ರೂಪಾಯಿಯ ಅಪಮೌಲ್ಯವನ್ನು ತಡೆಯುವುದು ಹೇಗೆ ?

Rupee

ಮಾಧ್ಯಮದಲ್ಲಿ ಇತ್ತೀಚಿಗೆ ಬರೋ ವಿಷಯ ಅಂದ್ರೆ ,
ಒಂದು : ಕಾಂಗ್ರೆಸ್ , ಬಿ ಜೈ ಪೀ, ಜನತಾದಳ ರಾಜಕಾರಣಿಗಳ ಕೆಸರು ಎರಚಾಟ .
ಇನ್ನೊಂದು : ಹೊಗೆ ಹಾಕುತ್ತಿರುವ ನಮ್ಮ ಬಡಪಾಯಿ ರೂಪಾಯಿಯ ಅಪಮೌಲ್ಯ.
ಬಹುಶ ಇವತ್ತಿಗೆ ಒಂದು ಡಾಲರ್ ೭೦ ರೂಪಾಯಿಗಳಾಗಿರಬಹುದು. ಅಲ್ಲ ಈ ರೂಪಾಯಿ ಅಪಮೌಲ್ಯಕ್ಕೆ ಕೊನೆ ಇಲ್ಲವೇ. ನಮ್ಮ ಸರಕಾರ ಅಷ್ಟು ದುರ್ಬಲವೇ? ನಾವು ಇದರ ಬಗ್ಗೆ ಏಕೆ ಮೊದಲೇ ಚಿಂತನೆ ನಡೆಸಲಿಲ್ಲ ? ಏಕೆ ಒಂದೇ ಸಮನೆ ಸರಕ್ ಅಂತ ರೂಪಾಯಿ ಡಾಲರ್ ಎದುರು ಆಡಕಟ್ಟಿ ಏಕೆ ಕೂತಿದೆ ? ಇಷ್ಟು ವರುಷ ಕೇಂದ್ರ ಸರಕಾರ ಲದ್ದಿ ತಿಂತಿತ್ತೆ ? ಹೀಗೆ ನಾನು ನನಗೆ ಹಲವಾರು ಪ್ರಶ್ನೆಗಳನ್ನ ಕೇಳಿಕೊಂಡೆನು. ವಿಪರ್ಯಾಸವೆಂದರೆ ಇವು ಯಾವುದಕ್ಕೂ ನನಗೆ ಸಮರ್ಪಕ ಉತ್ತರ ದೊರೆಯಲಿಲ್ಲ. ಹೋಗಲಿ ಬಿಡಿ. ಇದು ನಾವು ಮಾಡಿಕೊಂಡ ಸ್ವಯುಂಕೃತ ಅಪರಾಧ. ಜನಸಾಮಾನ್ಯರಾದ ನಾವೇ ಅಲ್ಲವೇ ಅವರನ್ನ ಗೆಲ್ಲಿಸಿ ಅಧಿಕಾರದ ಗದ್ದುಗೆ ಕೊಟ್ಟಿದು. ನಮ್ಮ ತಲೆಗೆ ನಮ್ಮ ಮೆಟ್ಟಿನಿಂದಲೇ ಮೂರು ಸಲ ಬಡಿದುಕೊಳ್ಳ ಬೇಕಷ್ಟೆ.

