ವಂಡರ್ ಆದೆ ವೆಂಡರ್ ಕಣ್ಣು ಓದಿ

ಪ್ರೀತಿಯ ಶಿವು  , ಒಂದು ಸುಂದರವಾದ ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರೇ ವೆಂಡರ್ ಕಣ್ಣು.  ಶಿವುರವರನ್ನ ನನಗೆ ಪರಿಚಯಿಸಿದವರು ನನ್ನ ಮೇಷ್ಟ್ರು ನವೀನ್ ಸಾರ್ . ಅದು Indian Institute of World Culture ನಲ್ಲಿ ಪ್ರಕಾಶ್ ಹೆಗಡೆರವರ ಹೆಸರೇ ಇಲ್ಲ ಅನ್ನೋ ಪುಸ್ತಕ ಬಿಡುಗಡೆ ಕಾರ್ಯಕ್ರಮ . ಆಗ ಹಲವು ಬ್ಲಾಗ್ ಗೆಳೆಯರನ್ನು ನಾವೀನ್ ಸಾರ್ ನನಗೆ ಪರಿಚಯಿಸಿದರು . ಆಗ ಪರಿಚಯವಾಗಿದ್ದೆ ಶಿವು.

ಎಲ್ಲರಿಗು ಚಾರ್ಲಿ  ಚಾಪ್ಲಿನ್ ನ ಪರಿಚಯವಿರುತ್ತದ್ದೆ . ಆದರೇ ಚಾರ್ಲಿ ಚಾಪ್ಲಿನ್ ನಿಗೆ ಎಲ್ಲರ ಪರಿಚಯ ಇರುವುದಿಲ್ಲ. ಆದೇ ರೀತಿ  ನನಗೆ ಶಿವುರವರ  ಪರಿಚಯ ಇದೆ. ಆದರೇ ಅವರಿಗೆ ನನ್ನ ಪರಿಚಯ ಆಷ್ಟಾಗಿ  ಇರುವುದಿಲ್ಲವೆಂದು ಅಂದು ಕೊಂಡಿದ್ದನ್ನೆ . ಇರಲಿ, ಈಗ ವಿಷಯಕ್ಕೆ  ಬರೋಣ .

ಅವತ್ತು  ಭಾನುವಾರ ಅನ್ನಿಸುತ್ತೆ. ಮನೆಗೆ ಬುಕ್ ಪೋಸ್ಟ್ ಬಂತು . ಅದರಲ್ಲಿ ಬೆಚ್ಚಗ್ಗೆ ಕೂತ್ತಿತ್ತು ಶಿವು ರವರ ಎರಡು ಪುಸ್ತಕಗಳು. ಒಂದು ವೆಂಡರ್ ಕಣ್ಣು, ಮತ್ತೊಂದು ಗುಬ್ಬಿ ಎಂಜಲು .  ರಾತ್ರಿ ಊಟವಾದ ನಂತರ ಸುಮಾರು ೧೦ ಗಂಟೆಗೆ ವೆಂಡರ್ ಕಣ್ಣನ್ನು  ಓದಕ್ಕೆ ಶುರುಮಾಡಿದೆ . ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಸುಮಾರು ೨ ಗಂಟೆಗಳ ನಿರಂತರ ಓದಿನಲ್ಲಿ ಈ ಪುಸ್ತಕವನ್ನು ಮುಗಿಸಿದೆ.
ಶಿವುರವರು , ಈ ಪುಸ್ತಕದ ಮುಖಾಂತರ ಅವರ ವೃತ್ತಿ ಬದುಕಿನ ಹತ್ತು ಹಲವು ವಿಚರಗಳನ್ನು,  ಅಲ್ಲಿ ನಡೆಯುವ ಹಾಸ್ಯ , ಸಂತೋಷ , ದುಃಖ, ಸರಸ ಸಲ್ಲಾಪ… ನೋವು ,ನಲಿವು, ಸಿಟ್ಟು..ಸೆಡೆವು ..ವ್ಯಕ್ತಿಗಳು …ಹೀಗೆ ಪ್ರತಿಯೊಂದನ್ನು ತಮ್ಮ ಈ ಲೇಖನದಲ್ಲಿ ಬರೆದಿಟ್ಟಿದ್ದಾರೆ. ನನಗಂತು ಮಂಜನ ನಾಯಿ ಕಥೆ ಓದಿ ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು. ಅದೇ ರೀತಿ “ಮಡಚಿ ಎಸೆಯುವ ಕಲೆ ಓದಿ…ಬಲೆ ಬಲೆ ಅನ್ನಿಸಿತು. ಹಾಗೆ ಕರೆಂಟ್ ಶಾಕ್  ಘಟನೆ ಅಂತು ಸೂಪರ್. ಪಾಪ ಶಿವು.. ಯಾರ್ ಯಾರ್ ಕೈನಿಂದ ಶಾಕ್ ಹೊಡಿಸ್ಕೊಂಡ್ರೋ ಅಂತ ಈಗ ನನಗೆ ಯೋಚನೆ ಆಗ್ತಾ ಇದೆ 🙂
ಅದೇ ರೀತಿ ಚನ್ನಗಿರುವವರನ್ನು ಕಂಡರೆ ..ದೇವರಿಗೂ ಹೊಟ್ಟೆ ಕಿಚ್ಚಂತೆ …ಓದಿ…ಮನಸಿಗೆ ಬಹಳ ಬೇಜಾರು ಆಯಿತು. ವಯಸ್ಸಾದ ತಂದೆ ತಾಯಿಗಳ್ಳನ್ನ ಬಿಟ್ಟು ದೂರದ ಊರಿಗೆ ಹೋಗಿ ಕೆಲಸ ಮಾಡುವ ಮಕ್ಕಳು … ತಮ್ಮ ತಮ್ಮ ಜೀವನದ ಚಕ್ರದಲ್ಲಿ ತಮ್ಮ ತಂದೆ ತಾಯಿಗಳ್ಳನ ಕಾಟಚಾರಕ್ಕೆ ಎಂಬಂತೆ  ಬಂದು ನೋಡಿಕೊಂಡು ಹೋಗುವ ಆ ಮಕ್ಕಳು ……. ಕೊನೆಗೆ   ಆ ಹಿರಿಯರ  ಅಂತ್ಯ ಕಾಲದಲ್ಲಿ ಕಾಡುವ ಮಕ್ಕಳ ಬಗೆಗಿನ  ವ್ಯಾಕುಲ್ಯ  ಆ ದೇವರಿಗೆ ಚಂದ.

ಜೀವನ ಅಂದ ಮೇಲೆ, ಎತ್ತರ ..ತಗ್ಗು ..ಇರಲೆ ಬೇಕಲ್ವೆ ….ಇದು ಕೂಡ ಹಾಗೆ ಅನ್ನಿಸುತ್ತೆ. !!

ಇನ್ನು ತಡ ಯಾಕೇ 🙂  . ಹೋಗಿ ನಮ್ಮ ಪ್ರೀತಿಯ ಶಿವುರವನ್ನ ಇಲ್ಲಿ http://chaayakannadi.blogspot.in/ ಭೇಟಿ ಮಾಡಿ ….

ಅವರ ವೆಂಡರ್ ಕಣ್ಣು ಪುಸ್ತಕವನ್ನು ಕೊಂಡು ಓದಿ …ಆನಂದಿಸಿ.

ನಿಮ್ಮ,

ಕಾರ್ತಿಕ್

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s