ಮೈಸೂರ್ ರಸ್ತೆಯ ಗಮ್ಮತ್ತು

ಪ್ರೀತಿಯ ಶಾಸಕರಿಗೆ ಮತ್ತು ಸಚಿವರಿಗೆ ನನ್ನ ನಮಸ್ಕಾರಗಳು. ಬೇಡ ಬೇಡ….ಒಂದು ಬೇಡ..ನಿಮ್ಮದ್ದೇನಿದ್ದರು ಕೋಟಿಗಳ ಮಾತು ಅಲ್ಲವೇ…ಸೊ …. ಕೋಟಿ ಕೋಟಿ ನಮಸ್ಕಾರಗಳು. ಅರೆ…ಸರಕಾರಿ  ಅಧಿಕಾರಿಗಳನ್ನೇ ಬಿಟ್ಟೆನಲ್ಲಪ್ಪ ….ಸಾರೀ ಸಾರೀ …ಅವರಿಗು ಕೋಟಿ ಕೋಟಿ ನಮಸ್ಕಾರಗಳು.

ದೇವರುಗಳೇ… ಏನ್ರೀ ನಿಮ್ಮ ಕರಾಮತ್ತು. ಆಹಾಹಾ…ಶಿವನೇ ಶಂಬುಲಿಂಗ….:).. ನಿಮೆಲ್ಲರಿಗು ಎಷ್ಟು ಸಾವಿರ ವಂದನೆಗಳು ಕೊಟ್ರು ಅದು ಕಡಿಮೆನೇ. ಯಾಕೆ ಗೊತ್ತ?…ನಿಮ್ಮ  ಕರಾಮತ್ತಿನಿಂದ ಇವತ್ತು ಬೆಂಗಳೂರಿನ ಮೈಸೂರು ರಸ್ತೆಯನ್ನು  ವಿಶ್ವದ ೮ನೆಯ ಅದ್ಭುತ ಸ್ಥಳಗಳಲ್ಲಿ ಸ್ಥಾನ ಪಡೆದು ಕೊಂಡಿದೆ. ಹಾಟ್ಸ್ ಆಫ್  ಟು ಯು ಸರ್ !!! ಮೈಸೂರ್ ರಸ್ತೆ ಅಂದ್ರೆ ಏನು ಸಾಮಾನ್ಯವೇ ?.. ಸರ್ ಯಮ್ ವಿಶ್ವೇಶ್ವರಯ್ಯ ನವರು ಇವತ್ತು ನಮ್ಮೊಂದಿಗೆ ಇದ್ದಿದ್ದರೆ ಆ ರಸ್ತೆಯನ್ನು ಚತುಷ್ಪತವನ್ನಾಗಿ ಮಾಡಿ , ಸವಾರರಿಗೆ ಬೇಸರವನ್ನುಂಟು ಮಾಡುವರು.!! ಏನಪ್ಪಾ ಇವನು ಹೀಗೆ ಹೇಳುತ್ತಿದ್ದಾನೆ ಅಂತ ಯೋಚನೆ ಮಾಡುತ್ತಿದ್ದಿರ?..ಇಲ್ಲಿ ನೋಡಿ,

ಮೈಸೂರು ರಸ್ತೆ ಅಂದರೆ …..ಹೊಂಡಗಳ್ಳಲ್ಲಿ ರಸ್ತೆಯೋ , ರಸ್ತೆಯಲ್ಲಿ  ಹೊಂಡವೊ ಎನ್ನುವ  ಪ್ರಶ್ನೆಗೆ ಉತ್ತರ ದೊರಕದ ಮಾರ್ಜಾಲ ಪ್ರಶ್ನೆ. ಆ ರಸ್ತೆಯನ್ನು ನೋಡಿದರೆ ನನಗನ್ನಿಸುವುದು ಹೀಗೆ ,

ಮನಸೆಲ್ಲ ಪುಳಕ,

ಮೈಯೆಲ್ಲಾ ಮಣ್ಣಿನ ಜಳಕ,

ತಿಳಿಯದು ಇದರ ಚಳಕ,

ಧಿಗ್ಬ್ರಹ್ಮೆ ಗೊಳಿಸುವುದು ನಾವಿಕ,

ನಗುವನು ಚಾಲಕ,

ಅಳುವನು ಮಾಲೀಕ ,

ಬೀಳುವನು ಬಾಲಕ,

ಹಾಕು ನೀ ಚಿಲಕ,

ಬಂದರೆ ನಾ ಇಡುವೆ ನಿನಗೆ ತಿಲಕ.(ಹೊಗೆಯ ತಿಲಕ)

