹಾಗೆ ಸಿನಿಮಾ ನೋಡಲು ಪ್ರಯತ್ನಿಸುವೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s