ಮಾರುಕಟ್ಟೆ ಇಂದ ಮನೆಯತನಕದ ಪಯಣ

ಹೀಗೆ ಮೊನ್ನೆ ಆಫೀಸಿನಲ್ಲಿ ಕೆಲಸ ಬಹಳ ಇದ್ದುದ್ದರಿಂದ ಮನೆಗೆ ಸ್ವಲ್ಪ ತಡವಾಗಿ ಹೊರಟೆ. ತುಂತುರು ಮಳೆ ಬರುತ್ತಿದ್ದರು ಅದನ್ನು ಲೆಕ್ಕಿಸದೆ ಸೀದಾ  ಬೆಳನ್ದೂರಿನಿಂದ ಮಾರ್ಕೆಟ್ ಗೆ ಬಂದೆ. ಮಾರ್ಕೆಟ್ನಿಂದ ನಮ್ಮ ಮನೆಯ ಕಡೆ ಹೋಗೋವ ಒಂದು ಬಸ್ಸು ಸಿಕ್ತು. ಹೇಗೋ ಒಂದು ಸೀಟು ಸಿಕ್ತು ಅನ್ನಿ .ಎಲ್ಲ ಪೂರ್ವಜನ್ಮದ ಪುಣ್ಯ. ಇಲ್ಲ ಅಂದ್ರೆ ನಮ್ ಬೆಂಗಳೂರಿನಲ್ಲಿ , ಅದು ಮಾರ್ಕೆಟ್ ನಲ್ಲಿ ಸೀಟು ಸಿಗೋದು ಅಂದ್ರೆ  , ಮೊಳ ಹೂವಿಗೆ ೨ ರುಪಾಯಿ ಸಿಕ್ಕಾನ್ಗಾಯಿತು .

ಸರಿ ಇನ್ನು  ಕಮ್ಮಿ ಅಂದ್ರು ಬರೋಬರಿ  ೪೦ ನಿಮಿಷ ಬೇಕು . ಮಾರ್ಕೆಟ್ ನಿಂದ ಮನೆಗೆ ಹೋಗಲಿಕ್ಕೆ. ಏನ್ ಮಾಡೋದು ಸ್ವಾಮಿ. ಕಾಯಲೇ ಬೇಕು… ಬೆಂಗಳೂರಿನಲ್ಲಿ ಸಂಯಮ ಇಲ್ಲ ಅಂದ್ರೆ ಬದುಕೋದು ಬಿಡಿ… ಉಸಿರಾಡೋದು ಕಷ್ಟನೆ.  ಅಂತು ಒಂದೈದು ನಿಮಿಷದ ನಂತರ ಡ್ರೈವರ್ ಮಾಮ… ದಮ್ ಹೊಡ್ಕೊಂಡು , ಕಾಪಿ ಕುಡ್ಕೊಂಡು ಬಂದ. ಅವ ಗಾಡಿ ನ ಸ್ಟಾರ್ಟ್ ಮಾಡಿದ್ದೆ ಮಾಡ್ದಿದು, ಅದೆಲ್ಲಿದ್ದರೋ ಜನ… ದಗ ಬಗ ಅಂತ ಹತ್ತಿದ್ದ್ರು . ಒಂದೇ ನಿಮಿಷ. ಅಷ್ಟೇ. ಹೊಸ ಪಿಕ್ಚರ್ ನ ಮೊದಲ ದಿನ , ಮೊದಲ ಶೋಗೆ ಇರುವ ಗದ್ದಲ ಹಾಗೆ ನಮ್ಮ ಗಾಡಿ  ಪೂರ್ತಿ ಗಲಾಟೆ ..ಗದ್ದಲ….  ಫುಲ್ ರಶ್.