ಸ್ವಾಮಿ ಜನರು ಸುಮ್ಮನೆ ದುಡ್ಡು ಕೊಟ್ಟು ವಂಡರ್  ಲಾ ಗೋ, ಅಥವಾ  “innovative film city” ಗೋ ಹೋಗಿ  ಆಲ್ಲಿರುವ “Roller coaster” ನಲ್ಲಿ   ಕೂತು ಮಜಾ ಮಾಡ್ಕೊಂಡು ಬರ್ತಾರೆ . ಅದೇ ಸ್ವಲ್ಪ ಮೈಸೂರ್ ರಸ್ತೆ ಕಡೆ ಬನ್ನಿ .. ಆ ರಸ್ತೆಯು ತನ್ನ  ಒಡಲಲ್ಲಿ ಪುಕಟ್ಟೆಯಾಗಿ ನಿಮಗೆ “Roller coaster”  ರೈಡು, ಆಮೇಲೆ “Thunder”  ರೈಡು  ಆಮೇಲೆ ಎತ್ತರ ಜಿಗಿತ  .. ಹೀಗೆ ಹತ್ತು ಹಲವು ರೈಡುಗಳ್ಳನು ಕೊಡುವಳು.

ಇನ್ನು ಕೆಲವರು ಹೇಳುವುದುಂಟು ” ಕುಡಿದರೆ ಕಣ್ಣು ಕೆಂಪಾಗುವುದು” … ಅದು ಶುದ್ದ ಸುಳ್ಳು….!! “ಮೈಸೂರು ರಸ್ತೆಯಲ್ಲಿ ಹಾಗೆ ಸುಮ್ಮನೆ  ೧೦೦ ಮೀಟರ್ ಕಣ್ಣು ಬಿಟ್ಟುಕೊಂಡು ನಡೆದರೆ ಸಾಕು… ನಿಮ್ಮ ಕಣ್ಣು ಕೆಂಪೇನು ಬಿಟ್ರೆ ಕಪ್ಪು ಸಹ ಆಗುವುದುಂಟು”… ಇದು ವಿಶೇಷ ಅಲ್ಲವೇ?,,ಹೇಳಿ …. ! ಆಮೇಲೆ..ಹೆರಿಗೆಗೆ  ದೊಡ್ಡ ದೊಡ್ಡ ಆಸ್ಪತ್ರಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಕರುಣಾಳು ಮೈಸೂರು ರಸ್ತೆ ಆ ಪುಣ್ಯದ ಕೆಲಸವನ್ನು ಬಿಟ್ಟಿಯಾಗಿ ನಿಮಗೆ ಮಾಡಿಸಿ ಕೊಡುವಳು. ಆ ತುದಿನಿಂದ ಈ ತುದಿವರೆಗೆ ವಾಹನದಲ್ಲಿ ಚಲಿಸಿದರೆ ಸಾಕು ಹೆರಿಗೆ ಸುಸೂತ್ರವಾಗಿ ಜರುಗುವುದು. ಈಗ ಹೇಳಿ ಇದು ೮ನೆ ಅದ್ಭುತ ವಲ್ಲವೇ.

