Director Special Movie Review

ಇವರು ಒಂತರ .. ಕಲಾವಿದ, ಕಲಾರಸಿಕ, ಕಲಾಆರಾಧಕ , ಕಲಾಸಾಮ್ರಾಟ್, ಕಲೆಗಾರ , ಕಲಾಕಾರ್. ಇವರ ಮೆದುಳು ನಮ್ ತರ ತುಕ್ಕು ಹಿಡಿದ ತಗಡು ತರ ಅಲ್ಲ. ಗಾಡಿಗೆ ಹಾಕೋ ಕಾಸ್ತ್ರೋಲ್ ಆಯಿಲ್ ತರ ಇವರ ಬಾಡಿಗೆ ಸದಾ ಬೀಳೋ “ಟೀಚೆರ್ಸ್” ಆಯಿಲ್ ನಿಂದಾಗಿ ಇವರ ಮೆದುಳು ಓಡುವುದೇ ಬೇರೆ ಮಾರ್ಗದಲ್ಲಿ.
ತಮ್ಮ ಚೊಚ್ಚಲ ಸಿನಿಮಾ “ಮಠ”ದಿಂದ ಮನೆ ಮಾಡಿಕೊಂಡು,ಆ ದರ್ಮಸ್ಥಳ ಮಂಜುನಾಥನನ್ನು ಎಬ್ಬಿಸದೆ , ಲೋಕಲ್ ಮಂಜುನಾಥನನ್ನು (ಜಗ್ಗೇಶ್) ಎಬ್ಬಿಸಿ, “ಎದ್ದೇಳು ಮಂಜುನಾಥ” ಅಂತ ಸಿನೆಮವನ್ನು ಮಾಡಿ ಎಲ್ಲರಿಂದ ಸೈ ಎನಿಸಿಕೊಂಡ ಒಬ್ಬ ಪರಿಪೂರ್ಣಕ ನಿರ್ದೇಶಕ ನಮ್ಮ ಈ ಗುರುಪ್ರಸಾದ್.

ಡಬಲ್ ಮೀನಿಂಗ್ ಜೋಕ್ಸ್ ನಿಂದ ಖ್ಯಾತಿ ಪಡೆದ,ಆದರೆ ಸೃಜನಶೀಲತೆಯನ್ನು ಕಾಪಾಡಿಕೊಂಡು ಬಂದ ಈ ನಿರ್ದೇಶಕ ತಮ್ಮ ಮೂರನೇ ಚಿತ್ರ “Director Special” ಹೋದವಾರ ಬಿಡುಗಡೆ ಮಾಡಿದರು.

ಕನ್ನಡ ಪ್ರೇಮಿಗಳಾದ ನಾನು ಮತ್ತು ನಮ್ಮ ತಂಡ ,ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಳಿ ಇರುವ ಗೋಪಾಲನ್ ಮಾಲ್ಗೆ ಲಗ್ಗೆ ಇಟ್ಟೆವು.ಹೊರಗಡೆ ಧೋ ಎನ್ನುವ ಮಳೆ. ಒಳಗಡೆ ಹೋ ಎನ್ನುವ ಸಿನಿಮಾ ಕಳೆ.ಸೀಟಿನ ಹಿಂದೆ ಮಹಿಳೆಯ ಗಾಜಿನ ಬಳೆ,ಪಕ್ಕದಲ್ಲಿ ಸಂದೀಪಿನ ಕೋಡುಬೆಳೆ,ವಟ್ಟಿನಲ್ಲಿ ನಮ್ಮ ಸೆಳೆ ಆ ಪರದೆಯ ಮೇಲೆ.

ಕ್ಯಾಪ್ಶನ್ ಹೇಳುವಂತೆ ಚಿತ್ರವು ಓಡುವುದು ಸಂಬಂಧಗಳ ಸುತ್ತ.. ಹೆತ್ತ ತಂದೆ ತಾಯಿಯನ್ನೇ ಕಾಲ ಕಸವೆಂಬಂತೆ ಕಾಣುವ ಈಗಿನ ಸೊ ಕಾಲ್ಡ್ “Civilized Generation” ಇರುವಾಗ,ಒಬ್ಬ ಹುಡುಗ ಯಾರನ್ನೋ ತನ್ನ ತಂದೆ, ಇನ್ ಯಾರನ್ನೋ ತನ್ನ ತಾಯಿ, ತಂಗಿ, ಅಣ್ಣ …ಹೀಗೆ ಅವರೆಲ್ಲರನ್ನು ತನ್ನ ಮನೆಗೆ ಕರೆತರುತ್ತಾನೆ. ಉಡಲು ಹೊಸ ಬಟ್ಟೆ ತಂದುಕೊಡುತ್ತಾನೆ.ಹತ್ತು ಹಲವು ಸಹಾಯಗಳನ್ನು ಮಾಡುತ್ತಾನೆ. ಆದರೆ ಅವನಿಗೆ ತಿಳಯದಂತೆ ಆ ಎಲ್ಲಾ ಜನರು ದುಡ್ಡಿನ ಆಸೆಗೆ ಅವನನ್ನೇ ಮುಗಿಸಲು ತಂತ್ರ ಮಾಡುತ್ತಾರೆ.