ನಾನೋ, ಅಬ್ಬೆ ಪಾರಿ ಎಂತೆ ..ಏನೋ ಯೋಚನೆ ಮಾಡುತ್ತ ಕೊನೆಯ ಸೀಟಿನಲ್ಲಿ  ಕೂತೆ. ಆದರೇ ನನ್ನ ಮನಸು ಮಾತ್ರ ಬೇರೆ ಏನನ್ನೋ ಯೋಚನೆ ಮಾಡ್ತಾ ಇತ್ತು ಹೌದು, ನಾನು ಆ ಜಿನುಗುಡುತ್ತಿದ್ದ ಮಳೆಯನ್ನು ತದೇಕ ಚಿತ್ತ ದಿಂದ ನೋಡುತ್ತಿದ್ದೆ. ಅರೆ ಎನ್ನಪ್ಪ, ಇವನು ಮಳೆಯನ್ನು ನೋಡೇ ಇಲ್ವಾ ?..ಅಂತ ಕೇಳಬೇಡಿ. ಖಂಡಿತ ನೋಡಿದೀನಿ. ಆದ್ರೆ ಈಗ ಆಸ್ವಾದಿಸುಥಿದ್ದಿನಿ 🙂 . ಇತ್ತೀಚಿಗೆ ನಾನು ಎಲ್ಲ ವಿಷೆಯ ವನ್ನು ಸ್ವಲ್ಪ ಗಮನವಿಟ್ಟು ನೋಡೋದನ್ನ ಕಲಿಯುತ್ತಿದ್ದೇನೆ .

ಇರಿ, ನಾನು ಏನು ನೋಡಿದೆ…ನನ್ನ ಆಲೋಚನೆ ಏನಿತ್ತು…ಅಂತ ಹೇಳ್ತಿನಿ ..ಕೇಳಿ.

ನನ್ನ ಪಕ್ಕದಲ್ಲಿ ಕುಳಿತಿರುವ  ಹುಡುಗ…ಬಹಳ ಖುಷಿಯಾಗಿದ್ದಾನೆ ಅಂತ ಅನ್ಸುತೆ. ಯಾಕೆ ಗೊತ್ತ..ಸುಮ್ಮನೆ ಮೊಬೈಲ್ ನೋಡಿ ಅವಗವಾಗ ನಕ್ತಿರ್ತಾನೆ . ಬಹುಶ ಪ್ರೀತಿಯ ಹುಡುಗಿಯ ಮೆಸೇಜ್ ಇರಬಹುದೇನೋ. ಹಾ… ಅಲ್ಲಿ ನೋಡಿ..ನನ್ನ ಮುಂದೆ ಕುಳಿತಿರುವ ಮಧ್ಯವಯಸಿನ typical  middle  ಕ್ಲಾಸ್ ಫ್ಯಾಮಿಲಿ ಇಂದ ಬಂದಿರೋ ಆಸಾಮಿ. ಬಹುಶ ಅವನ ಮನೆಯಲ್ಲಿ ಕಷ್ಟಇರದೇನೋ. ಹಾಕಿರೋದು..ಇಸ್ತ್ರಿ ಇಲ್ದೆ ಇರೋ ಬಿಳಿ ಬಟ್ಟೆ. ಎಲ್ಲೊ ಯಾವುದೊ ಪ್ರೈವೇಟ್ ಕಂಪನಿಯಲ್ಲಿ ಕ್ಲೆರ್ಕ್  ಆಗಿ ಕೆಲಸ ಮಾದುತ್ತಿರಬಹುದೇನೋ . ಮಕ್ಕಳ ವಿದ್ಯಾಬ್ಯಾಸ… ಸಂಸಾರದ ಹೊಣೆ…ಹೆಂಡತಿಯ ಬೈಗುಳ..ಬಹುಶ ಇವೆಲ್ಲದರಿಂದ ಅವನ ತಲೆ ಕೂದಲು ಬೆಳ್ಳಗಾಗಿರಬೇಕು. ಪಾಪ ..ತನ್ನ ತಲೆಯನ್ನು ಕಿಟಕಿಯ ವಶಕ್ಕೆ ಬಿಟ್ಟು ಹಾಯಾಗಿ ಮಲಗ್ಗಿದ್ದಾನೆ.

