ನಿಮ್ಮ ಪ್ರತಿಜ್ಞೆ ಈ ದೀಪಾವಳಿಗೆ !

ಎಲ್ಲರಿಗು ನಮಸ್ಕಾರ,

ಹೇಗಿದ್ದೀರಾ? ದೀಪಾವಳಿ ಹಬ್ಬ ಬಹಳ ಜೋರಾಗಿದೆ ಅಂತ ಕಾಣುತ್ತೆ  ! ಇರಲಿ ಇರಲಿ , ಸಂತೋಷ. ಈ ದೀಪಾವಳಿ ನಿಮಗೆಲ್ಲರಿಗೂ ಸುಖ ಶಾಂತಿ ಕೊಡಲೆಂದು ನಾನು ಆ ಭಗವಂತನನ್ನು ಪ್ರಾರ್ತಿಸುವೆ. ಅಂದ ಹಾಗೆ, ಈ ದೀಪಾವಳಿಗೆ ನೀವು ಯಾವ ಪ್ರತಿಜ್ಞೆಯನ್ನು ತೆಗೆದು ಕೊಂಡಿರಿ? ನಾನು ಯಾಕೆ ಹೀಗೆ  ಕೆಳುತಿದ್ದೆನೆಂದರೆ ,ಬಹುಪಾಲು ಜನರು ತಮ್ಮ ಹುಟ್ಟು ಹಬ್ಬದಿನದಂದು ” ನಾನು  ನಾಳೆಯಿಂದ ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ, ಅದು ಮಾಡುತ್ತೇನೆ ,ಇದು ಮಾಡುತ್ತೇನೆ… ಹೀಗೆ  ನಾ ನಾ ತರಹದ  ರೈಲುಗಳನ್ನೂ  ರೀಳುಗಟ್ಟಳೆ ಬಿಡ್ತಾರೆ.  ಆದರೇ ಒಂದು ಸಹ  ಕಾರ್ಯರೂಪಕ್ಕೆ  ತರುವುದಿಲ್ಲ .(ನನ್ನ ಹೆಸರು ಈ ಪಟ್ಟಿಯೆಲ್ಲಿ ಇದೆ 🙂 ) .”  ನಾನು ಸುಮಾರು ೧೦ ವರುಷದಿಂದ  ನನ್ನ ಹುಟ್ಟುಹಬ್ಬದಂದು ಹಾಳೆಗಟ್ಟಲೆ ಬುರುಡೆ ಬಿಟ್ಟಿದೆ…ಆದರೇ ಅದರ ಪರಿಣಾಮ ಮಾತ್ರ ದೊಡ್ಡ ಕುಂಬಳಕಾಯಿನೇ 🙂 .

ಹೀಗಿರಬೇಕಾದರೆ ಹೋದ ವರುಷ ದೀಪಾವಳಿ ದಿನದಂದು ನಾನು ಬರಿ ಒಂದೇ ….   Just one you know !!! ಪ್ರತಿಜ್ಞೆ ತಗೊಂಡೆ. ಏನಪ್ಪಾ ಅದು ಅಂತ  ಭೀಷ್ಮ ಪ್ರತಿಜ್ಞೆ ಅಂತ ಯೋಚನೆ ಮಾಡುತ್ತಿದ್ದೀರಾ ? ತುಂಬ ಕಷ್ಟದ್ದು ರೀ… ಅದನ್ನ ಚಾಚುತಪದ್ದೇ ದಿನ ಪಾಲಿಸಿಕೊಂಡು ಬರ್ತ್ತಿದ್ದಿನಿ .  ಇವತ್ತಿಗ್ಗೆ ಸರಿಯಾಗಿ ಒಂದು ವರುಷ ಆಯಿತು . ಮಧ್ಯ ಮಧ್ಯ ಅನಿವಾರ್ಯ ಕಾರಣಗಳಿಂದ  ಸ್ವಲ್ಪ  ದಿನ ತಪ್ಪಿಸಿಕೊಂಡರು…ಸುಮಾರು ೮೦ ಪ್ರತಿಶತ ಸಫಲತೆಯನು ಕಂಡಿದ್ದೇನೆ.  ಏನಪ್ಪಾ ಇವನು … ಸುತ್ತಿ ಬಳಸಿ … ಸಿಕ್ಕಾಪಟ್ಟೆ ತಲೆಗೆ ಹುಳ ಬಿಡ್ತಾ ಇದಾನೆ ಅಂತ ಅಂದುಕೊಳ್ತಿದ್ದೀರಾ ?  🙂 ಇರಲಿ , ಹೇಳ್ತೀನಿ ಕೇಳಿ.