ಸೊ, ಈ ಸನಿವೇಶದಿಂದ ಕಥಾ ನಾಯಕ ಪಾರಗುವುದೆಂದು?ಕಥೆಯಲ್ಲಿ ನಡೆಯುವ ಟ್ವಿಸ್ಟ್ ಗಳೇನು ? ನಾಯಕ ನಿಜವಾಗಲು ಹೊಗೆ ಹಾಕಿಕೊಳ್ಳುತ್ತಾನೋ ಅಥವ ಬದುಕುಕೊಳ್ಳುತ್ತಾನೋ ..ಅದನ್ನ ನೋಡಲು ನೀವು ಥಿಯೇಟರ್ ಗೆ ಹೋಗಲೇಬೇಕು. :)..
ಸಿನೆಮಾದಲ್ಲಿ ಮಜಾ ಸಿಗುವುದು ಅದರ ಡೈಲಾಗ್ ಗಳಲ್ಲಿ. ರಂಗಯಣ ರಘುರವರ ಅಭಿನಯ ಅಂತು … (ನರೇಂದ್ರ ಬಾಬು ಶರ್ಮ ರವರ ಮಾತಿನಲ್ಲಿ ಹೇಳುವುದಾದರೆ…. ಮುಂಡ ಮೊಚ್ತು…..ಏನ್ರಪ್ಪ ಇವನ ಆಕ್ಟಿಂಗ್ಗು…) ಸೂಪರ್.ಅವರ ಪಾತ್ರಕ್ಕೆ ಅವರೆ ಸಾಟಿ.

ಯಾವುದೋ ಒಂದು ಸಂದರ್ಬದಲ್ಲಿ ರಂಗಯಣ ರಘು ನಾಯಕ ನಾದ ಧನಂಜಯನಿಗೆ ಹೇಳುವರು… “ಭೂಮಿಲ್ಲಿ ಬೀಜ ಎಷ್ಟು ಆಳದಲ್ಲಿ ಹೂಳ್ತಿವೋ ಬೆಳೆ ಅಷ್ಟೆ ಚೆನ್ನಾಗಿ ಬರುತ್ತೆ” . ಯಾವ ಭೂಮಿ ಯಾವ ಬೀಜ ಅಂತ ಹೇಳುವ ಅವಶ್ಯಕತೆಯಿಲ್ಲ ಅಂತ ಅಂದುಕೊಳ್ತೀನಿ 🙂 🙂 .

ಕದ್ದ ದುಡ್ಡಿನಿಂದ ಏನು ಮಾಡ್ತೀಯ ಅಂತ ಕೇಳಿದಕ್ಕೆ ರಂಗಾಯಣ ರಘು ಹೇಳುವ ಹಣೇಶನ ಸ್ಟೋರಿ ಅಂತು ಅದ್ಭುತ.ಶಿವ ಪಾರ್ವತಿವನ್ನು ಮೀಟ್ ಮಾಡದಿದ್ದಕ್ಕೆ ಗಣೇಶನ ತಲೆಯನ್ನು ಡಮಾರ್ ಮಾಡ್ದಿದು ನಿಮಗೆ ಗೊತ್ತೇ ಇದೆ. ಆದರೆ ಆಫ ದಿ ರೆಕಾರ್ಡ್ ನಡೆದ್ದದ್ದು ಏನೆಂದರೆ ,ಆ ಘಟನೆಯ ನಂತರ… ನನಗೆ ಆನೆ ಮುಖ ಬೇಡ .. ಆದರೆ ಆನೆ ಬಾಡಿ ಬೇಕು ..ತಲೆ ಮಾತ್ರ ಮನುಷ್ಯನಾದವನಾಗಿರಬೇಕು ಎಂದು ಕೇಳಿಕೊಂಡನಂತೆ. ಹೀಗೆ ಸೃಷ್ಠಿಯಾದ ಹಣೇಶನ ದಿಂದ ರಂಗಾಯಣ ರಘು , ಮಠ, ಶಾಲೆ, ಕಾಲ್ಲೇಜು,ವಿಶ್ವವಿದ್ಯಾಲಯ, ಆಸ್ಪತ್ರೆ, ನಗರ,..ಹೇಗೆ ಹತ್ತು ಹಲವು ಸಮಾಜ “ಸೇವೆ” (ಶೇವ್) ..ಮಾಡುತ್ತಾನೆಂದು ಹೇಳುತ್ತಾನೆ. ಇಲ್ಲಿ ಗಮನಿಸಬೇಕಾದ ವಿಷೆಯವೇನೆಂದರೆ..ಗುರುಪ್ರಸಾದ್ ತಮ್ಮ ನುಣುಪಾದ ಮಾತಿನಲ್ಲೇ ಸಮಾಜದಲ್ಲಿ ದೇವರ ಹೆಸರನ್ನು ಹೇಳಿ ತಿರುಗಿಕೊಂಡು ಮೋಸ ಮಾಡುವ ಕಪಟ ಡೋಂಗಿ ಸನ್ಯಾಸಿಗಳಿಗೆ ಅಥವ ಜನರಿಗೆ ಅವರದೇ ದಾರಿಯಲ್ಲಿ ಸರಿಯಾಗಿ ಗುಮ್ಮಿದ್ದರೆ :).

