Kaacha dinacharane !!

ಸ್ವಾತಂತ್ರ್ಯ ದಿನಾಚಾರಣೆ ಗೊತ್ತು, ಮಕ್ಕಳ ದಿನಾಚಾರಣೆ ಗೊತ್ತು, ಅಮ್ಮಂದಿರ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಹೀಗೆ ಆ ದಿನ …ಈ ದಿನ..ಅಂತ ಇರೋಬರೋ ಎಲ್ಲ ದಿನ ನೀವುಗಳು ಕೇಳಿದಿರ . ಆದರೇ ಕಾಚ ದಿನಾಚಾರಣೆ ಬಗ್ಗೆ ಕೇಳಿದಿರಾ ? .. ಖಂಡಿತ ಇಲ್ಲ ಅಂತ ನಾನು ಭಾವಿಸುತ್ತೇನೆ .

ಅಂದು ಮಂಗಳವಾರ. ನನ್ನ ತಂದೆಗೆ ವಾರದ ಮುಂಚೆ ಒಂದು ಸಣ್ಣ ಹರ್ನೀಯ ಶಸ್ತ್ರಚಿಕಿತ್ಸೆ ಆಗಿತ್ತು. ಶಸ್ತ್ರಚಿಕಿತ್ಸೆ  ಮುಗಿದ ನಂತರ ಅಪ್ಪ ನನಗೆ “ಮಗನೆ ನನಗೆ ಒಂದು ಸ್ಪೆಷಲ್ ಕಾಚ ತಗೊಂಡು ಬಾರೋ”  ಅಂತ ಹೇಳಿದರು . ನಾನು ಅದೇ ಹುಮ್ಮಸ್ಸಿನಲ್ಲಿ ಮನಯಿಂದ  ಸೀದಾ ವಿಜಯನಗರಕ್ಕೆ ಬಂದು ಒಂದು VIP CHAMP ಕಾಚ ತಗೊಂಡೆ . ಇಲ್ಲಿ ತನಕ ಏನು ಸಮಸ್ಯೆ ಇರ್ಲಿಲ್ಲ. ಮುಂದೆ ನೋಡಿ ಏನು ಆಯಿತು ಅಂತ.

ಅದೇ ಮಂಗಳವಾರ … ಅಪ್ಪ ಮತ್ತೆ ನನ್ನ ಬಳಿ ಬಂದು ” ಲೋ ಮಗನೆ ಒಂದು ಎರಡು ಜೊತೆ ಕಾಚ ತಗೊಂಡು ಬಾರೋ” ಅಂದ್ರು . ನನಗೋ ಪೀಕಲಾಟ. ಆಫೀಸ್ ಕೆಲಸ ಇನ್ನು ಆಗಿಲ್ಲ ಅಷ್ಟರಲ್ಲಿ ಅಪ್ಪನ  ಕಾಚ ಉವಾಚ. ಅವತ್ತು ನಾನು ವರ್ಕ್ ಫ್ರಾಮ್ ಹೋಂ …ಏನಪ್ಪಾ ಮಾಡೋದು ಅಂತ ಯೋಚನೆ ಮಾಡಿದೆ.. ಆಮೇಲೆ ಅನಿಸ್ತು…ಕೆಲಸ ಹೇಗೂ ಇದ್ದೆ ಇರುತ್ತೆ..ಆದರೇ ಪಾಪ ಅಪ್ಪನಿಗೆ ಕಾಚ…. ?ಛೆ ಛೆ…ಮೊದಲು ಇಲ್ಲೇ ಹತ್ತಿರದ ಅಂಗಡಿ ಇಂದ ಒಂದು ಕಾಚ ತರಣ ಅಂತ ಹೋದೆ. ಅಂಗಡಿಗೆ  ಸರ್ ಒಂದು VIP ಕಾಚ ಕೊಡಿ ಅಂದೇ . ಅದಕ್ಕೆ ಅವನು “ಸರ್  VIP ಗೆ ಫುಲ್ ಡಿಮ್ಯಾಂಡ್ ಇದೆ…ಬೇಕಾದರೆ ರೂಪಂದು ಇದೆ .ತಗೋಳಿ ” ಅಂದ. ಯಾರಪ್ಪ ಈ ರೂಪ ಅಂತ ತಕ್ಷಣ ಯೋಚನೆ ಮಾಡಿದೆ. ಆಮೇಲೆ ತಿಳಿಯಿತ್ತು ಅದು ರೂಪ ಬ್ರಾಂಡಿನ ಕಾಚ ಅಂತ . ಸರಿ ಕೊಡಪ್ಪ ದೇವ್ರು ಅಂತ ಅದನ್ನ ತಗೊಂಡು ಹೋಗಿ ಅಪ್ಪನಿಗೆ ಕೊಟ್ಟು ಒಂದು ದೊಡ್ಡ ನಮಸ್ಕಾರ ಮಾಡಿ ನನ್ನ ಲ್ಯಾಪ್ಟಾಪ್ ನಲ್ಲಿ ಕೆಲಸ ಶುರು ಶುರುಮಾಡಿಕೊಂಡೆ .

