GombeGala Love

ಪ್ರೀತಿಯಲ್ಲಿ ಪ್ರೀತಿ ಇರಬೇಕು, ನೀರಿನಲ್ಲಿ ನೀರು ಇರಬೇಕು, ಹಂಗೆ ಈ ಬ್ಲಾಗ್ ನಲ್ಲಿ ತರಲೆ ಇರಬೇಕು.ಇದು ನನ್ನ ಫಿಲಾಸಫಿ ! :). ವಿಷೆಯ ಏನಪ್ಪಾ ಅಂದ್ರೆ , ಮೊನ್ನೆ ನಮ್ ಆಫೀಸಿನಲ್ಲಿ , ಸಂಭ್ರಮ ತಂಡದಿಂದ ರಕ್ತ ದಾನ ಶಿಬಿರ ಏರ್ಪಡಿಸಲಾಯಿತು 🙂 ಜನರಿಗೆ ಏನ್ ಅನ್ನಿಸಿತೋ ಏನೋ ಗೊತ್ತಿಲ್ಲ, ಒಟ್ನಲ್ಲಿ ನಾ ಮುಂದು , ತಾ ಮುಂದು ಯೆಂದು ತಂಡೋಪವಾಗಿ ಬಂದು ರಕ್ತ ಹರಿಸೇ ಬಿಟ್ರು.. ಅಯ್ಯೋ ಸಾರಿ… ರಕ್ತ ದಾನ ಮಾಡೇ ಬಿಟ್ರು :). ನಾನು ಆ ಸಂಭ್ರಮ ತಂಡದ ಒಬ್ಬ ಸಾಮಾನ್ಯ ಸದಸ್ಯ ,ಆದರೆ ಈಪಾಟಿ ಜನರನ್ನು ಕಂಡ ನನ್ನ ಮನಸಿಗೆ ಆದ ಸಂಭ್ರಮ ಅಷ್ಟಿಷ್ಟಲ್ಲ 🙂

ಕಥೆಗಳು ಹೊಡಿಬೇಡಪ್ಪ… ವಿಷಯಕ್ಕೆ ಬಾರೋ ಮಾರಾಯ.. ಅಂತ ನೀವು ಅಂದುಕೊಂಡರೆ… ಬಂದೆ…ಎರಡೇ ನಿಮಿಷ. ಪೀಠಿಕೆ ಹಾಕಿಬಿಡ್ತೀನಿ.ರಕ್ತ ದಾನ ಶಿಬಿರದ ಯಶಸನ್ನು ಆಚರಿಸಲು ಸಂಭ್ರಮ ತಂಡ ತನ್ನ ಎಲ್ಲ ಸದಸ್ಯರಿಗೆ ಒಂದು ಕನ್ನಡ ಸಿನಿಮವನ್ನು ತೋರಿಸಲು ನಿರ್ಧರಿಸಿತು. ಅದರಂತೆ ಮೊನ್ನೆ ನೋಡಿದ ಸಿನಿಮಾವೇ ಗೊಂಬೆಗಳ ಲವ್ .:)..

