ವೀಕೆಂಡ್ ಕಥೆ

ಒಂದು ಊರು. ಊರಿನಲ್ಲಿ ಒಂದು ಬಡ ಕುಟುಂಬ. ಕುಟುಂಬದಲ್ಲಿ ವಯಸ್ಸಾದ ಗಂಡ ಹೆಂಡತಿ ಇದ್ದರು. ಗಂಡನ ಹೆಸರು ಬೈರಪ್ಪ. ಹೆಂಡತಿಯ ಹೆಸರು ಲಕ್ಷ್ಮಿ. ಇವರಿಗೆ ಒಬ್ಬ ಮಗ. ಅವನ ಹೆಸರು ಕಿಶೋರ. ಗಂಡ ಕಾಡಿನಿಂದ ಕಟ್ಟಿಗೆ ತಂದು ಪೇಟೆಯಲ್ಲಿ ಅದನ್ನ ಮಾರಿ ತನ್ನ ಸಂಸಾರವನ್ನು ನಡೆಸುತ್ತಿದನ್ನು. ಕಿಶೋರ ಕಾಡಿನಲ್ಲಿ ಬೆಳದುದರಿಂದ ಬಹಳ ಮುಗ್ಧನಾಗಿದ್ದ. ಹೀಗಿರಬೇಕಾದರೆ ಒಂದು ದಿನ ಒಬ್ಬ ವ್ಯಾಪಾರೀ ಬೈರಪ್ಪನ ಮನೆಗೆ ಬಂದು, ಕಿಶೋರನ್ನ ಕೆಲಸಕ್ಕೆ ನನ್ನ ಜೊತೆ ಕಳಿಸಿಕೊಟ್ಟರೆ ತಿಂಗಳಿಗೆ ೩೦ ವರಾಹ ಕೊಡುವೆನೆಂದು ಹೇಳಿದನು. ಬೈರಪ್ಪ ಸ್ವಲ್ಪ ಹೊತ್ತು ಆಲೋಚಿಸಿ ಒಪ್ಪಿ ಕೊಂಡ.ಅವನು ಕಪಟಿ ವ್ಯಾಪಾರೀ ಆಗ್ಗಿದನ್ನು

ವ್ಯಾಪಾರೀ ಕಿಶೋರನನ್ನು ತನ್ನ ಅಂಗಡಿ ಕರೆದುಕೊಂಡು ಹೋದ. . ಹೀಗೆ ಒಂದು ವರುಷ ಕಳೆಯಿತು.ವ್ಯಾಪಾರೀ ಒಂದು ಸಲವು ಬೈರಪ್ಪನಿಗೆ ಒಂದು ಪೈಸೆಯನ್ನು  ಕೊಡಲಿಲ್ಲ. ಆದರೆ ಕಿಶೋರ ಮಾತ್ರ ಶ್ರದ್ದೇ ಭಕ್ತಿ ಇಂದ ತನ್ನ ಕೆಲಸ ಮಾಡುತಿದ್ದನ್ನು.

ಪ್ರತಿದಿನ ರಾತ್ರಿ ಈ ವ್ಯಾಪಾರೀ ಕಿಶೋರನಿಗೆ ಬಾಳೆಹಣ್ಣನ್ನು ಕೊಡುತಿದ್ದನ್ನು . ಒಂದು ದಿನ ರಾತ್ರಿ ಈ ದುಷ್ಟ ವ್ಯಾಪಾರೀ, ಬಾಳೆಹಣ್ಣಿಗೆ ವಿಷವನ್ನು ಕೊಟ್ಟನ್ನು. ಅದೃಷ್ಟವಶಾತ್ ಆ ಬಾಳೆಹಣ್ಣನ್ನು ವ್ಯಾಪಾರಿಯ ಮಗ ತಿಂದು ಸತ್ತನ್ನು. ವ್ಯಾಪಾರಿಯು ಆ ಸಾವನ್ನು ಕಿಶೋರನ ಮೇಲೆ ಹೊರಿಸಿದನು. ಸರಿ, ಈ ವಿಷಯ ಮಹಾರಾಜರಿಗೆ ತಲುಪಿತು.

