ಜಾಮ್ ಗಳ ಚಕ್ರವ್ಯೂಹದಲ್ಲಿ !!!

ಸುಮಾರು ಒಂದು ತಿಂಗಳಿನಿಂದ ನಾನು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಆಫೀಸಿಗೆ ಪ್ರಯಾಣ ಮಾಡುತ್ತಿದ್ದೇನೆ. ಈ ಬೆಂಗಳೂರಿನಲ್ಲಿ ವಾಹನ ಓಡಿಸೋದು ನಮ್ಮಂತಹ ಹುಡುಗರು ಉಪ್ಪಿಟ್ಟು ತಿನ್ನೋದು ಒಂದೇ..ಆದರೇ ನನಗೆ ಏನೋ ಒಂದು ತರ ಮಜಾ ಸಿಗುತ್ತೆ ಗಾಡಿ ಓಡಿಸುವುದರಲ್ಲಿ .
ಏಕೆಂದರೆ ದಿನಾ ನೀವು ಹೊಸ ಜನಗಳನ್ನ ನೋಡಬಹುದು . ಅವರು ಆಡುವ ತಿಕ್ಕಿಲುತನದ ಸ್ವಭಾವನವನ್ನು ನೋಡಿ ಆನಂದಿಸಬಹುದು .
ನಾನು ಎಷ್ಟೋ ಸಲ ನೋಡಿದೀನಿ ಸಿಗ್ನಲ್ ಬಂದಾಗಲೇ ಜನರು ಬುರ್ರ್ ಅಂತ ಫಾಸ್ಟ್ಆಗಿ ಗಾಡಿ ಓಡಿಸ್ತಾರೆ .ಮಂಡೆ ಇಲ್ಲದ ಜನ. ಅಲ್ಲ ಸ್ವಾಮಿ ಒಂದು ನಿಮಿಷ ತಡವಾದರೆ ಅವರ ಗಂಟು ಹೋಗುತ್ಹೋ ಅತವ ಮನೆಯಲ್ಲಿ ಅವರ ಹೆಂಡತಿ ಊಟ ಹಾಕುವುದಿಲ್ಲವೋ??? ದೇವರೇ ಬಲ್ಲ !!

ಇನ್ನು ಆಟೋಗಳ ಬಗ್ಗೆ ಕೇಳೋದೆ ಬೇಡ.”ನಾವು ಇರೋದೇ ಹೀಗೆ ಸ್ವಾಮಿ…” ಅಂತ ಅವರು ಓಡ್ಸಿದ್ದೆ ರೂಲ್ಸ್ !! ಕ್ಷಣಕ್ಷಣಕ್ಕೂ ಲೇನ್ ಬದಲಾಯಿಸುತ್ತಾರೆ .. ಇಂಡಿಕೇಟರ್ ಅಂತು ಹಾಕೋದೇ ಇಲ್ಲ ಬಿಡಿ . ಇನ್ನು ನಿಮ್ಮ ತಪ್ಪು ಇಲ್ಲದೆ ಇದ್ರೂ ಗಾಡಿ ಟಚ್ ಆದ್ರೆ ನಿಮ್ಮದೇ ತಪ್ಪು.ಕಾರಣ ಅವರು ಆಟೋಗಳು …ಆಟೋಗಳು ಯಾವತ್ತು ತಪ್ಪುಗಳನ್ನ ಮಾಡೋದೆ ಇಲ್ವಂತೆ ಅನ್ನೋದು ಅವರ ಅಂಬೋಣ !!

ಆಟೋ ಮುಗೀತು ..ಇನ್ನು ಬಸ್ಸುಗಳ ಸರಧಿ ! ಅವರ ಬಗ್ಗೆ ಮಾತನಾಡದೆ ಇರೋದೆ ವಾಸಿ.ನಮ್ ಬೆಂಗಳೂರಿನಲ್ಲಿ ಬಸ್ಸುಗಲ್ಲದು ಒಂದು ವಿಶೇಷತೆ ಇದೇ.ಅದೇನೆಂದರೆ ಬಸ್ಸುಗಳು ಇಲ್ಲಿ ಯಾವತ್ತು ಬಸ್ಸುನಿಲ್ದಾನದಲ್ಲಿ ನಿಲ್ಲಲ್ಲ 🙂 .. ಅವೂ ಏನಿದ್ದರು ಒಂದೋ ನಿಲ್ದಾಣದ ತುಸು ಮುಂದೆ ಅತವ ನಿಲ್ದಾಣದ ತುಸು ನಂತರ ನಿಲ್ಲುಥವೆ . ಆದಕಾರಣ ನೀವು ಸ್ವಲ್ಪ ಒಡಲೆಬೇಕು ಬಸ್ಸು ಹಿಡಿಯಲು .!! 🙂
ಈ ರೀತಿ ನಮ್ಮಂತಹ ಬಡಪಾಯಿ ದ್ವಿಚಕ್ರ ಸವಾರರನ್ನು ಆ ದೇವರೇ ಕಾಪಾಡಬೇಕೆಂದು ನಾನು ಪ್ರಾಥಿಸುವೆ !!

ಇಂತಿ ,
ಕಾರ್ತಿಕ್ ಎಲ್

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s