ಚುನಾವಣೆ ನಂತರ ನಮ್ಮ ರಾಜಕಾರಣಿಗಳ ಮಾತು ಕಥೆ

ಚುನಾವಣೆ ನಂತರ ನಮ್ಮ ರಾಜಕಾರಣಿಗಳು ಏನು ಮಾಡುತ್ತಿರಬಹುದು ಅಂತ ನನಗೆ ಯೋಚನೆ ಬಂದಿದ್ದೆ ತಡ… ಸೀದಾ ಗಂಟು ಮೂಟೆ ಕಟ್ಟಿಕೊಂಡು ಮಾಜಿ ಎಣ್ಣೆ ಮಿನಿಸ್ಟರು ರೇಣುಕಚಾರ್ಯರವರ ಮನೆಗೆ ಹೋದೆ.
Renukacharya

“ಸಾರ್ ನಮಸ್ಕಾರ, ಏನ್ ಆರಾಮಾಗಿ ಕುರ್ಚಿ ಮೇಲೆ ಕೂತು, ಥೇಟ್ ರಾಜರ ಹಾಗೆ ಪೋಸ್ ಕೊಡ್ತಾ ಇದ್ದೀರಾ ?” ಅಂತ ಕೇಳಿದೆ….” ಲೋ ಮಗನೇ ಬಾರ್ಲಾ ಇಲ್ಲಿ… ಇಷ್ಟು ದಿನ ಮೈ ಗೆ ಕೊಬರಿ ಎಣ್ಣೆ ಸುರ್ಕೊಂದು ಉರು ಉರು ಅಲ್ಲಿತಿದ್ದೆ…ಎಲೆಕ್ಷನ್ ಅಂತ… ಈಗ ನೋಡಿದರೆ ಮೈ ಕೈಯೆಲ್ಲ ನೋವು. ಯಾವುದಾದರು ಒಳ್ಳೆ ಸ್ಟ್ರಾಂಗ್ ಆಗಿರೋ ಎಣ್ಣೆ ಇದ್ದರೆ ಹೇಳಪ್ಪ…. ಹೋಗಿ ಕುಡಿತೀನಿ..ಥೂ ಥೂ ….. ಹಚ್ಚಿಕೊಳ್ತೀನಿ” ಎಂದರು.
ಹಾ.. ನಾನು ಇವರಿಗೇ ಪ್ರಶ್ನೆ ಹಾಕಬೇಕು ಅಂತ ಇದ್ರೆ ಈವ್ಯಯ ನನಗೆ ಕ್ರಾಸ್ Question ಮಾಡ್ತಾರಲ್ಲಾ ….. ಅಂತ ಯೋಚನೆ ಬೇರೆ ಬಂತು .
ಎಣ್ಣೆ ವಿಷಯ ಹಾಗಿರ್ಲಿ ಸಾರ್… ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದೆ. ಅದಕ್ಕೆ ಅವರು “ಹೋ ಚುನಾವಣೆಯಲ್ಲಿ ಹೇಳೋದೇನಿದೆ… ಒಂದು ಲೋಡ್ ತೆಂಗಿನ ಕಾಯಿ ಆರ್ಡರ್ ಮಾಡಿದೀನಿ. ಮೇ ೮ ರಂದು ಮನೆ ಮನೆಗೆ ತೆರಳಿ ತೆಂಗಿನ ಕಾಯಿ ಕೊಟ್ಟು ಎಲ್ಲರ ಮನೆಯಲ್ಲು ತೆಂಗಿನ ಕಾಯಿಯ ಚಟ್ನಿ ಮಾಡುವ ಒಂದು ಕಾರ್ಯಕ್ರಮವನ್ನು ಸನ್ಮಾನ್ಯ ಯಡಿಯೂರಪ್ಪ ಹಮ್ಮಿಕೊಂಡಿದ್ದಾರೆ. 🙂
ನೋಡಿ ಈ ಸಲ ೨೫೦ ಸೀಟುಗಳು ನಾವೇ ಗೆಲ್ಲೋದು.. ಅದರಲ್ಲಿ ಅನುಮಾನವೇ ಬೇಡ… ಅಂದರು… ಅದಕ್ಕೆ ನಾನು .. “ಸಾರ್ ವಿಧಾನಸಭೆಯಲ್ಲಿ ಇರೋದೇ ೨೨೪ ಸೀಟ್ ಗಳು ..ಅದೇಗೆ ೨೫೦ ಸೀಟುಗಳು ಬರುತ್ವೆ ??? ” ..ಅದಕ್ಕೆ ಅವರು ” ರೀ… ನೀವು ಹೀಗೆ ನನ್ನ ತಲೆ ತಿಂದ್ರೆ ಇದೇ ತೆಂಗಿನ ಕಾಯಿಯಿಂದ ನಿಮ್ಮ ತಲೆಗೆ ಬಾರಿಸುವೆ” ಎಂದರು. ಏಕೋ ಪ್ಲಾನ್ ಉಲ್ಟಾ ಆಗ್ತಾ ಇದೆ ಅಂತ ಅನ್ನಿಸಿದ್ದರಿಂದ …ಸೀದಾ ಅಲ್ಲಿಂದ ಜಾಗ ಖಾಲಿ ಮಾಡಿ …. ಕುಮಾರಸ್ವಾಮಿ ರವರ ಮನೆಗೆ ಬಂದೆ…

