ಮಾಂಟೊ ಕಥೆಗಳು

ಪ್ರೀತಿಯ  ನನ್ನ ಗೆಳೆಯ  ಜೈ ಕುಮಾರ್ ಇತ್ತೀಚಿಗೆ ನನಗೆ ಹಲವು  ಕಿರು ಪುಸ್ತಕಗಳ್ಳನ್ನ  ತಂದು ಕೊಟ್ಟರು. ಅದರಲ್ಲಿ  ಒಂದು ಪುಸ್ತಕದ  ಹೆಸರು ಮಾಂಟೊ ಕಥೆಗಳು . ಪುಸ್ತಕದ ಹೆಸರಲ್ಲೇ “ಕಥೆಗಳು” ಇತ್ತಲ್ಲ , ಅದನ್ನ ನೋಡಿ ನಾನು ಸಿಕ್ಕಾಪಟ್ಟೆ ಖುಷಿ ಪಟ್ಟೆ . ಏನಪ್ಪಾ ಇದು, ಒಂದು ಕೈ ನೋಡೇ ಬಿಡೋಣ ಎಂದು ಅಂದು ಕೊಂಡು ಓದಕ್ಕೆ ಶುರು ಮಾಡಿದೆ. ಸಮಯ ರಾತ್ರಿ ೧೦ :)…  ರಾತ್ರಿಯ ನೀರವ ಮೌನದಲ್ಲಿ , ತಂಪಾಗಿ ಬಿಸುವ ತಂಗಾಳಿಗೆ ನನ್ನ ಮೈವೊಡ್ಡಿ ಓದಕ್ಕೆ ಶುರು ಮಾಡಿದೆ.

ಮೊದಲನೆಯದಾಗಿ ನಾನು ಹೇಳಬೇಕಾದದ್ದು ಸಾದತ್ ಹಸನ್ ಮಾಂಟೊ   ಬಗ್ಗೆ ( ೧೧.೫.೧೯೧೨ – ೧೮.೧೧.೧೯೫೫) , ಒಳ್ಳೆಯವರು ಬಹು ಕಾಲ ಜೀವಿಸುವುದಿಲ್ಲವಂತೆ … ಕೇವಲ ೪೨ ವರುಷದಲ್ಲೇ ತಮ್ಮ ಜೀವನ ಪಯಣದ ಬಂಡಿಗೆ ಫುಲ್ ಬ್ರೇಕ್ ಹಾಕಿದ್ರು .  ಆದರೇ ಆ ಅಲ್ಪ ಕಾಲವದಿಯೆಲ್ಲೇ ಸುಮಾರು ೨೫೦ಕ್ಕೂ ಹೆಚ್ಚು ಸಣ್ಣ ಕಥೆಗಲ್ಳನ್ನು ಬರೆದಿದ್ದರು , ಹಾಗು ಹಲವಾರು ನಾಟಕ ಪ್ರಸಂಗಗಳ್ಳನ್ನು ಬರೆದಿದ್ದರು. ಮಾಂಟೊನ ಬಗ್ಗೆ ಸಂಪೂರ್ಣ  ಮಹಿತಿಯನ್ನು ನೀವು ಇಲ್ಲಿ ಕಾಣಬಹುದು http://en.wikipedia.org/wiki/Saadat_Hasan_Manto .

 

ಅದು ೧೯೪೮ ಸಮಯ. ದೇಶ ವಿಭಜನೆಗೊಂಡು ಪಾಕಿಸ್ತಾನ ಹಾಗು  ಹಿಂದುಸ್ತಾನ (ಭಾರತ) ದೇಶಗಳು  ಮೂಡಿದ ಸಮಯ. ಆಗ ನಡೆದ ಸತ್ಯ ಘಟನೆಗಳ ನೈಜ ದರ್ಶನವೇ ಮಾಂಟೊ  ಕಥೆಗಳು .

