ನನ್ನ ಅನಿಸಿಕೆ :ಕುಣಿವ ಕಾಂಚಾಣದ ಬೆನ್ನಹತ್ತಿ

Recession

ಇತ್ತೀಚಿಗೆ ಟೆಕ್ನಿಕಲ್ ಪುಸ್ತಕಗಳ ಜೊತೆ , ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಕುಸಿತದ ಬಗ್ಗೆ ತಿಳಿದುಕೊಳ್ಳಲು
ಪ್ರಯತ್ನಿಸುತಿದ್ದೇನೆ . ಪ್ರೀತಿಯ ಸ್ನೇಹಿತರಾದ ಜಯ್ ಕುಮಾರ್ ರವರು ಒಂದು ಪುಸ್ತಕ ಕೊಟ್ಟರು. ಅದರ ಹೆಸರೇ ಕುಣಿವ ಕಾಂಚಾಣದ ಬೆನ್ನ ಹತ್ತಿ.
ಮೂಲ ಕೃತಿ- ಅಮಾನುಲ್ಲಾ ಖಾನ್ . ಕನ್ನಡಕ್ಕೆ ಅನುವಾದಿಸಿದವರು – ರಾಘವೇಂದ್ರ ಆಯಿ ಮತ್ತು ಬಿ ಎನ್ ಪೂಜಾರಿ .
ಕೇವಲ ಒಂದು ಪುಸ್ತಕ ಓದಿ ನಾನು ಖಂಡಿತವಾಗಿವು ನನಗೆ ಎಲ್ಲ ತಿಳಿದಿದೆಯೆಂದು ಹೇಳಲು ಇಚ್ಚಿಸುವುದಿಲ್ಲ. ಇದು ಈ ಪುಸ್ತಕ ಬಗೆಗೆ ಮತ್ತು ನನ್ನದೇ ಆದ ಒಂದು ಅನಿಸಿಕೆಯ ಬಗೆಗೆ ಪುಟ್ಟ ವಿವರಣೆ.
ಇಲ್ಲಿ ಲೇಖಕರು ಬಹಳ ತರ್ಕಬದ್ದವಾಗಿ ೧೭ನೇ ಶತಮಾನದಿಂದ ೨೧ನೇ ಶತಮಾನದವರೆಗೂ ಬಂಡವಾಳಶಾಹಿಯ ಬಗ್ಗೆ , ವಿವಿದ ದೇಶಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿ ಹೇಳಿದ್ದಾರೆ. ೧೯೪೫ರಿಂದ ೧೯೭೩ರ ವರೆಗೆ ಬಂಡವಾಳಶಾಹಿ ಜಗತಿನಲ್ಲಿ ಎಲ್ಲಡೆಯೂ ಏಕಕಾಲಕ್ಕೆ ಕಾಣಿಸುವ ಆರ್ಥಿಕ ಹಿಂಜರಿತ ಇಲ್ಲದ್ದರಿಂದಾಗಿ ಬಂಡವಾಳಶಾಹಿ ಬಿಕ್ಕಟ್ಟು-ಮುಕ್ತವಾಗಿದೆ ಎಂಬ ಭ್ರಮೆ ಉಂಟಾಗಲು ಕಾರಣವಾಯಿತು .ಆದರೆ ಇದು ಬರಿ ನೀರಿನ ಮೇಲಿನ ಬುಗ್ಗೆ ಎಂದು ತಿಳಿಯಲು ಜಗತ್ತಿಗೆ ಹೆಚ್ಚಿನ ಕಾಲಾವಕಾಶ ಬೇಕಾಗಿರಲಿಲ್ಲ.
೧೯೯೦ರ ತಡ ನಂತರ ಉಂಟಾದ ಮಹಾ ಕುಸಿತ ಹೇಗೆ ಅಮೆರಿಕಾದ ವಾಶಿಂಗ್ಟನ್ ನಿಂದ ಹಿಡಿದು , ಭಾರತದ ಗುಜಾರಿ ವ್ಯಾಪರಣಿಗು ಹೊರೆ ಆಯಿತು ಎಂದು ಇದರಲ್ಲಿ ಲೇಖಕರು ಪ್ರಸ್ತಾಪಿಸಿದ್ದಾರೆ.