Gombegala Love

“ಈ ಸಿನಿಮ ಯಾವಾಗ ಬಂತು ಗುರು?” ಅಂತ ಯೋಚನೆ ಮಾಡ್ತಾ ಇದ್ದೀರಾ… ? Excuse Me.. ನಾನು ಅದೇ ಸ್ಟೇಟ್ ನಲ್ಲಿ ಇದ್ದೀನಿ . ಯಾವಾಗ ಬಂತು ಅಂತ ನನಗು ತಿಳಿದಿರಲಿಲ್ಲ… ಇದು ನನ್ ತಪ್ಪೋ… ಇಲ್ಲ..ನಿರ್ಮಾಪಕರ ವ್ಯಥೆಯೋ…. ಗೊತ್ತಿಲ್ಲ… ಒಟ್ನಲ್ಲಿ…ಬಿಡುಗಡೆ ಆದ ಸ್ಪೀಡ್ ನಲ್ಲೆ ಜನರು ಅದನ್ನ ಸೈಲೆಂಟ್ ಆಗಿ ಬಿಡುಗಡೆಗೊಳಿಸಿ (ಮುಕ್ತಿ) ಬಿಟ್ರು :(. ಸರಿ, ಅವತ್ತು ಗುರುವಾರ… ರಾಯರ ದಿನ.. ಕೆಲಸ ಮಾಡೋ ಮೂಡ್ ಇರಲ್ಲಿಲ್ಲ.ನೂರು ಬಗ್ ಫಿಕ್ಸ್ ಮಾಡಿದ್ರು ನೂರನೇ ಒಂದು ಬಗ್ ನಮ್ಮನ್ನ ಹಾಗೆ ಬಾ ಬಾ ಅಂತ ಕರಿತಾ ಇರುತ್ತೆ.. ಇದು ಒಂತರ ಮೆಗಾ ಸೀರಿಯಲ್ ಇದ್ದಂಗೆ. ಮುಗಿಯದ ಬಗ್ (ಅಕ್ಷಯ) ಪಾತ್ರೆ ! ಸೊ ಕೆಲಸ ಯಾವಾಗಲು ಇದ್ದಿದ್ದೆ ::). ನನ್ನ ಎರಡನೇ ಹೆಂಡತಿನ (LapTop) ಸೈಲೆಂಟ್ ಆಗಿ ಮಲಗಿಸಿ, ಅವಳನ್ನ ನನ್ನ ಬ್ಯಾಗ್ನಲ್ಲಿ ಕೂಡಿ ಹಾಕಿ ಸೀದಾ ಚಿತ್ರಮಂದಿರಕ್ಕೆ ಬಂದೆ. ಅಂದು ಬಿಲ್ಡಿಂಗ್ ೧೩ ನ ಆ ಒಂದು ಕೋಣೆ , ಅದೇ ಅಂದು ನಮಗೆ ಚಿತ್ರಮಂದಿರ ಆಗಿತ್ತು:)
ಸಮಯ ೪ .. ಜನ ಬಣ ಬಣ. ನಾನೋ ಅಬ್ಬೆ ಪಾರಿಯಂತೆ ಮೂಲೇಯಲ್ಲಿ ಕುಳಿತಿದ್ದೆ. ಆದರೆ ಕೇವಲ ೧೫ ನಿಮಿಷದಲ್ಲಿ ಫಾಸ್ಟ್ ಸೆಲ್ಲಿಂಗ್ ಅಂತೆ ಜನ ಬರತೊಡಗಿದರು. ಅಂತು ಉಪ್ಪು , ಉಪ್ಪಿನಕಾಯಿ , ಪಲ್ಲ್ಯ , ಕೋಸಂಬರಿ ಎಲ್ಲ ನಡಿತು(Introduction, sharing the success of the event 🙂 ) .. ೪ ೪೩ ಶುರು ಆಯಿತು ನೋಡಿ 🙂 ಮೊದಲು…ನಾನು ನಿದ್ದೆ ಮಾಡುತ್ತಿಲ್ಲ ತಾನೇ ಅಂತ ನನ್ನನ್ನೇ ಖಾತ್ರಿ ಮಾಡಿಕೊಂಡೆ.

