ಬಿಸಿ ಸುದ್ದಿಯ ಹಿಂದೆ ತಣ್ಣಗಾದ ಕಥೆಗಳು !

ನಮ್ ಸುದ್ದಿ ಮಾಧ್ಯಮ ನೋಡಿದರೆ ಅಳ ಬೇಕೋ ಅಥವ ನಗ ಬೇಕೋ ..ಒಂದು ಗೊತ್ತಾಗುತ್ತಿಲ್ಲ . ಯಾವುದೇ ಸುದ್ಧಿ ನೋಡಿದರು , ಒಂದು ಅಥವಾ ಎರಡು ದಿನ ಅದರ ಜಾಡು ಹಿಡಿದು ಸುದ್ದಿ ಮಾಡುತ್ತಾರೆ. ಅದಾದನಂತರ ಆ ದೇವರಿಗೆ ಗೊತ್ತು  ಆ ಸುದ್ಧಿಯ ಹಿಂದೆ ಮುಂದೆ ಏನು  ನಡೆಯುವುದೆಂತು.

ಈಗ ಕೆಳಕಂಡ ಸುದ್ದಿಗಳ ಕಥೆ ಏನಾಗಿದೆ ಅಂತ ನಿಮಗೇನಾದರೂ ಗೊತ್ತಾ??
೧) ಬಳ್ಳಾರಿ ಗಣಿ ಸ್ಕ್ಯಾಮ್ …ಅದರ ಕಥೆ ಈಗ ಏನಾಗಿದೆ?

೨)೨ ಜಿ ಸ್ಕ್ಯಾಮ್….. ಏನಾಯಿತು ನಮ್ ರಾಜನ ಕಥೆ
೩)ಸೀ ಡಬ್ಲ್ಯೂ ಜಿ ಸ್ಕ್ಯಾಮ್ ….. ಇನ್ನೂ ವಿಚಾರಣೆ ನಡೀತಾ ಇದೀಯ ?
೪)ನಿತ್ಯಾನಂದನ ಸೇವೆ ಈಗ ಎಲ್ಲಿಯವರೆಗೆ ಬಂತು?

೫)ಬೆಂಗಳೂರಿನ ಈಜಿಪುರ ಸ್ಲಮ್ ಜನಗಳ ಕಥೆ… ?ವಿವರ ಉಂಟೆ?
೬) ದಿಲ್ಲಿಯ ನಿರ್ಭಯಾಳ ಕಥೆ , ನಂತರ ಅದರ ವಿಚಾರಣೆ?
೭) ಅಫ್‌ಜ಼ಲ್ನನ್ನು ಅರಮನೆ (ಜೈಲ್)ಇಂದ ವೆಂದು  ಬಿಡುಗಡೆ ?

೮)ಭಾರತದ ಸೈನಿಕರನ್ನು ಕೊಂದ ಪಾಕಿಸ್ತಾನಕ್ಕೆ  ನಮ್ಮ ಸರಕಾರ ಕಲಿಸಿದ ಪಾಠ?

೯)ಓಸ್ವೈ ಮಾಡಿದ ಕೋಮುದ್ವೇಷ ಭಾಷಣದ ಬಗ್ಗೆ ಧಾಖಲಿಸಿದ ಪೋಲೀಸ್,  ಪ್ರಕರಣದ ವಿಚಾರಣೆ ಎಲ್ಲಿಯವರೆಗೆ ಬಂತು ?
೧೦) ಶಾಸಕ ಹಾಲಪ್ಪಾ, ರೇಣುಕಾ ರವರ ಲವ್ ಸ್ಟೋರೀ ಎಲ್ಲಿಯವರೆಗೆ ಬಂತು?

These were just a gist of examples. ಇದೇ ತರ ಎಷ್ಟೋ ಸುದ್ದಿಗಳು ನೀರಿನ ಬುಗ್ಗೆ ಯೆಂಥೆ ಬಂದು ಹೋಗುತ್ತವೆ. ಈಗ ನೀವು ಹೇಳಿ ಈ ಸಮಸ್ಯಕ್ಕೆ ಏನು  ಪರಿಹಾರ ಕಂಡು ಹಿಡಿಯಬಹುದು  ?

1 thoughts on “ಬಿಸಿ ಸುದ್ದಿಯ ಹಿಂದೆ ತಣ್ಣಗಾದ ಕಥೆಗಳು !

  1. ಹಿಂದಿನ ಕಾಲದಲ್ಲಿ ಮಳೆ ಬರಲಿಲ್ಲ ಅಂದರೆ…ಕೆರೆಗೆ ಹಾರ ಎನ್ನುವ ಪದ್ಧತಿ ರೂಡಿ ಇತ್ತು..ಅಂದರೆ ಕೆರೆಗೆ ಮುತ್ತೈದೆ, ಪತಿವ್ರತೆ ಹಾರಬೇಕಿತ್ತು…

    ಈಗ ಆ ಪದ್ಧತಿ ಸುದ್ಧಿ ಮಾಧ್ಯಮದಲ್ಲಿ ಇದೆ….ಸಮಸ್ಯೆಗಳಿಗೆ ಪರಿಹಾರ ಇರೋಲ್ಲ..ಪರಿ ಪರಿ ಹಾರ ಇರುತ್ತದೆ..ಅಂದ್ರೆ ಒಂದಾದ ಮೇಲೆ ಇನ್ನೊಂದು ಸುದ್ಧಿಯ ಹಿಂದೆ ಹಾರುತ್ತಾರೆ ಅಷ್ಟೇ..

    ಕಾರ್ತಿಕ್ ನೀವು ಹಿಡಿದೆತ್ತಿರುವ ಎಲ್ಲ ಸಮಸ್ಯೆಗಳಿಗೂ..ನಮ್ಮ ಮೊಮ್ಮಕ್ಕಳ ಮೊಮ್ಮಕ್ಕಳ ಕಾಲಕ್ಕೆ ಪರಿ”ಹಾರ” ಸಿಗುತ್ತದೆ

ನಿಮ್ಮ ಟಿಪ್ಪಣಿ ಬರೆಯಿರಿ