ನಿಮಗೆ ಹಳೆಯ ಘಟನೆಗಳ ಬಗ್ಗೆ ಹೇಳುವ ಬದಲು, ತೀರಾ ಇತ್ತೀಚಿಗೆ ನಡೆದ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯಾಗಿರುವದರ ಬಗ್ಗೆ ಗೊತ್ತಿರಬಹುದು. ೧೫೮ ವರುಷದ ಇತಿಹಾಸವಿರುವ ಆ ಬ್ಯಾಂಕ್ , ಕೇವಲ ಕೆಲವು ಶ್ರೀಮಂತರ, ಪಟ್ಟಾಬದ್ರ ಹಿತಾಸಕ್ತಿ ಗಳಿಂದ ಹೇಗೆ ಬಾಗಿಲು ಮುಚ್ಚಿತು ನೋಡಿ. ಭಾರತದ ದಲ್ಲಿ ಅಷ್ಟೇನೂ ಪರಿಣಾಮ ಬೀರದಿದ್ದರೂ , ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐ.ಸೀ.ಐ.ಸೀ. ಐ ಹಲವು ಕೋಟಿಗಳಷ್ಟು ನಷ್ಟ ಅನುಭವಿಸಿದರು. ಲೆಹ್ಮನ್ ಬ್ರದರ್ಸ್ ನಾ ಋಣಬಾರ ಬರೋಬಾರಿ ೬೧೩ ಬಿಲಿಯನ್ ಡಾಲರ್ಸ್ . ೨೦೦೧ ರಲ್ಲೇ ಎಚರಿಕ್ಕೆ ಕೊಟ್ಟರು ಸರಿದಾರಿಗೆ ತರದ ಸರಕಾರ, ೨೦೦೮ ರಲ್ಲಿ ತಕ್ಕ ಬೆಲೆ ತೆರಬೇಕಾಯಿತು. ಆಗ ನಡೆದ ಮಹಾ ಕುಸಿತದಿಂದ ಸುಮಾರು ೧೩೦ ಬ್ಯಾಂಕ್ ಗಳು ಅಮೇರಿಕದಲ್ಲಿ ದಿವಾಳಿಯಾದವು.

ಇದರ ಪರಿಣಾಮ ಯುರೋಪ್ ವಕೂಟದಲ್ಲಿ ಮಹಾ ಹನಿ ಯುಂಟು ಮಾಡಿದವು. ಸುಮಾರು ೨ ಲಕ್ಷ ಕಾರ್ಮಿಕರು ಉದ್ಯೋಗಾವಕಾಶದಿಂದ ವಂಚಿತ ರಾದರು. ಖಾನ್ ಸಾಹೇಬರು ಇವೆಲ್ಲ ಚಿತ್ರಣಗಳನ್ನು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಮೊದಲನೆಯ ಮಹಾಯುದ್ದ ದಿಂದ ನಡೆದ ಜಾಗತಿಕ ಕುಸಿತ, ನಂತರ ನಡೆದ ಘೋರ ಎರಡನೆಯ ಮಹಾ ಯುದ್ದ ದಿಂದ ವಿಶ್ವ ಹೇಗೆ ಜರ್ಜರಿತ ಗೊಂಡಿತು ಎಂದು ತಿಳಿಸಿದ್ದಾರೆ.

ಹತ್ತು ಹಲವು ವಿಚಾರಗಳನ್ನು ಹೊಂದಿರುವ ಈ ಪುಸ್ತಕ ವನ್ನು ತಪ್ಪದೆ ಓದಿ.

ಇಂತಿ, ಕಾರ್ತಿಕ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s