ನನ್ ಪಕ್ಕ ಇದ್ದಿದ್ದು ಸೂಪರ್ ಹೀರೋ ಖನಿಜ್. ಅಣ್ಣಾವ್ರು ಫುಲ್ ಸೀರಿಯಸ್ ಆಗಿ ಚಿತ್ರ ನೋಡ್ತಿದ್ದ .. ನನ್ ಬಲಕ್ಕೆ ಇದ್ದಿದ್ದು ಸಂದೀಪ್. ಅವರೋ, ಖನಿಜಿನ ಮೊಬೈಲ್ ತಗೊಂಡು ಅವರದೇ ಲೋಕದಲ್ಲಿ ಇದ್ದರು. ಮತ್ತೆ ಸ್ಕ್ರೀನ್ ನ ಕಡೆ ಮುಖ ಮಾಡಿದೆ. ಹುಹು ಏನು ಅರ್ಥ ಆಗಲಿಲ್ಲ.. ಅಯ್ಯೋ ದೇವರೇ.. ಉಪೇಂದ್ರನ “A” ಅಂತ ಸಿನಿಮಾನೇ ತಕಮಟ್ಟಿಗೆ ಅರ್ಥ ಮಾಡ್ಕೊಂಡಿದ್ದೆ, ಆದರೆ ಈ ಸಿನಿಮ ಯಾಕೋ ಓವರ್ ದಿ ಬ್ರೈನ Transmission ಆಗ್ತಾ ಇದೆಯೇಲ್ಲಪೋ ಅಂತ ಅನ್ನಿಸಿತು. ಆಗ ನಮ್ ಖನಿಕ್ ಡಯಲಾಗ್ ನ್ನ ಹೊಡೆದ .. ” ಮಗ… ಮೂವಿ ಅರ್ಥ ಆಗ್ತಾ ಇದಿಯ.. ನನಗೆ , ನಾವು ಏನೋ ಮುಖ್ಯವಾದ ವಿಷೆಯ ಮಿಸ್ ಮಾಡಿಕೊಳ್ತಾ ಇದ್ದಿವಿ ಅಂತ ಅನ್ನಿಸಿತ ಇದೆ ” ಅಂದ. ನನಗೋ…ಯಾಕೋ ತಲೆ ಗ್ರರ್ ಅನ್ನಲಿಕ್ಕೆ ಶುರುವಾಯಿತು.

ಸರಿ , ಏನೇ ಆದರು ನೋಡೇ ಬಿಡೋಣ.. ಬಂದದ್ದು ಬರಲಿ…ದಿನ ಬೆಳಗ್ಗೆ ನಮ್ ಮ್ಯಾನೇಜರ್ ನ ಮುಖವನ್ನೇ ನೋಡ್ತಿನಂತೆ ಇನ್ನು ಈ ಮೂವಿ ಏನು ಮಹಾ ಅಂತ ದೈರ್ಯ ಮಾಡಿ ಕೊತುಕೊಂಡೆ. ಮಧ್ಯೆ ಮಧ್ಯೆ ಕಿವಿಗೆ ತಂಪಾದ ಹಾಡುಗಳಂತು ಬಂತು. ಅದಕ್ಕೆ ಯಾಕೋ ಇನ್ನು ಸ್ವಲ್ಪ ಸ್ಫೂರ್ತಿ ಬಂತು…. ಚಿತ್ರ ನೋದಕ್ಕೆ ! .. ಎಲ್ಲೊ ಒಂದು ಕಡೆ ವಾಯ್ಸ್ Synchronization ಇರಲಿಲ್ಲ ಅಂತನು ಅನ್ನಿಸಿತು. ಕಥೆ ಯಾಕೋ ಸಪ್ಪೆ ಇದೆಯಲ್ಲ ಅಂತ ಯೋಚನೆ ಬೇರೆ ಬಂತು”. ಖನಿಜ್ ಅಂತು “ಮಗ ಮೇಲ್ ಚೆಕ್ ಮಾಡಬೇಕು ಅಂತ ಲ್ಯಾಪ್ಟಾಪ್ ಬೇರೆ ಓಪನ್ ಮಾಡಿ ಕೆಲಸ ಮಾಡೋಕ್ಕೆ ಶುರುವಿಟ್ಟ” .. ಸಿಸ್ಕೋ ದಲ್ಲಿ “Parallel process” ಅಂದ್ರೆ ಇದೆ ಇರಬೇಕೇನೋ ಏನು ಅಂದುಕೊಂಡೆ.

