ಶಿಕ್ಷಕರು ಅಂದ್ರೆ … ?

ಹೀಗೆ ಮೊನ್ನೆ ನಮ್ಮ ಜೈ ಕುಮಾರ್ ರವರು ಶಿಕ್ಷಕರ ಬಗ್ಗೆ ನಿನ್ನ ಅಭಿಪ್ರಾಯ ಏನೋ ಕಾರ್ತಿಕ್ ಅಂತ ಕೇಳಿದರು. ಹೌದಲ್ವಾ , ನಾನು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲ್ಲಿಲ್ಲ .  ಸರಿ , ಇದರ ಬಗ್ಗೆ ಹಾಗೆ ಯೋಚನೆ ಮಾಡುತಿರಬೇಕಾದರೆ ನನಗೆ ನನ್ನ ಬಾಲ್ಯದ ಶಾಲಾ ದಿನಗಳು ನೆನಪದವು.
ಆಗ ನಾನು ೫ನೇ ತರಗತಿಯೆಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅವರ ಹೆಸರು ಶಾರದ ಮಿಸ್ . ಅದು ನನ್ನು ಆ ಶಾಲೆಯ ಮೊದಲನೆಯ ದಿನ. ಗರಿ ಗರಿ ಬಟ್ಟೆ, ಪುಸ್ತಕ, ಬ್ಯಾಗು…ಹೀಗೆ  ನಾನು  ಸರ್ವಾಲಂಕಾರ ಮಾಡಿಕೊಂಡು ಶಾಲೆಗೆ ಹೊರಟೆ. ಅದೇನು ಗ್ರಹಚಾರವೋ ಗೊತಿಲ್ಲ , ಶಾಲೆಗೆ ಹೋಗುವ ಹುಮ್ಮಸುವಿನಲ್ಲಿ ,ನಾನು ನನ್ನ ಊಟದ ಡಬ್ಬಿಯನ್ನು ಬಸ್ಸಿನಲ್ಲಿ ಬಿಟ್ಟೆ. ಆದಾರೆ ನನಗೆ ಅದರ ಬಗ್ಗೆ ಗೊತ್ತಾಗಿದ್ದೇ ಸೂರ್ಯ ನೆತ್ತಿಗೆ ಏರಿದ ಸಮಯದಲ್ಲಿ. ಸರಿ ಏನು ಮಾಡೋದು. ಮೊದಲ ದಿನ. ಹೊಸ ಗೆಳೆಯರು ಇನ್ನು ಪರಿಚಯ ಆಗಿರಲಿಲ್ಲ . ಜೇಬಿನಲ್ಲಿ ಒಂದು ಪೈಸೇನು ಇಲ್ಲ. ಇಂಥ ನನ್ನ ದಟ್ಟ ದರಿದ್ರ  ಪರಿಸ್ಥಿತಿಯೆಲ್ಲಿ  ಯಾಕೋ ಗೊತ್ತಿಲ್ಲ , ಅಳು  ಬಂತು . ಒಂದು ಎರಡು ನಿಮಿಷದ ನಂತರ ಯಾರೋ ನನ್ನ   ಹೆಗೆಳ ಮೇಲೆ ಕೈ ಇಟ್ಟಾಂಗಾಯಿತು .