ಸರಿ, ವಿಷಯಕ್ಕೆ ಬರೋಣ. ರೂಪಾಯಿ ಅಪಮೌಲಕ್ಕೆ ಹಲವಾರು ಕಾರಣಗಳಿವೆ. ಒಂದು ದೇಶದ ಅಭಿವೃದ್ದಿಗೆ ಸರಿಯಾದ ಮತ್ತು ಸಮರ್ಪಕವಾದ ರೂಪರೇಶ ಇಲ್ಲದಿರುವುದು, ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ದೇಶದ ಬಗ್ಗೆ ಅನುಮಾನ ವಿದ್ದು, ವಿದೇಶಿಯರು ಒಂದೇ ಸಮನೆ ತಮ್ಮ ತಮ್ಮ ಹೂಡಿಕೆಗಳನ್ನು ಹಿಂಪಡೆದಿರುವುದು, ಆಫ್ರಿಕ ದೇಶದಲ್ಲಿ ಹೊಸ ಮಾರುಕಟ್ಟೆ ಉದಾಯಿಸುವುದರಿಂದ , ವಿದೇಶಿಯರು ಅಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವುದು, ಇಂಪೋರ್ಟ್ ಹೆಚ್ಚಾಗಿ , ಎಕ್ಸ್‌ಪೋರ್ಟ್ ಕಡಿಮೆಯಾಗಿ, ನಮ್ಮ ದುಡ್ಡು (ಡೋಲಾರ್ ಸಮನಾಗಿ) ದೇಶದಿಂದ ಹೊರಹೋಗುತ್ತಿರುವುದು. ಹೀಗೆ ಇನ್ನೂ ಹತ್ತು ಹಲವಾರು ಕಾರಣಗಳಿಂದ ಇಂದು ರೂಪಾಯಿ ಈ ದಯನೀಯ ಸ್ತಿತಿಗೆ ಬಂದು ಕೂತಿದೆ.

ಈ ಮೇಲ್ಕಂಡ ವಿಷಯಗಳಿಗೆ ನಮ್ಮ ಕೊಡುಗೆ ಇದೆಯೇ? ಅಂತ ನೀವು ಕೇಳಿದರೆ, ಅದಕ್ಕೆ ನನ್ನ ಉತ್ತರ ಖಂಡಿತ ಇದೆ. ಹಾಗಾದರೆ ಇದನ್ನ ಸ್ವಲ್ಪ ಮಟ್ಟಿಗಾದರೂ , ತಡೆಯುವುದು ಹೇಗೆ ? ನಾಗರಿಕರಾದ ನಾವು ನಮ್ಮ ಭಾರತ ಮಾತೆಯ ಮಾನವನ್ನು ಹೇಗೆ ಕಾಪಾಡಬಹುದು? ನೀರಿನ ಚಿಕ್ಕ ಹನಿ ಇಂದ ಹೇಗೆ ಒಂದು ದೊಡ್ಡ ಸಾಗರವಾಗುವುದೋ ಅದೇ ರೀತಿ, ಜನ ಸಾಮಾನ್ಯರಾದ ನಾವು ಮಾಡು ಚಿಕ್ಕ ಚಿಕ್ಕ ಕೆಲಸದಿಂದ ಖಂಡಿತವಾಗಿಯೂ ರೂಪಾಯಿ ಅಪಮೌಲ್ಯವನ್ನು ತಡೆಯಬಹುದು.


ಹೇಗೆ ಅಂದರೆ
೧)ದಯಮಾಡಿ ಚಿನ್ನ ಕರಿದಿಸುವುದನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿಸಿ.
೨) ಚಿನ್ನವನ್ನ ದಯವಿಟ್ಟು ಇನ್‌ವೆಸ್ಟ್‌ಮೆಂಟ್ ತರ ನೋಡದೆ, ಅಗತ್ಯ ವಿದ್ದರೆ ಮಾತ್ರ ತಗೋಳಿ.
೩)ಶೇಕಡಾ ೮೦% ನಮ್ಮ ಇಂಪೋರ್ಟ್ ನಾವು ಪೆಟ್ರೋಲ್ ಮತ್ತು ಡೀಸಲ್ ಅನ್ನು ಆಮದು ಮಾಡಿಕೊಳ್ಳುತ್ತೇವೆ .ಇದರಿಂದ ಎಷ್ಟೋ ಕೋಟಿ ಕೋಟಿ ದುಡ್ಡು ನಮ್ಮ ದೇಶದಿಂದ ಹೊರದೇಶಕ್ಕೆ ಹೋಗುತ್ತದೆ. ಇದರಿಂದ ಆಗುವ ನಷ್ಟ ನಪ್ಪ ದೇಶದ ಅಬಿವೃದ್ಧಿಗೆ ಮಾರಕ.
೩)ವಿದೇಶಿ ಬ್ರ್ಯಾಂಡ್ ಬಟ್ಟೆ ಬಿಟ್ಟು ದೇಶಿ ಬಟ್ಟೆ ಗಳನ್ನ ಕೊಂಡುಕೊಳ್ಳಿ. ಇದರಿಂದ ದೇಶದ ಬಟ್ಟೆ ಉದ್ಯಮ ಏಳಿಗೆವಾಗುವುದು.
೪)ವಿದೇಶಿ ಕಾರ್ಗಳ ವ್ಯಾಮೋಹ ಬಿಟ್ಟು ದೇಶಿ ಅತ್ತವ , ಇಲ್ಲೆ ತಯಾರುವಾಗುವಂತಹ ಕಾರ್ ಗಳನ್ನೇ ತಗೋಳಿ.
೫)ಬೈಕ್ ಮತ್ತು ಕಾರ್ ಗಳನ್ನು ಹೆಚ್ಚು ಉಪಯೋಗಿಸದೆ , ಸಾರ್ವಜನಿಕ ಸಾರಿಗೆ ಯನ್ನು ಬಳಸಿ. ಇದರಿಂದ ನಿಮ್ಮ ಜೇಬಿಗೂ ಹಾಗೂ ದೇಶಕ್ಕು ಕತ್ತರಿ ಇಲ್ಲ.
೬)ಹೆಚ್ಚು ಹೆಚ್ಚು ವಿದೇಶ ಪ್ರವಾಸ ಮಾಡದೆ, ಅದನ್ನ ಮೊಟಕುಗೊಳಿಸಿ.