ನಾನು ತೆಗೆದುಕೊಂಡ ಆ ದೊಡ್ಡ…. ಕ್ಲಿಷ್ಟ ಪ್ರತಿಜ್ಞೆ ಎಂದರೆ …. ಬೆಳಗಿನ ಜಾವ ೪ ೩೦ ಕ್ಕೆ ಏಳುವುದು ಮತ್ತು ದಿನ ವ್ಯಾಯಾಮ ಮಾಡುವುದು ಅರ್ಥ್ರಾತ್  Joggingಗೆ ಹೋಗುವುದು . !!! 🙂 …ನೋಡಿ ಇದನ್ನ ಹೇಳೋದಕ್ಕೆ  ಎಷ್ಟು ಸುಲಬ. ಆದರೆ ಅದ್ದನ್ನ ಕಾರ್ಯರೂಪಕ್ಕೆ ತರದು ಬಹಳ ಬಹಳ ಕಷ್ಟ. ನಂಬಿ…ತುಂಬ ಕಷ್ಟ 😦 . ಬೆಳಗಿನ ಜಾವದ ಆ  ಚುಮು ಚುಮು ಚಳಿಯಲ್ಲಿ …. ಮಲ್ಲಿಗೆ ಹೂವಿನಂತೆ ಮೆತ್ತಗೆ ಇರುವ ಹಾಸಿಗೆಯನ್ನು ಬಿಟ್ಟು  ಏಳುವುದು..  ಯೆಡಿಯುರಪ್ಪ ಸಿಯಮ್ ಕುರ್ಚಿ ಇಂದ ರಾಜೀನಾಮೆ ಕೊಟ್ಟು ಎದ್ದು ಬರುವುದು … ಎರಡು ಒಂದೇ. !!  🙂

ಆದರೇ ಇದರಿಂದ ನಾನು ಪಡೆದುಕೊಂದ್ದದ್ದೇನು   ಅಂತ ನೀವು ಕೇಳಿದರೆ …. ನನ್ನ ಉತ್ತರ… ಉತ್ತಮವಾದ ಆರೋಗ್ಯ. ಸುಮಾರು ಒಂದು ವರುಷದಿಂದ ಆ ದೇವರದಯದಿಂದ ನಾನು ವೈದ್ಯರ ಮುಖವನ್ನೇ ಕಂಡಿಲ್ಲ . ಆ ಬೆಳಗಿನ ಜಾವದಲ್ಲಿ… ಹಕ್ಕಿಗಳ ಕಲರವವನ್ನು ಆಸ್ವಾದಿಸಿದೆ … ದಿನ ನನಗೆ ಕಂಪೆನಿಕೊಡುವ ಅಜ್ಜನ ಸ್ನೇಹ  ಪಡೆದುಕೊಂಡೆ.ಮನೆಗೆ ಹಿಂದಿರಿಗುವ  ದಾರಿಯಲ್ಲಿ ಪೇಪರ್ ಹಾಕುವ ಹುಡುಗ ಗೋವಿಂದ…. ಹಾಗೆ ಹಾಲು ಮಾರುವ  ರಾಮಣ್ಣನ ಪರಿಚಯ ಮಾಡಿಕೊಂಡೆ…..

ಬುರ್ರ್ ಬುರ್ರ್ ಎಂದು ಚೀತಾದಲ್ಲಿ ಸಾಗುವ ಮಾಮ (ಪೋಲಿಸ್) ರವರ ಪರಿಚಯ ಮಾಡಿಕೊಂಡೆ…. ತಂಪಾದ ಗಾಳಿ ಬಿಸುವಾಗ …ಅದರ ನಿನಾದವನ್ನು ಆಸ್ವಾದಿಸುವ ಮನಸು ಬೆಳೆಸಿಕೊಂಡೆ. ಮುಂಜಾನೆ… ತರಕಾರಿಯ  ಮಣಭಾರ  ಮೂಟೆ ಹೊತ್ತ  ವ್ಯಾಪಾರಿಗಳ  ಗುರತು ಮಾಡಿಕೊಂಡೆ.. ಕೊನೆಯದಾಗಿ… ೫ ೩೦ ಕ್ಕೆ   ಕಾಕನ ಅಂಗಡಿ ಹೊಕ್ಕು ಬಿಸಿ ಬಿಸಿ ಹಬೆಯಾಡುವ ಟಿ ಯ ರುಚಿಯ ಗಮ್ಮತ್ತನ್ನು ಕಲಿತುಕೊಂಡೆ.  :).. ಇದು ನಾನು ಗಳಿಸಿದ ಒಂದೇ ಒಂದು ಪ್ರತಿಜ್ಞೆಯ ಫಲ… 🙂 ನಿಮ್ಮ ಜೊತೆ ಹಂಚಿಕೊಳ್ಳೋಕ್ಕೆ ಒಂತರ ಖುಷಿಯಾಗುತ್ತೆ :)..

ಈಗ  ನೀವು ಹೇಳಿ ..ಈ ದೀಪಾವಳಿಗೆ  ನೀವು ಯಾವ ಪ್ರತಿಜ್ಞೆಯನ್ನು ತೆಗೆದುಕೊಂಡಿರಿ 🙂 !!

ನಿಮ್ಮ,

ಕಾರ್ತಿಕ್ ಭಟ್

Posted in ಅವಿಭಾಗೀಕೃತ

4 thoughts on “ನಿಮ್ಮ ಪ್ರತಿಜ್ಞೆ ಈ ದೀಪಾವಳಿಗೆ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s