ಓ ಬಾಲೆಯೇ ಇರಲಿ ನಿನ್ನ ಕ್ಷಮೆ ನನ್ನ ಮೇಲೆ !

ಓ ಬಾಲೆಯೇ ಇರಲಿ ನಿನ್ನ ಕ್ಷಮೆ ನನ್ನ ಮೇಲೆ !

Poor girl

ಅಂದು ಆಫೀಸ್ನಲ್ಲಿ ಕೆಲಸ ಮಾಡಿ ಸಂಜೆ ೫:೪೫ರ ಕ್ಯಾಬ್ನಲ್ಲಿ ಕೂತೆ. ಸ್ವಲ್ಪ ಸಮಯದ ನಂತರ ನಮ್ಮ ಕ್ಯಾಬ್ ಡ್ರೈವರ್ ನಾಗರಾಜು ಡರ್ರ್ ಅಂತ ಗಾಡಿನ ಸ್ಟಾರ್ಟ್ ಮಾಡಿದ. ನಾನು ಎಂದಿನಂತೆ ನನ್ನ ಪ್ರೀತಿಯ ಬಾಳಸಂಗಾತಿಯಾದ ಮೊಬೈಲ್ ಅನ್ನು ಆನ್ ಮಾಡಿ “ಸಕತ್ ಹಾಟ್ ಮಗ” ಅಂತ ಕಿರ್ಚೊ ರೇಡಿಯೋ ಜಾಕೀಯ ದ್ವನಿ ಕೇಳುತ್ತಾ … ಅದರಲ್ಲಿ ಬರುವ ಹಾಡನ್ನು ಸವಿಯುತ …. ಆನಂದದಲ್ಲಿ ತೇಲಾಡುತ್ತಾ ಇದ್ದೇ.

ಕ್ಯಾಬ್ ಬೆಳ್ಳಂದೂರು ದಾಟಿ ಅಗರ ಕಡೆ ಹೋಗುತಿತ್ತು. ಎಂದಿನಂತೆ ಅವತ್ತು ಕೂಡ ಸಿಗ್ನಲ್ ನ ಗುಲಾಮಿಗೆ ಶರಣಾದ್ವಿ .. ಈ ದರಿದ್ರ ಸಿಗ್ನಲ್ಗೆ ಹಿಡಿಶಾಪ ಹಾಕಿ ನಾನು ವಾಹನದ ಕಿಟಕಿಿಂದ ಹೊರಗಡೆ ನೋಡುತಿರಬೇಕಾದರೆ …ಸುಮಾರು ೧೦-೧೨ ವರುಷದ ಹುಡುಗಿ ಪ್ರಜ್ಞೆ ಇಲ್ಲದೆ ಅಗರ ಬಸ್ ಸ್ಟಾಂಡ್ನಲ್ಲಿ ಬಿದ್ದಿದ್ದಳು . ಒಂದು ಕ್ಷಣ ನಾನು ಅವಾಕ್ಕಾದೆ. ಅಲ್ಲಿ ಸುಮಾರು ಜನ ಇದ್ದರು …. ಯಾರಿಗೂ ಸಹ ಅವಳನ್ನು ನೋಡೋವಷ್ಟು ವ್ಯವದಾನ ಇರಲಿಲ್ಲ….. ಆ ಹುಡುಗಿಯ ಪಕ್ಕದಲ್ಲಿ ಒಂದು ಸಣ್ಣ ಚೀಲ ಇತ್ತು . ಬಹುಶ ಆ ಚೀಲದಲ್ಲಿ ಚಿಂದಿ ಬಟ್ಟೆ ಇರಬಹುದೇನೋ… ( ಬೇರೆ ಏನು ಇರಲು ಸಾಧ್ಯ ಹೇಳಿ ? ) ಆ ಚೀಲದ ಪಕ್ಕದಲ್ಲಿ ಒಂದು ಚಿಕ್ಕ ಡಬ್ಬ. ಆ ಡಬ್ಬದಲ್ಲಿ ಒಂದು ರೊಟ್ಟಿ… ಆ ರೊಟ್ಟಿಯನ್ನು ತಿನ್ನಲು ಹೊಂಚು ಹಾಕುತಿರುವ ೨-೩ ನಾಯಿಗಳು ಅವಳ ಸುತ್ತುವರಿದಿವೆ .. ಆ ಹುಡುಗಿಯ ಅವಸ್ಥೆಯಂತೂ ಹೇಳತೀರದು….. ಕೊಳಕಾದ ಮೈ…ಬರೀ ಎಲುಬು ಕಾಣುವ ದೇಹ… ಹರಿದ ಬಟ್ಟೆ….ಛೇ …ಅಯ್ಯೋ ಅನಿಸಿತು…

