Nambike andare yenu ??

ನಂಬಿಕೆ  ಅಂದರೆ  ಏನು ?

ಈ ಪ್ರಶ್ನಗೆ ಸಾವಿರ ಉತ್ತರಗಳು ಇವೆ . ಆದರು ನಮ್ಮಂತಹ  ಸಾಮಾನ್ಯ ಪ್ರಜೆಗಳು ಅದನ್ನ  ಪಡೆಯೋಕ್ಕೆ ಏನೆಲ್ಲ ಕಸರತ್ತು ಮಾಡ್ತೀವಿ. ಕೆಳಗೆ ಇರೋ  ಎರಡು ಪ್ರಸಂಗಗಳನ್ನ  ಓದಿ ..ನಿಮಗೆ ಸ್ವಲ್ಪವಾದರು ಗೊತ್ಹಾದಿತು …ನಂಬಿಕೆ ಅಂದರೆ ಏನು ಅಂತ.

 

ಅದು ದೊಡ್ಡ  ಉದ್ಯಾನವನ .ಅಲ್ಲಿ  ಮಕ್ಕಳು ಪ್ರಪಂಚದ ಅರಿವಇಲ್ಲದೆ ಅವರದೇ ಲೋಕದಲ್ಲಿ ಆಡುತ್ತಿದ್ದರು . ನಾನು ಅಮಾವಾಸ್ಯ ಅಥವ ಹುಣ್ಣಿಮೆಗೋ  ಈ ಉದ್ಯಾನವನಕ್ಕೆ ಬರ್ತಾ ಇರ್ತಿನಿ.ಈ ಸಲ ಬಂದಾಗ ಒಬ್ಬ ಮಧ್ಯವಯಸಿನ ಪುರುಷ ತನ್ನ ಪುಟ್ಟ ಮಗಳನ್ನು ತನ್ನ ಹೆಗಲ ಮೇಲೆ ಇಟ್ಟು ಆಟ ಆಡಿಸುತ್ತಿದ್ದ . ಹೀಗೆ ಒಮ್ಮೆ ತನ್ನ ಮಗಳನ್ನ ತನ್ನ ಕೈಗಳಲ್ಲಿ ಹಿಡುದು ಒಮ್ಮೆ ಮೇಲೆಳಕ್ಕೆ ಹಾರಿಸಿದ. ಅವಳು ಖುಷಿ ಇಂದ ಕೇ ಕೇ ಹಾಕುತ್ತ ತನ್ನ ಅಪ್ಪನ ಕೈಗಳನ್ನು ಹಿಡಿದಳು . ಆಗ ನಾನು ಯೋಚನೆ ಮಾಡಿದೆ. ಆಹಾ ಆ ಚಿಕ್ಕ ಹುಡುಗಿಗೆ ಎಷ್ಟು ನಂಬಿಕ್ಕೆ ಇರಬೇಕು ತನ್ನ ತಂದೆಯ ಮೇಲೆ.  ಅವಳಿಗೆ ಗೊತ್ಹಿರೋದು ಒಂದೇ.ಅದು  ಹಾರುವಾಗ ಗಾಳಿ ಹಿಡಿದು  ಆನಂಧಿಸುವುದು.

ಅವರ ಹೆಸರು ಹರ್ಷ. ಖಾಸಗಿ ಕಂಪನಿಯಲ್ಲಿ ಸೇಲ್ಸ್  ಮ್ಯಾನೇಜರ್. ಅವರಿಗೆ ೮ ವರುಷ ಹುಡುಗ. ಹೆಸರು ಮಿಥುನ್. ಮಿಥುನ್ ಬಹಳ ಚೂಟಿ ಹುಡುಗ. ಒಂದು ನಿಮಷ ಅವನು ಸುಮ್ಮನೆ ಕೂತರೆ ಪ್ರಳಯ ಆಗೋದು ಗ್ಯಾರೆಂಟಿ J. ಒಂದು ದಿನ ಹರ್ಷ ಮಿಥುನ್ ನ ಶಾಲೆಇಂದ ಮನೆಗೆ ಕರೆದುಕೊಂಡು ಹೋಗುತ್ತಿರಬೇಕಾದರೆ ಹರ್ಷ ಮಗನಿಗೆ ಹೇಳಿದ. “ಮಿಥುನ್ ನೋಡು ಮುಂದೆ ಮೇನ್ ರೋಡ್ ಇದೇ. ನನ್ನ ಕೈ ಹಿಡಿ. ರೋಡ್ ಕ್ರಾಸ್ ಮಾಡೋಣ. “ ಅದಕ್ಕೆ ಮಿಥುನ್ “ಅಪ್ಪ ನಾನು ನಿನ್ನ ಕೈ ಹಿಡಿಯಲ್ಲ , ನೀನು ನನ್ನ ಕೈಹಿಡಿ “ ಎಂದು ಹೇಳಿದ. ಹರ್ಷನಿಗೆ ಮಗನ ಈ ವರ್ತನೆ ಕಂಡು ಸಿಟ್ಟು ಬಂತು. ರೋಡ್ ಕ್ರಾಸ್ ಮಾಡಿ ವಿಚಾರಿಸಿದರೆ  ಆಯಿತು ಎಂದು ಅಂದುಕೊಂಡು ಸುಮ್ಮನಾದ.

ರೋಡ್ ಕಾರ್ಸ್ಸ್ ಮಡಿದ ನಂತರ ಹರ್ಷ ಮಿಥುನ್ ನ ಕಿವಿ ಹಿಂಡಿ ಅವನ ಮಾತು ಕೇಳದಿದಕ್ಕೆ ಜೋರು ಮಾಡಿದ . ಆಗ ಮಿಥುನ್ ಹೇಳಿದ “ಅಪ್ಪ , ರಸ್ತೆಯೆಲ್ಲಿ ನಾನು ನಿಮ್ಮ ಕೈ ಹಿಡಿದರೆ  ನನಗೆ ನನ್ನ ಮೇಲೆ ನಂಬಿಕ್ಕೆ ಇರಲ್ಲ. ಎಲ್ಲಿ  ರಸ್ತೆ ಮಧ್ಯ ನಾನು  ನಿನ್ನ ಕೈ ಬಿಡುತ್ತೇನೋ ಅಂತ ಭಯ ಆಗುತ್ತೆ. ಆದರೆ  ನೀನು ನನ್ನ ಕೈ ಹಿಡಿದರೆ ಏನೇ ಆದರು ನನ್ನ ಜೊತೆ ಇರ್ತಿಯ ಅಂತ ಭಾವನೆ  ಬರುತ್ತೆ  ಅಪ್ಪ. ಈಗ ಹೇಳು ನಾನು ಮಾಡಿದ್ದು ತಪ್ಪ ? “.

 

ಈಗ ನೀವು ಹೇಳಿ ನಂಬಿಕೆ ಅಂದ್ರೆ ಏನು  ಅಂತ. ????

 

ಇಂತಿ,

ನಿಮ್ಮ ಕಾರ್ತಿಕ್

 

Advertisements
Posted in ಅವಿಭಾಗೀಕೃತ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s