ಆಮೇಲೆ ಈ ರಸ್ತೆ ಯಲ್ಲಿ ಮ್ಯಾಜಿಕ್ ಗಳು ನಡೆಯೋದು  ಬಹಳ ಬಹಳ ಸಹಜ . ನೋಡಿ ನಿಮ್ಮ ಮುಂದೆ ಒಬ್ಬ ವ್ಯಕ್ತಿ ಇದಕ್ಕಿದ್ದಾಗೆ ಮಾಯಾ ಆದರೆ ಆಶ್ಚರ್ಯ ಪಡಬೇಡಿ. ಯಾಕೆ ಅಂದರೆ ಮುಂದಿನ ವ್ಯಕ್ತಿ ಮಾಯಾ ಆಗೋದು ನೀವೇ. ಯಾವ ಗುಂಡಿ ಅನ್ನೋದು ಮಾತ್ರ  Suspense . ಆ ಗುಂಡಿ ಯಲ್ಲಿ ಬಿದ್ದರೆ  ಜನುಮ ಪಾವನವಾಗುವುದರಲ್ಲಿ ಎರಡು ಮಾತಿಲ್ಲ  ..ಯಾಕೇ ಅಂದರೆ ಅವೆಲ್ಲವು ಸೇರುವುದು … ಬೆಂಗಳೂರಿನ ಕಣ್ಮಣಿ  ವೃಷಾಭಾವತಿ ಚರಂಡಿಗೆ  .  ಆಲ್ಲಿರುವ ಗುಂಡಿಗಳು  ಗಾತ್ರದಲ್ಲಿ ಬಹಳ ನಿಯತ್ತಿನವು. ಎಂದೂ  ತಾನು ಮೇಲು , ಕೀಳು ಎಂಬ   ಭೇದಭಾವ ಮಾಡುವುದಿಲ್ಲ.  ಮನುಷ್ಯ ಇರಲಿ  ಕಾರ್ ಇರಲಿ ಅಥವ ಬೈಕ್ ಇರಲಿ…. ಎಲ್ಲರು ಸರಾಗವಾಗಿ ಗುಂಡಿಯೊಳಕ್ಕೆ  ಹೋಗಬಹುದಷ್ಟು ದೊಡ್ಡದಿರುತ್ತದೆ .

ಇನ್ನು ಆ ರಸ್ತೆಯಲ್ಲಿ ನಡೆದರೆ ನೀವು  ಖಂಡಿತ ದಪ್ಪಗಾಗುವಿರಿ. ಹೇಗೆ ಅಂತಿರ ? ಧೂಳು ಸ್ವಾಮಿ , ಧೂಳು. ಒಂದು ವಾಹನ ಹೋದರೆ ಬುಗ್ ಎಂದು ಏಳುವ ಧೂಳು ಸೀದಾ ಸೇರೋದು ನಿಮ್ಮ ಬಟ್ಟೆ ಮೇಲೆ .. ಹೀಗೆ  ನೀವು ೫ ನಿಮಿಷ ನಿಂತುಕೊಂಡರೆ ೧ ಅಲ್ಲ ೨ kg ಯೆಷ್ಟು ತೂಕವನ್ನು  ಜಾಸ್ತಿಮಾಡಬಹುದು. ನೋಡ್ರಿ ನೋಡ್ರಿ…ಇಂತ ರಸ್ತೆ ಪಡೆದ ನಾವೇ ಭಾಗ್ಯವಂತರು…. ಈಗ ಹೇಳಿ ಇಂತ  ಸುಂದರವಾದ ರಸ್ತೆ .. ಬಹುಉಪಯೋಗಿ ರಸ್ತೆ ಕೊಟ್ಟ ನಮ್ಮ  ಸಚಿವರಿಗೆ  ಮತ್ತು ಶಾಸಕರಿಗೆ ಯಾವ ಉಡುಗೊರೆ ಕೊಡಬೇಕು?….

ಇಂತಿ,

ನಿಮ್ಮ ಕಾರ್ತಿಕ್ ಭಟ್

Advertisements

6 thoughts on “ಮೈಸೂರ್ ರಸ್ತೆಯ ಗಮ್ಮತ್ತು

  1. ಮೈಸೂರು ರಸ್ತೆಯಲ್ಲಿ ಸೀದಾ ಹೋದರೆ ಸಿಗುತ್ತೆ ಚಾಮುಂಡಿ ಬೆಟ್ಟ..ಅದರ ಮೇಲೆ ಇರುವುದು ಚಾಮುಂಡಿ…ರಕ್ತ ಬೀಜಾಸುರನನ್ನು ಕೊಳ್ಳಲು ದೇವಿ ಭ್ರಹ್ಮಾಂಡಕ್ಕೆ ನಾಲಿಗೆ ಚಾಚಿ ಅವನನ್ನು ಕೊಂಡಳು…ನಮ್ಮವರು ನಾಲಿಗೆ, ಕೈ, ಕಾಲು ಎಲ್ಲಾ ಚಾಚಿ ಗಂಟು ಮಾಡಿಕೊಂಡಿದ್ದಾರೆ ಅಷ್ಟೇ…ಸುಂದರ ಲೇಖನ…ಕಾರ್ತಿಕ್..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s