ಅಲ್ಲಿ ಒಬ್ಬ ಮುಸ್ಲಿಮ್ ಆಗಿರಬಹುದು ಇಲ್ಲ ಸಿಖ್ ಆಗಿರಬಹುದು. ಯಾರೇ ಆಗಿರಲಿ , ಅವರಿಗೆ ಬೇಕಾದ್ದದ್ದು ಹೆಣ . ತಮ್ಮ ಕೋಮಿನ ಜನರ ಬಿಟ್ಟು,ಅನ್ಯ ಕೋಮಿನ ಜನರ ಜೀವ ತೆಗೆಯುವುದು ಅವರಿಗೆ ಒಂತರ ಮೋಜಿನ ಸಂಗತಿ. ಕೆಲಸಕ್ಕೆಂದು ಮನೆ ಇಂದ ಹೊರಟ ಗಂಡನನ್ನು ನೆನೆಯುತ್ತ ಕಾಯುವ ಹೆಂಡತಿ, ಯೌವನಕ್ಕೆ ಇಳಿದಿರುವ ಮಗಳ ಬಗ್ಗೆ ಚಿಂತಿಸುವ ತಂದೆ/ತಾಯಿ. ಇವೆಲ್ಲರ ಮಧ್ಯೆ ನಾಳೆಯ ಜೀವನದ ಅನಿಶ್ಚಿಕತೆಯ ಚಿಂತೆಯೆಲ್ಲಿ ಮುಳಿಗಿರುವ ಮನೆಯ ಯಜಮಾನ . ಹೀಗೆ ಒಂದೇ ಎರಡೇ….. ಎಲ್ಲಿ ನೋಡಿದರು ರಸ್ತೆಯಲ್ಲಿ ರಕ್ತದ ಓಕುಳಿ …. ಅಂಗಡಿಗಲ್ಲಿ ಲೂಟಿ , ಹುಡುಗಿಯರ , ಮಹಿಳೆಯರ ಮಾನ ಬಂಗ …. ಹೇಗೆ… ನಮ್ಮ ದೇಶ ಹಾಗು ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಒಂತರ ಕೊಂಪೆಯಾಗಿ ಬದಲಾಗಿಬಿಟ್ಟಿತು .

ಒಂದು ಘಟನೆಯೆಲ್ಲಿ , ತನ್ನ ಮಗಳ ದೇಹ ಬೆಂಕಿಯ ಕೆನ್ನಾಲಿಗೆ ಸಿಕ್ಕಿ ದಘ ದಘ ಅಂತ ಸುಡುತ್ತಿದ್ದರು , ಅದನ್ನ ನೋಡಿ  ಏನು ಮಾಡಲಾಗದ ಅಸಾಹಯಕತೆ ಪರಿಸ್ಥಿತಿಯನ್ನು ನೆನೆದು ಅಳು ತಿದ್ದಲ್ಲು ಮೂಲೇಯಲ್ಲಿ ನಿಂತ ತಾಯಿ.

ಈ ಪುಸ್ತಕ ಓದಿದ ನಂತರ ನನ್ನ ಮನದಾಳದಲ್ಲಿ ಹುಟ್ಟಿದ ಪ್ರಶ್ನೆ ”  ನಾವು ( ಭಾರತ ಮತ್ತು ಪಾಕಿಸ್ತಾನ)  , ಇರೋದೇ ಹೀಗೆ  ನಾ ? “, ಅಲ್ಲ ನಾವ್ಯಾಕೆ ಜಾತಿ ,ದೇಶ , ಪಂಗಡ, ಹೀಗೆ ಕ್ಷುಲ್ಲಕ ಕಾರಣಗಳಿಗೆ ಹೊಡೆದಾಡುತ್ತೇವೆ ? ಈ ಘಟನೆ ನಡೆದು ೬೦ ವರುಷ ಆದಾರು, ನಾವು ಮಾತ್ರ ಇನ್ನು ಆ ಜದತ್ತ್ವ ದಿಂದ ಹೊರ ಬಂದಿಲ್ಲವಲ್ಲ !!!…ನಾವು ನಾಮ್ಮ ಮುಂದಿನ ಪೀಳಿಗೆಗೆ ಕೊಡುವ ಸಂಸ್ಕೃತಿ ಇದೇನಾ? …. ಎಂದು ಕೊನೆ ಇವಕ್ಕೆಲ್ಲ ?…

A must book to read. Thanks Jai 🙂

 

ಇಂತಿ ನಿಮ್ಮ ,

ಕಾರ್ತಿಕ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s