ತಕ್ಷಣ ಯೋಚನೆ ನಿಂತೆ.. ಅಲ್ಲ ಸುತ್ತ ಮುತ್ತಾ ಇಷ್ಟು ಜನರಿದ್ರೂ.. ಯಾಕೆ ಯಾರು ಸಹಾಯಕ್ಕೆ ಮುಂದಾಗಲಿಲ್ಲ… ???? ಇಲ್ಲಾ ನಾನೇ ಈ ವಾಹನದಿಂದ ಇಳಿದು ಈ ಹುಡುಗಿಗೆ ಸಹಾಯ ಮಾಡಲೇ…?!.. ಆದರೆ ಆ ನಂತರ ಪೋಲೀಸಿನವರು ಸುಮ್ಮನೇ ನನಗೆ ತೊಂದರೆ ಕೊಟ್ರೆ…? “ಏನಪ್ಪಾ…ನಿನಗೂ ಈ ಹುಡಿಗಿಗೂ ಏನು ಸಂಬಂಧ ಅಂತ ಕೇಳಿದರೆ???… ಈ ಹುಡಿಗಿನ ನೀನೆ ಸಾಕು ಅಂತ ಹೇಳಿದರೆ….? ಮನೆಯೆಲ್ಲಿ ಅಪ್ಪ ಅಮ್ಮ…ಈ ಹುಡುಗಿ ಯಾರು ಅಂತ ಕೇಳಿದರೆ…? ನೆರೆಹೊರೆಯವರು , ಸಂಬಂಧಿಕರು ನನ್ನ ಅನುಮಾನಿಸಿದರೆ…? ಈ ಎಲ್ಲ ಅಂತೆ ಕಂತೆಗಳನ್ನು ಯೋಚಿಸುತ್ತಿರಬೇಕಾದರೆ …… ಸಿಗ್ನಲ್ ಗ್ರೀನ್ ಬಿತ್ತು. ನಾಗರಾಜು ಬುರ್ …..ಅಂತ ವಾಹನ ಚಲಾಿಸಿದ .. ವಾಹನ ಮುಂದೆ ಸಾಗುತ್ತಿದ್ದಂತೆ…ಆ ಬಾಲೆಯ ಮುಗ್ಧ ಮುಖ ದೂರ ಸರಿಯತೊಡಗಿತು .. ಮನಸು ಪರಿತಪಿಸಿತು….. ಛೇ ನಾನು ಸಹ ಆ ಹೃದಯ ಹೀನರ ಗುಂಪಿಗೆ ಸೇರಿದೆನಾ… ??? ಅಥವಾ….ಆ ಜನರ ಮನಸಿನಲ್ಲಿಯೂ ನನ್ನಂತೆಯೇ ….ಪ್ರಶ್ನೆಗಳು ಸುಳಿದಾಡುತ್ತಿದೆಯ…???…ಈ ಪ್ರಪಂಚವೇ ಹೀಗೇನ…..ಅಥವಾ…ನಾವು ಹೀಗೇನ…. ಅಥವಾ…ನಾನು ಹೀಗೇನ…. !!! ಒಂದು ಗೊತ್ತಾಗುತಿಲ್ಲ… ಕೊನೆಯದಾಗಿ ಹೇಳಬೇಕೆಂದರೆ…..

ಓ ಬಾಲೆಯೇ … ಪ್ಲೀಸ್ ಕ್ಷಮಿಸು ನನ್ನ…..

ಇಂತೀ,
ನಿಮ್ಮ ಕಾರ್ತಿಕ್ ಎಲ್ ಭಟ್

Advertisements
Posted in ಅವಿಭಾಗೀಕೃತ

4 thoughts on “ಓ ಬಾಲೆಯೇ ಇರಲಿ ನಿನ್ನ ಕ್ಷಮೆ ನನ್ನ ಮೇಲೆ !

  1. @Confused
    ಬಹುಷ ಇದು ನಿಮ್ಮ ಮನದಾಳದ ಭಾವನೆಗಳ ಜೇಂಕಾರ ಇರಬಹುದು , ಆದರೆ ಈ ನಿಮ್ಮ ಪ್ರಶ್ನೆ ಗೆ ..ಉತ್ತರವನ್ನೂ ಎಷ್ಟೋ ಮನುಜ ಮನಸುಗಳು ಹುಡುಕುತಿವೆ. ಇದು ಕಾಲವೇ ಉತ್ತರಿಸಬಹುದಾದ ಉತ್ತರ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s