ಯಾರು ಅಂತ ನೋಡಿದಾಗ  , ಅಲ್ಲಿ ಇದ್ದದ್ದು ಅದೇ ಶಾರದ ಮಿಸ್. ತಮ್ಮ ನಗು ಮುಖದಿಂದ ವಿದ್ಯಾರ್ಥಿಗಳನ್ನು ಮಂತ್ರಮುಗ್ಧವನ್ನಾಗಿಸುತ್ತಿದ್ದರು. ನನ್ನ ಬಳಿ ಬಂದವರೇ , ತಮ್ಮ ಅಗಲವಾದ ಬ್ಯಾಗಿನಿಂದ ೨೦ ರುಪಾಯಿಗಳ್ಳನ್ನು ನನ್ನ ಕೈಗೆ ಇಟ್ಟರು. ನನಗೆ  “ಹೋಗಿ ಹೊಟ್ಟೆ ತುಂಬ ಊಟ ಮಾಡಿಕೊಂಡು ಬಾ ” ಅಂದರು. ಅವರ ಹೃದಯವೈಶಾಲತೆಯನ್ನು ನೋಡಿ ನಾನು ಅಂದ್ರೆ ಅವರ ಪ್ರೀತಿಯ ಶಿಷ್ಯನಾಗಿಬಿಟ್ಟೆ.  ಶಾರದ ಮಿಸ್ ಒಂಥರ ಆಯಸ್ಕಾಂತ ಇದ್ದಂತೆ . ಅವರ ತರಗತಿಯೆಲ್ಲಿ  ಯಾರು ಮಾತನಾಡುತ್ತಿರಲಿಲ್ಲ. ಯಾಕೆಂದರೆ ಅವರು ಪಾಠದ ಜೊತೆ ಹತ್ತು ಹಲವು ವಿಚಾರಗಳ್ಳನ್ನು ಚರ್ಚಿಸುತ್ತಿದ್ದರು. ಯಾಕೋ ನನಗು ಗೊತ್ತಿಲ್ಲ, ಆದರೆ ನನಗೆ ಅವರ ಬಗ್ಗೆ ಸ್ವಲ್ಪ ಹೆಚ್ಚೆ ಅಭಿಮಾನ ಇರುತ್ತಿತ್ತು.
ಅವರು ಯಾವಾಗಲು ಒಂದು ಮಾತನ್ನು ಹೇಳುತ್ತಿದ್ದರು. “ಹುಟ್ಟು….ಸಾವು  ..ಜೀವನವಲ್ಲ. ಈ  ಹುಟ್ಟು ಸಾವಿನ ಮಧ್ಯೆ ಒಂದು ಅರ್ಥ ಪೂರ್ಣವಾಗಿ ಜೀವಿಸುವ ಕಾಲವೇ ನಿಜವಾದ ಜೀವನ”.  ಎಷ್ಟು ಸೊಗಸಾದ ಮಾತು ಅಲ್ವ ?..