ಅದೋ ಬಂತು ನೋಡಿ ಬಸ್ ಸ್ಟ್ಯಾಂಡ್. ಅರೆ ಅರೆ …  ಯಾರ್ ಇಕೆ? ಬಿಳಿ ಚುಡಿಧರ್.. ಕಪ್ಪು ಚಪಲ್ಲಿ. ಕೈಲಿ ಒಂದು ಕೊಡೆ. ಆ ಕೊಡೆ ಇಂದ ಹನಿ ಹನಿ ಯಾಗಿ ಬೀಳುತ್ತಿರುವ ನೀರು ಅವಳ ಕೈ ಸೋಕಿ ನೆಲ ಸ್ಪರ್ಶಿಸುತಿದೆ. ಕಣ್ಣಿಗೆ ಕಾಡಿಗೆ .. ಕೈಗೆ  ಬಳೆ. ಕತ್ತಿನಲ್ಲಿ ಒಂದು ಸಿಂಪಲ್ ಚೈನ್. ದುಂಡು ಮುಖ. ಅಗಲ ಹಣೆಬೊಟ್ಟು .. ಕೆಂಪು ನೈಲ್ ಪಾಲಿಶ್… ಅಬ್ಬ..ನೀಲಿ ಬ್ಯಾಗ್. ಏನಿರಬಹುದು ಈ ಕೆಯ  ಹೆಸರು.. ???… ಅಂಜಲಿ ?…ಲಕ್ಷ್ಮಿ?… ಸುಕನ್ಯ?… ಛೆ ಛೆ…ಇಲ್ಲ ಇಲ್ಲ..  ಈಗನ ಜನ    ಅಂತ ಹೆಸರನ್ನ… ಬಹುಶ….ಪಾಲಿ…ಪಿಂಕಿ…..ರಿಯ….ಜಲ.. ಈ ತರ ಇರಬಹುದೇನೋ… ಅಲ್ಲ….ಇಷ್ಟು ಹೊತ್ತಿನಲ್ಲಿ ಅದು ಈ ಮಳೆಯಲ್ಲಿ ಎಲ್ಲಿಗೆ ಹೊರಟಿರಬಹುದು..ಈ ಬಾಲೆ… ಪಾಪ .. ಕಾಲೇಜು .. ಮನೆಪಾಠ ..ಇರಬಹುದೇನೋ. ಇಲ್ಲ…ಕೆಲಸಾನು ಮಾಡುತಿರಬಹುದೇನೋ…ಇರಲಿ.. ದೇವರು ಒಳ್ಳೇದು ಮಾಡಲಿ..ಅಂತು ಈ ಬಾಲೆ ಒಂದು ಕ್ಷಣಕ್ಕೆ ನನ್ನ ಹೃದಯವನ್ನು ಕದ್ದಿರೋದು ಮಾತ್ರ ನಿಜ… ..

ಅಂತು ಆ ಬಸ್ ಸ್ಟ್ಯಾಂಡ್ ನಿಂದ ಬಸ್ ಮುಂದುವರಿತು…ತನ್ನ ಗಮ್ಯ ಸೇರಲು. ಯಾಕೋ ನಿರ್ವಾಹಕ…ಮಾತ್ರ ಎಲ್ಲರ ಮೇಲು  ರೇಗಾಡುತ್ತಿದ್ದಾನೆ. ಏನಿರಬಹುದು?… ದಿನದ ಮಾಮೂಲಿ collection ಆಗಲಿಲ್ಲವೇನೋ 🙂 …

ಒಹ್ ಕೊನೆಗೂ ಇಷ್ಟು ಬೇಗ ಬಂತ ನನ್ನ ಸ್ಟಾಪ್ ?… ಒಹ್ ಸಾರೀ ಫ್ರೆಂಡ್ಸ್…ಮಳೆ ಸ್ವಲ್ಪ ಜೋರಾಗಿ ಬೀಳುತ್ತಿದೆ.. ಮನೆಯಲ್ಲಿ ಅಪ್ಪ ಅಮ್ಮ ನನ್ನ  ಬರುವಿಕೆಗೆ ಕಾಯುತ್ತಿದ್ದಾರೆ…ಓಡಬೇಕು.. ಮುಂದೆ..ಯಾವಾಗಲಾದರೂ ಸಿಗೋಣ… ಬಸ್ಸಿನ ಕಥೆ ಇನ್ನು ಇದೆ…ಸಿಕ್ಕಾಗ ಇನ್ನು ಒಂದಷ್ಟು ವಿಷೆಯ… ನಿಮ್ಮೊಂದಿಗೆ ಹಂಚಿಕೊಳ್ತೀನಿ , ಅಲ್ಲಿಯ ತನಕ ಬೈ ಬೈ.

ಇಂತಿ ,

ಕಾರ್ತಿಕ್

Advertisements

7 thoughts on “ಮಾರುಕಟ್ಟೆ ಇಂದ ಮನೆಯತನಕದ ಪಯಣ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s