ಮಹಾರಾಜ…ವ್ಯಾಪಾರೀ ಹಾಗೂ ಕಿಶೋರನನ್ನು ತನ್ನ ಆಸ್ಥಾನಕ್ಕೆ ಕರೆಸಿದನು. ಇಬ್ಬರಲ್ಲಿ ಯಾರು ನಿಜವಾದ ಅಪರಾಧಿಯೆಂದು ತಿಳಿಯಲು… ಮಹಾರಾಜ ಒಂದು ಚಿಕ್ಕ ಪರೀಕ್ಷೆ ಇಟ್ಟನ್ನು. ಇಬ್ಬರಿಗೂ ಒಂದು ದೊಡ್ಡ ಡಬ್ಬದಲ್ಲಿ ಬೆಣ್ಣೆಯನ್ನು ಕೊಟ್ಟು ಮರುದಿನ ತುಪ್ಪವನ್ನು ಮಾಡಿ ತರಬೇಕೆಂದು ಆದೇಶಿಸಿದನು.

ಇಬ್ಬರು ಮರುದಿನ ಅದೇ ಡಬ್ಬಿಯಲ್ಲಿ ತುಪ್ಪವನ್ನು ತಂದು ರಾಜನ ಮುಂದೆ ಇಟ್ಟರು. ರಾಜನು ಆ ಡಬ್ಬಿಯನ್ನು ಒಮ್ಮೆ ಪರಿಶಿಲಸಿ ವ್ಯಾಪಾರಿಯನ್ನು ಬಂಧಿಸಿದನು. ಆಲ್ಲಿ ನೆರದ ಜನರಿಗೆ ಅಚ್ಚರಿಯೋ ಆಚ್ಚರಿ. ರಾಜ ಹೇಗೆ ಮತ್ತು ಯಾಕೆ ವ್ಯಾಪಾರೀಯನ್ನು ಕೊಲೆಗಾರ ಎಂದು ಆದೇಶಿಸಿದರು??? . ಜನರ ಮನಸನ್ನು ಅರಿತವರಂತೆ ರಾಜ ಹೇಳಿದನು. “ನಾನು ತುಪ್ಪದ ಡಬ್ಬದಲ್ಲಿ ೧೦ ಚಿನ್ನದ ನಾಣ್ಯ ಗಳನ್ನು ಹಾಕ್ಕಿದ್ದೆ. ಕಿಶೋರನ ಡಬ್ಬದಲ್ಲಿ ಆ ಎಲ್ಲ ೧೦ ನಾಣ್ಯಗಳನ್ನು ನೋಡಿದೆ. ಆದರೆ ಆ ಕಪಟಿ ವ್ಯಾಪಾರೀಯ ಡಬ್ಬದಲ್ಲಿ ಇದ್ದದ್ದು ಬರಿ ೯ ನಾಣ್ಯಗಳು. ಅಲ್ಲಿಗೆ ಯಾರು ಸತ್ಯರು ಮತ್ತು ಯಾರು ಕಳ್ಳರು ಅಂತ ಅನಿಸುವುದಿಲ್ಲವ್ವೇ ? 🙂 …

ರಾಜನ ಬುದ್ಡಿ ಕೌಶಲ್ಯಗಳನ್ನು ನೋಡಿ ಜನರು ಜೈ ಕಾರ ಕೂಗಿದರ.ನಂತರ ಆ ರಜ ನಮ್ಮ ಕಿಶೋರನನ್ನು ಮಂತ್ರಿ ಮಾಡಿ ತನ್ನ ಅರಮನೆಯಲ್ಲಿ ಇರಿಸಿದನು.
ಇಂತೀ,
ಕಾರ್ತಿಕ್

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s