ಇದು ನನಗೆ ತಿಳಿದಿರುವ ಪ್ರಕಾರ ,ನಾನು ನಿಮ್ಮ ಮುಂದೆ ಇಟ್ಟ ವಿಚಾರ. ಇದನ್ನ ಅರ್ತೈಸಿ ಅನುಸರಿಸುವುದು ನಿಮ್ಮ ಭಾವ ಮತ್ತು ಬಕುತಿಗೇ ಬಿಟ್ಟ ವಿಚಾರ, ಮಾಡುತ್ತೀರಾ ಎಂಬ ಹುಸಿ ನಂಬಿಕೆ ಇಂದ ನನ್ನ ವಂದನೆಗಳನ್ನ ನಿಮಗೆ ತಿಳಿಸುತ್ತಾ ಇದ್ದೀನಿ.:)

ಇಂತಿ,
ನಿಮ್ಮ ಕಾರ್ತಿಕ್

Advertisements

2 thoughts on “ರೂಪಾಯಿಯ ಅಪಮೌಲ್ಯವನ್ನು ತಡೆಯುವುದು ಹೇಗೆ ?

  1. ಇನ್ನೊಂದು ಬಲವತ್ತಾದ ಕಾರಣ : ಪಬ್ಲಿಕ್ ಡಿಸ್ಟ್ರಿಬ್ಯೂಶನ್ ಸಿಸ್ಟಮ್ : ದೇಶದಲ್ಲಿ 33% ಬಿಪಿಎಲ್ ಎಂದು ಅಂಕಿ ಅಂಶ ಹೇಳುತ್ತಾದರೂ ಬಿಪಿಎಲ್ ಕಾರ್ಡು ಹೊಂದಿರುವವರ ಸಂಖ್ಯೆ ಶೇಕಡಾ 45ರಷ್ಟು ಇದೆ . ಸುಮ್ಮನೆ ಅನರ್ಹರಿಗೆ 1 ರೂ 2 ರೂ ಗೆ 40ಕಿಲೋ ಅಕ್ಕಿ ಗೋಧಿ ಕೊಟ್ರೆ ಇನ್ನೇನಾಗುತ್ತೆ? ಆಗಿನ ಎನ್ಡಿಎ ಸರಕಾರ ಮಾತ್ರ ಹತ್ತು ವರ್ಷಗಳ ಹಿಂದೆ ಇವಕ್ಕೆಲ್ಲ ಕಡಿವಾಣ ಹಾಕಿದ್ದರಿಂದಲೇ ಆರ್ಥಿಕ ಸ್ಥಿತಿ ಸುಧಾರಿಸಿತ್ತು. ಈಗ ಬಿಗಡಾಯಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s