kus

“ಸಾರ್ ಮಣ್ಣಿನ ಮಗ…ನಮಸ್ಕಾರ” ಅಂದೇ… ಅದಕ್ಕೆ ಅವರು “ನೋಡಿ…ನೀವು ಪ್ರಶ್ನೆ ಕೇಳೋ ಮುಂಚೆನೇ ನಾನೇ ಉತ್ತರ ಹೇಳಿಬಿಡ್ತೀನಿ. ನೋಡಿ.. ನಾನು ಹೇಳಲು ಹೊರಟಿರುವ ವಿಷಯ ಏನೆಂದರೆ… ನೋಡಿ….. ಕರ್ನಾಟಕವನ್ನು ಬಿಜೆಪಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಬ್ರಷ್ಟಚಾರದ ಭೂತವನ್ನು ಎಲ್ಲಾ ಕಡೆ ಹಬ್ಬಿಸಿದ್ದಾರೆ. ನೋಡಿ… ನಾನು ಹೇಳಲು ಹೊರಟಿರುವ ವಿಷಯ ಏನೆಂದರೆ… ನೋಡಿ…..ನಮಗು ಸ್ವಲ್ಪಾ ಅಧಿಕಾರ ಕೊಡಿ.. ನಮ್ಮ ತಂದೆನೇ ಮುಖ್ಯ ಮಂತ್ರಿ ಆಗ್ತಾರೆ…. ನನ್ನ ಹೆಂಡತಿ ಹೋಂ ಮಿನಿಸ್ಟರ್ ಆಗ್ತಾರೆ.. ನನ್ನ ಅಣ್ಣ…. ಹಣಕಾಸು ಮಂತ್ರಿ ಆಗ್ತಾರೆ.. ನಾನು ಕೈಗಾರಿಕ ಮಂತ್ರಿ ಆಗ್ತಿನಿ … ನನ್ನ ಮಗ ಎಣ್ಣೆ ಮಿಸ್ಟರ್ ಆಗತಾನೆ…ನನ್ ಅತ್ತಿಗೆ… ಐ ಟಿ ಮಿನಿಸ್ಟರ್ ಆಗ್ತಾಳೆ.. ನೋಡಿ..ನಾವು ಎಷ್ಟು ತ್ಯಾಗಮಯಿ ಅಂತ… ನಮ್ಮ ಎಲ್ಲರ ಜೀವನವನ್ನು ಸಮಾಜದ ಸೇವೆ (Shave) ಗೆ ಮೀಸಲು ಇಟ್ಟಿದೀವಿ.. ” .. ಈಗ ಹೇಳಿ ನಿಮ್ಮ ಪ್ರಶ್ನೆ ಏನಂತ..ಇವರ ಮಾತು ಕೇಳಿ ತಲೆ ತಿರುಗಿ ಕೆಳೆಗೆ ಬೀಳೋದು ಬಾಕಿ ಅಂತ ಅನ್ನಿಸಿತು….. ಇವರ ಸಹವಾಸವೇ ಬೇಡ ಅಂತ ಸೀದಾ ಎದ್ದು… ಸಿದ್ದರಾಮಯ್ಯರವರ ಮನೆಗೆ ಹೊರಟೆ.