ಇನ್ನೊಂದು ಘಟನೆ ನಿಮ್ಮ ಹತ್ತಿರ ಹಂಚಿಕೊಳ್ಳಬೇಕೆಂದು ಬಯಸುವೆನು. ಅದು ೬ನೇ ತರಗತಿಯ  ಸಮಯ. ಹೇಗೆ ಕಲಿತೇನೋ ಗೊತಿಲ್ಲ. ಆದರೆ ನಾನು ಆಗ ಮನೆಯಿಂದ  ಹಣ ಕದಿಯುವ ಚಟಕ್ಕೆ ಬಿದ್ದೆ. ದಿನ ೧೦ ಅಥವ ೨೦ ರೂಪಾಯಿಗಳನ್ನು ತರುತ್ತಿದ್ದೆ. ಹಾಗು ಬೇಕಾರಿಯೆಲ್ಲಿ ಸಿಗುವ ತಿನಸುಗಳ್ಳನ್ನ ತಿನ್ನುತ್ತಿದ್ದೆ. ಇದು ಸುಮಾರು ಒಂದು ತಿಂಗಳು ನಡೆಯಿತು. ಒಂದು ದಿನ ಹೀಗೆ ತಿನ್ನುತ್ತಿರಬೇಕಾದರೆ ಆಕಸ್ಮಿಕವಾಗಿ ಅದೇ ಸಮಯದಲ್ಲಿ ಶಾರದ ಮಿಸ್ ಕೂಡ ಅದೇ ಬೇಕರಿಗೆ  ಬಂದ್ರು . ಅವರು ಸುಮಾರು ಒಂದು ತಿಂಗಳಿನಿಂದ ನನ್ನ ಚಲನವಲನಗಳನ್ನ  ಗಮನಿಸುತ್ತಿದ್ದರು ಎಂದು ನನಗೆ ಗೊತ್ತೇ ಇರಲಿಲ್ಲ. ಸೀದಾ ಬಂದವರೇ ನನ್ನನ್ನ ಅವರ ಕ್ಯಾಬಿನ್  ಒಳ್ಳಕ್ಕೆ ಕರೆದುಕೊಂಡು ಹೋದರು.
“ನೋಡು ಕಾರ್ತಿಕ್, ನಾನು ಸುಮಾರು ಒಂದು ತಿಂಗಳಿನಿಂದ ನಿನ್ನನ್ನ ನೋಡುತ್ತಿದ್ದೆನೇ , ನಿಜ ಹೇಳು… ಯಾಕೆ ನೀನು ದಿನ ಬೇಕರಿಗೆ ಬಂದು ಆ ಹಾಳು ತಿನಿಸುಗಳನ್ನ ತಿನ್ನುತೀಯ ?…ನಿಜ ಹೇಳು ಎಷ್ಟು ದುಡ್ಡು ಕೊಡುತ್ತಾರೆ ನಿನ್ನ ಅಪ್ಪ ಅಮ್ಮ? … ನೀನು ಅದೇ ದುಡ್ಡನ್ನ ಜೋಪಾನವಾಗಿ ಕೂಡಿಸಿ ಇಟ್ಟರೆ ಮುಂದೆ ಒಂದು ಸುಂದರವಾದ ಪುಸ್ತಕವನ್ನು ಪಡೆಯ ಬಹುದಲ್ಲವೇ? … ಹೇಳು ಕಾರ್ತಿಕ್..ಯಾಕೆ ಮೌನವಾಗಿದ್ದೀಯ ?..” .ನಾನು ಖಂಡಿತ ಈ ಸಂದರ್ಭ ಬರುತ್ತದೆಯೆಂದು ಕನಸಿನಲ್ಲು ಎಣಿಸುತ್ತಿರಲಿಲ್ಲ. ಆದ್ದದು ಆಗಲಿ ಎಂದು ನಿಜವನ್ನೇ ಹೇಳಿದೆ. ” ಮಿಸ್ , ದಯವಿಟ್ಟು ಕ್ಷಮಿಸಿ. ನಾನು ಮನೆ ಇಂದ ದಿನ ೧೦ ಅಥವಾ ೨೦ ರೂಪಾಯಿ ಕಡಿಯುತ್ತಿದ್ದೆ. ಯಾಕೆ ಮಾಡ್ಡುತ್ತಿದ್ದೇನೆ ಎಂದು ನನಗೆ ಗೊತಿಲ್ಲ ಮಿಸ್  ಎಂದೆ. “.   ಶಾರದ ಮಿಸ್ ಅಂದು ನನಗೆ  ಒಂದು ಮಾತನ್ನು  ಕೊಡಲು ಹೇಳಿದರು. ಇನ್ನೂ ಎಂದು ನನ್ನ ಜೀವನದಲ್ಲಿ ಕಧಿಯೋದಿಲ್ಲ , ಆ ಬಗ್ಗೆ ಆಲೋಚನೆ ಕೂಡ ಮಾಡೋದಿಲ್ಲ ಎಂದು ಪ್ರಾಮಾನಿಸ ಬೇಕೆಂದು ಹೇಳಿದರು.ಅದರಂತೆಯೇ ಇಂದು ಕೂಡ ನಾನು ಅವರ ಮಾತನ್ನು ಚಾಚೂ ತಪ್ಪದ್ಡೆ ಪಾಲಿಸಿ ಕೊಂಡು ಬರುತಿದ್ದೇನೆ.

ಈಗ ನೀವು ಹೇಳಿ..ನಿಮ್ಮಲ್ಲಿ  ಇಂತಾ ಹಲವಾರು ಉದಾಹರಣೆಗಳು ಇವೆಯ? .. ಇದ್ದರೇ ಖಂಡಿತ  ಹಂಚಿ ಪ್ಲೀಸ್ 🙂

ಇಂತಿ,

ನಿಮ್ಮ ಕಾರ್ತಿಕ್

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s