ಸ್ವಲ್ಪ ಸಮಯದ ನಂತರ ಅಪ್ಪ ಮತ್ತೆ ಬಂದ್ರು . “ಲೋ ಮಗನೇ ಈ ಕಾಚ ತುಂಬ ಚಿಕ್ಕದು. ನೀನು ಮೊದಲು ತಂದಿದ್ದ ಕಾಚನ ತಗೊಂಡು ಬಾರೋ ” ಅಂತ ನನ್ನ ಮತ್ತೆ ವಿಜಯನಗರಕ್ಕೆ ಕಳುಹಿಸಿದ್ರು . ಸರಿ ಯಾವೊದೋ ಒಂದು ಗಾರ್ಮೆಂಟ್ಸ್ ಅಂಗಡಿ ಹೋಗಿ VIP ಕಾಚ ತಂದು ಮನೆಗೆ ಬಂದು…ಅಪ್ಪನಿಗೆ ಆ ಕಾಚ ಕೊಟ್ಟು ..” ಇನ್ನು ನನಗು ಈ ಕಾಚಕ್ಕು ಸಂಬಂದ ಇಲ್ಲ ಅಪ್ಪ ಅಂತ ಹೇಳಿ ನನ್ನ ಆಫೀಸ್ ಕೆಲಸವನ್ನು ಮತ್ತೆ ಶುರುಮಾಡಿಕೊಂಡೆ.

ಸ್ವಲ್ಪ ಸಮಯದ ನಂತರ ಮತ್ತೆ ಅಪ್ಪ ಬಂದ್ರು . ” ಲೋ ಮಗನೇ ಈ ಕಾಚ ನು ನನಗೆ ಆಗಲ್ವೋ ಅಂತ ಹೇಳಿದ್ರು. ” ನಂಗೆ ತಲೆ ಗಿರ್ ಅನ್ನಕ್ಕೆ ಶುರುವಾಯಿತು. ಇದು ವೊಳ್ಳೆ ಕಾಚ ಪುರಾಣ ಆಯಿತಲ್ಲ ಅಂತ ಪೆಚಾಡಿಕೊಂಡೆ. ಸಮಸ್ಯೆ ಇದದ್ದು ಚಿಕ್ಕದು. ನಾನು ತಂದಿದ್ದು VIP Frenchie. ಆದರೇ ಅಪ್ಪನಿಗೆ ಬೇಕಿದ್ದು VIP CHAMP.

ಇನ್ನೇನು ಮಾಡೋದು. ಸೀದಾ ಮತ್ತೆ ಅದೇ ಅಂಡಗಿಗೆ ಹೋಗಿ ಒಂದಷ್ಟು VIP CHAMP ಕಾಚ ತಗೊಂಡು ಬುರ್ರ್ ಅಂತ ಮನೆಗೆ ಬಂದೆ. ಆಹಾ ಅಪ್ಪನ ಮುಖದಲ್ಲಿ ದಿವ್ಯ ಕಳೆ ಕಾಣಿಸಿತು. ಅಷ್ಟರಲ್ಲಿ ಅಮ್ಮ ನನ್ನ ಕರೆದು… “ಲೋ ಆ ಹಳದಿ ಪ್ಲಾಸ್ಟಿಕ್ ಕವರ್ ನಲ್ಲಿ ನಿನ್ನ ಅಪ್ಪನ ಹಳೆಯ VIP CHAMP ಕಾಚ ಹಕಿಡ್ನಲ್ಲೋ ..ಎಲ್ಲ್ಲೋ ಇದೆ ಅದು? ಅಂಗಡಿಯಲ್ಲೇ ಬಿಟ್ಟು ಬಂದೆಯ ” ಅಂತ  ಕೇಳಿದರು.

ಇದು ಯಾವ ಕಾಚ ಮಾರಾಯ… ಹೊಸ ಎಂಟ್ರಿ ನಾ? ಅಂತ ನಾನು ಮತ್ತೆ ಯೋಚನೆ ಮಾಡಕ್ಕೆ ಶುರುಮಾಡಿದೆ. ಇವತ್ತು ಏಳೋ ಗಳಿಗೆ ಸರಿ ಇರಲ್ಲಿಲ್ಲವೇನೋ .. ಬರಿ ಕಾಚ ಕೆಲಸನೆ ಆಗೋಯಿತ್ತಲ್ಲಪ ಅಂತ ಮತ್ತೆ ಸೀದಾ ವಿಜಯನಗರಕ್ಕೆ ಅದೇ ಅಂಗಡಿಗೆ ಹೋದೆ.

ಸಾರ್ ನಮ್ ಅಪ್ಪನ ಕಾಚ ಇಲ್ಲೇ ಬಿಟ್ಟಿದ್ದೆ . ಸ್ವಲ್ಪ ದಯಮಾಡಿ ಕೊಡ್ತಿರ ಅಂದೇ . ಆ ಪುಣ್ಯಾತ್ಮ ಈ ಕಾಚವನ್ನೂ ಒಂದು ಬಾಕ್ಸ್ ನಲ್ಲಿ ಹಾಕಿ ಸೆಕೆಂಡ್ಸ್ ನಲ್ಲಿ ಮಾರಕ್ಕೆ ಪ್ರಯತ್ನ ಪಡುತ್ತಿದ್ದನೇನೋ …ಯಾರಿಗೆ ಗೊತ್ತು ….!! 😀

ವೊಟ್ಟಿನಲ್ಲಿ ಕೊನೆಗೆ ಅಪ್ಪನಿಗೆ ಅವರ ಕಾಚ ಸಿಕ್ತು ..ನನಗೆ ತಲೆ ತುಂಬ ಹುಳ ಬಿಡೋ ಈ ಕಾಚ ದಿಂದ ಮುಕ್ತಿ ಸಿಕ್ತು …ನಿಮಗೆ ಇದನ್ನ ಓದಿ ಹೊಟ್ಟೆ ಹುಣ್ಣಾಗೋವಷ್ಟು ಸಮಯ ಸಿಕ್ತು 🙂

 

ನಿಮ್ಮ,

ಕಾರ್ತಿಕ್

 

2 thoughts on “Kaacha dinacharane !!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s