ವಿರಾಮದ ನಂತರ ಕಥೆಯ ಟ್ವಿಸ್ಟ್ಯೇ ಬೇರೆ.. , ಚಿತ್ರ ವೇಗ ಪಡೆಯಿತು. ಎಷ್ಟು ವೇಗ ಅಂದ್ರೆ ನೈಸ್ ರೋಡ ನಲ್ಲಿ ಇನ್ನೋವಾದಲ್ಲಿ ಕಾರು ಹೋದಂಗೆ. ನನಗು ಯಾಕೋ ತುಂಬಾ ಇಷ್ಟವಾಗ ತೊಡಗಿತು. ಛೆ,ಇಂತ ಅದ್ಭುತವಾದ ಟ್ವಿಸ್ಟ್ ಕೊಟ್ಟ ನಿರ್ದೇಶಕರಿಗೆ ಮನಸಿನಲ್ಲೇ ಬಯ್ದೆನಲ್ಲ ಅಂತ ವ್ಯತೆ ಪಟ್ಟೆ. ಹುಟ್ಟು ಅಂಗವಿಕಲನಾದ ಹುಡುಗ ಮತ್ತು ಹುಡುಗಿ, ಹೀಗೂ ಸುಂದರವವಾದ ತಮ್ಮ ಪ್ರಪಂಚದಲ್ಲಿ ಇರಬಹುದಲ್ಲವೇ ಅಂತ ಅಚ್ಚರಿ ಪಟ್ಟೆ . ಅಮೃತ ದಂತ ಮನಸುಳ್ಳ ತಾಯಿ, ಆಕಸ್ಮಿಕ ವಾಗಿ ತೀರಿಕೊಂಡಾಗ, ಸಂಕಟ ಪಡುವ ಅವಳ ಮಗನ ಅಳವು , ಯಾಕೋ ನನ್ನ ಕಣ್ಣನೇ ತೇವವಾಗಿಸಿದವು.
ದುಡ್ಡು , ಒಳ್ಳೆ ಮನೆ , ಒಳ್ಳೆ ಹೆಂಡತಿ, ಕಾರ್ , ಬೈಕ್ Promotion… ಇವೆ ಲೈಫ್, ಇದೆ ಸಂತೋಷ ಯೆಂದು ಅಂದು ಕೊಂಡ ನನ್ನ ಬುದ್ದಿಇಲ್ಲದ ಮನಸಿಗೆ ಈ ಚಿತ್ರದ ಮುಖಾಂತರ ನಿರ್ದೇಶಕರು ಸರಿಯಾಗಿ ತಿವಿದರು. ಸಂತೋಷ ಇರೋದು ಅದನ್ನ ನೋಡುವುದರಲ್ಲಿ ಅದನ್ನ ಅನುಬವಿಸುವುದರಲ್ಲಿ ಅಂತ ಸೊಗಸಾಗಿ ಹೇಳಿ , ತೋರಿಸಿದ ಸಂತೋಷ್ ಗೆ (Director) ಒಂದು ದೊಡ್ಡ ನಮಸ್ಕಾರ . ಒಂದು Middle Class ಕುಟುಂಬದಲ್ಲಿ ನಡೆಯುವ ಪ್ರೀತಿ, ಸ್ವಾಭಾವಿಕವಾದು ಮನಸಿನ ತುಮುಲಗಳು, ಗೊಂದಲಗಳು, ತಂದೆ ತಾಯಿಯ ಅಸಮಾನಗಳು ..ಹೀಗೆ ಹತ್ತು ಹಲವು ವಿಚರಗಳನ್ನು ತಮ್ಮ ಕ್ಯಾಮೆರಾದಲ್ಲಿ ಹುದುಗಿತ್ತು ಅದಕ್ಕೆ ಒಂದು ರೂಪ ಕೊಟ್ಟು ನಮಗೆ ಉಣಬಡಿಸಿದ್ದಾರೆ.:)

ಟೈಮ್ ಇದ್ರೆ , ರಿ- ರಿಲೀಸ್ ಆದರೆ ಚಿತ್ರಮಂದಿರಕ್ಕೆ ಖಂಡಿತ ಭೇಟಿ ಕೊಡಿ ., ಟಿವಿಯಲ್ಲಿ ಬಂದರೆ , ತಪ್ಪದೆ ನೋಡಿ…
ಹಾ ಮರೆತೇ ಬಿಟ್ಟಿ. ಈ ಚಿತ್ರದ ಹಾಡುಗಳನ್ನ ನೀವು ಇಲ್ಲಿ ಕೊಂಡುಕೊಳ್ಳ ಬಹುದು. ಇದು ನೀವು ಕನ್ನಡಕ್ಕೆ ಮಾದವ ಕಿಂಚಿತ್ ಸೇವೆ :).

ಇಂತಿ ನಿಮ್ಮ,
ಕಾರ್ತಿಕ್ ಭಟ್

Advertisements

2 thoughts on “GombeGala Love

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s