siddaramaiyya

“ಸಾರ್ ಮುಂದಿನ ಸೀಯುಮ್ ನೀವೇ ಅಂತೆ ” ಅಂದೇ ..ಅದಕ್ಕೆ ಅವರು ..”ಹೌದಪ್ಪ.. ಏನ್ ಬಂದಿದ್ದು.. ನೋಡಪ್ಪ… AutoGraph ಬೇಕಾದರೆ ಈಗಲೇ ಕೇಳು…ಆಮೇಲೆ ನಾನು ಸೀಎಂ ಆದಮೇಲೆ ಶ್ಯಾನೆ ಬ್ಯುಸಿ ಇರ್ತೀನಿ ನೋಡು ಮತ್ತೆ …ಅಂದರು.. ” ಅದಕ್ಕೆ ನಾನು ” ಸಾರ್ AutoGraph ಆಮೇಲೆ ತಗೋತೀನಿ.. ನೀವೇನು ಎಲ್ಲೊ ಹೊರಟಿರುವ ಹಾಗಿದೆ.. ಅಂತ ಕೇಳಿದೆ ..” ಅದಕ್ಕೆ ಅವರು… “ಅದಾ .. ನಾನು ಬ್ಯೂಟಿ ಪಾರ್ಲರ್ ಗೆ ಹೊರಟಿದ್ದೀನಿ .. ಸೀಎಂ ಅಂದ್ರೆ ತಮಾಷೆನ… ಸ್ಮಾರ್ಟ್ ಆಗಿ ..ಕೂಲ್ ಆಗಿ.. ತಲೆಗೆ ಡೈ ಹೊಡ್ಕೊಂಡು ….ಹಂಗೆ ಒಂದು ಜುಬ್ಬಾ .. ಸೂಟ್ .. ಹೊಲಿಯಲಿಕ್ಕೆ ಕೊಟ್ಟು ಬರಣ ಅಂತ ಹೋಗ್ತಾ ಇದ್ದೀನಿ… ” ಓ ಈ ಮನುಷ್ಯನ್ನ Range ಬೇರೆ ಅಂತ ಅಂದುಕೊಂಡೆ… ನಮ್ ಕಮಲ ಪಕ್ಷದಲ್ಲಿ ಏನಾಗ್ತ ಇರಬಹುದೆಂಬ ಕುತೂಹಲದಿಂದ ಸೀದಾ ಮಲ್ಲೇಶ್ವರಂ ಹತ್ರ ಇರೋ ಆಫೀಸ್ಗೆ ಹೋದೆ.. ಅಲ್ಲಿ ಶೆಟ್ಟರು ಆಫೀಸ್ ನ Shutter ಎಳಿತಾ ಇದ್ದರು.

Jagadish
“ಸಾರ್ ನಮಸ್ಕಾರ… ಏನು ಕಮಲದ ಪರಿಮಳವೇ ಇಲ್ವಲ್ವಾ ” ಅಂದೇ.. ಅದಕ್ಕೆ ಅವರು… “ಅದು ಗುಜರಾತಿನಲ್ಲಿ ಇತ್ತು.. ಆದರೆ ಆ ಪರಿಮಳ .. ಇಲ್ಲಿ ಬರಲಿಕ್ಕೆ ಸಮಯ ಬೇಕಲ್ವ… ಸೊ ಸ್ವಲ್ಪಾ Smell ಕಮ್ಮಿ ಆಗಿದೆ ಅಷ್ಟೆ ” ಅಂದ್ರು. ಸರಿ.. ಚುನಾವಣೆ ಬಗ್ಗೆ ನೀವು ಏನು ಹೇಳುತ್ತೀರಾ ? ಅಂತ ಕೇಳಿದೆ..ಅದಕ್ಕೆ ಅವರು .. “ನೋಡಿ… ನೀವು ನೋಡಿರೋ ಹಾಗೆ… ಯಡಿಯೂರಪ್ಪ ನಮ್ ತಲೆಮೇಲೆ ತೆಂಗಿನ ಕಾಯಿ ಹೊಡೆದದ್ದು ನಿಜ, ರೆಡ್ಡಿ ಬ್ರದರ್ ತಾವೇ ಗುಂಡಿ ತೋಡ್ಕೊಂಡಿದ್ದು ನಿಜ.. ಹಾಲಪ್ಪ… ಮಾಡಬಾರದದ್ದು ಮಾಡಿದ್ದು… ಬ್ಲೂ ಬಾಯ್ಸ್ ನೋಡಬಾರದದ್ದು ನೋಡಿದ್ದು… ರೇಣುಕಾಚಾರ್ಯ ಕೊಡಬಾರದದ್ದು ಕೊಟ್ಟಿದ್ದು ನಿಜ.. ಸಂಪಂಗಿ ತೆಗೆದುಕೊಳ್ಳಬಾರದದ್ದು ತೆಗೆದುಕೊಂಡದ್ದು ನಿಜ… ಆದರೆ..ಅವರೆಲ್ಲ ಈಗ ಬೇರೆ ಪಕ್ಷಕ್ಕೆ ಹಾರಿದ್ದಾರೆ.. ಈಗ ನಮ್ಮ ಬಿಜೆಪಿ ಪಕ್ಷ ಮಗುವಿನ ಹಾಗೆ … ಮುಗ್ಧ ..ಜನ ಇದನ್ನ ನೋಡ್ತಾರೆ ಸ್ವಾಮಿ.. ಸೊ ಮುಂದಿನ ಮುಖ್ಯ ಮಂತ್ರಿ ನಾನೇ… ” ಅಂದರು…
ಎಲ್ಲಾ ಶಿವನೇ.. ಕಾಲಿಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ… ಬಂದ ದಾರಿಗೆ ಸುಂಕವಿಲ್ಲ ಎಂದು ಅಂದುಕೊಂಡು ತಲೆಗೆ towel ಸುತ್ತು ಕೊಂಡು ಮನೆಕಡೆ ಹೊರಟೆ.

ಇಂತಿ,
ನಿಮ್ಮ ಬಡ ಮತದಾರ
ಕಾರ್ತಿಕ್

Advertisements

2 thoughts on “ಚುನಾವಣೆ ನಂತರ ನಮ್ಮ ರಾಜಕಾರಣಿಗಳ ಮಾತು ಕಥೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s