ಇನ್ನು ಬ್ರಾಹ್ಮಣರನ್ನು ಹಾಗೂ ಲಿಂಗಾಯಿತರನ್ನು ಸೇರಿಸಿ ನನ್ನ ಜಾತಿ ಬ್ರಾಲಿಂಗ ಅಂತ ಹೇಳಿದ್ದಂತೂ ಸೂಪರ್. ಇನ್ನು ಹೆಣ್ಣಿನ ಸೌಂದರ್ಯದ ವಿಶ್ಲೇಷಣೆ ಅಂತು ಇನ್ನು ಸೂಪರ್.ಮುಂದೆ ಇಂದ ಓದಿದರೆ ಕನ್ನಡ ತರ, ಹಿಂದೆ ಇಂದ ಓದಿದರೆ ಉರ್ದು ತರ… ಒಟ್ನಲ್ಲಿ ಎರಡು ಕಡೆಯಿಂದನು ಚನ್ನಾಗಿ ಕಾಣ್ತೀರ ಅನ್ನುವ ಡೈಲಾಗ್ A ಒನ್ 🙂

ಇನ್ನು ರಘುರವರ ತಂದೆ ಸತ್ತಿದ ದುರಂತ ಕಥೆಯನ್ನು ಅಷ್ಟೆ ಹಾಸ್ಯವಾಗಿ ಹೇಳುವ ನಿರ್ದೇಶಕರ ತಲೆಗೆ ಒಂದು ಸಲಾಂ.”ಎಲ್ಲರು ನಾಗರ ಪಂಚಮಿಯೆಂದು ಹಾವಿಗೆ ಹಾಲೆರದರೆ ನನ್ನ ತಂದೆ ಸಿಕ್ಕಾಪಟ್ಟೆ ಕುಡಿದು ಹೊಟ್ಟೆ ಹಾಳುಮಾಡಿಕೊಂಡು , ಹೆಡೆ ಎತ್ತಿದ ಹಾವಿಗೆ ಹೇಲೆರೆದ. ಹಾವ್ವೇನು ಸುಮ್ನೇ ಇರುತವೆಯೇ ? ಸೀದಾ ಹೋಗಿ… ಬಾಯಿ ಹಾಕದ ಜಾಗದಲ್ಲಿ ಕಚ್ಚಿಬಿಡ್ತು…ಪರಿಣಾಮ… ತಂದೆ ಸತ್ತುಹೋದ…” …

ಈ ಡೈಲಾಗ್ಗಳಲ್ಲ ಬರಿ ಸಾಂಪಲ್ ಗಳು ಮಾತ್ರ..ಇದು ಬರಿ “Quarter”. ಫುಲ್ Bottleಗೆ ಪೂರ್ತಿ ಸಿನಿಮಾ ನೋಡಿ 🙂
ಸ್ನೇಹಿತ ವರುಣ್ ಕಳಿಸಿದ ಕೆಲವು ಪಂಚಿಂಗ್ ಡೈಲಾಗ್ಗಳಿಗೆ ವಂದನೆ 🙂

ಇಂತಿ ನಿಮ್ಮ,
ಕಾರ್ತಿಕ್ ಭಟ್

Advertisements

3 thoughts on “Director Special Movie Review

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s