ಕುಡಿತವೇ ಜೀವನ ಆಗಬಾರದು

Drink Kills

ನಿಜ ಜೀವನದಲ್ಲಿ ನಡೆದ ಒಂದು ಕಥೆ ಹೇಳ್ತಿನಿ, ಸಮಯ ಇದ್ದರೆ ಕೇಳಿ…ಅಂದರೆ ಓದಿ 🙂 .
ಅದು ಒಂದು ಸುಂದರ ವಾದ ಸಂಸಾರ. ಜೀವನಕ್ಕೆ ಬೇಕಾದ ಎಲ್ಲ ಸುಖ ಸಂತೋಷಗಳು ಆ ಸಂಸಾರದಲ್ಲಿ ಕಾಣಬಹುದಿತ್ತು. ಅವರು ಮನೆಯ ಯಜಮಾನರು.ಅವರಿಗೆ ಒಬ್ಬನೇ ಮಗ . ಪೌರೋಹಿತ ಅವರ ಜೀವನದ ಆಧಾರ.

ಇರೋದಕ್ಕೆ ಒಂದು ಸೂರು. ಪತಿಗೆ ತಕ್ಕ ಸತಿ. ಯಜಮಾನರನ್ನು ಕಂಡರೆ ಊರಲ್ಲಿ ಭಯ ಭಕ್ತಿ. ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಅವರ ಉಪಸ್ತಿತಿ ಬಹುಮುಖ್ಯ. ಸದಾ ಸದ್ವಿಚಾರ , ಸಾತ್ವಿಕ ನಡೆ ಉಳ್ಳವರು.

ತಮ್ಮ ಒಬ್ಬನೇ ಮಗನನ್ನು ಒಳ್ಳೆ ಪುರೋಹಿತನ್ನಗಿ ಮಾಡಬೇಕೆಂಬುದು ಅವರ ಇಚ್ಚೆ ಆಗಿತ್ತು. ಅದರಂತೆಯೇ ಮಗನು ಇಷ್ಟವಿಲ್ಲದಿದ್ದರೂ ಅಪ್ಪ ಕಳಿಸಿಕೊಟ್ಟ ವೇದ ಮಂತ್ರ ಗಳನ್ನು ಕಲಿತ. ತಂದೆ ಮತ್ತು ಮಗನ ದುಡಿಮೆ ಇಂದ ಜೀವನಕ್ಕೆ ಯಾವ ತೊಂದರೆ ಇರಲಿಲ್ಲ.

ಹೀಗಿರಬೇಕಾದರೆ ಮಗನು ಹೆಚ್ಚಿನ ದುಡ್ಡು ಸಂಪಾದನೆ ಮಾಡಲು ಹಳ್ಳಿ ಬಿಟ್ಟು ಪಟ್ಟಣ ಸೇರಿದ. ತಂದೆಯ ವಿರೋಧದ ನಡುವೆಯು ಹಳ್ಳಿ ಬಿಟ್ಟ. ಹಿರಿಯ ಜೀವ ಬಹಳ ನೊಂದುಕೊಂಡಿತು . ಆದರೆ ಏನು ಮಾಡೋದು. ಎದೆ ಎತ್ತರ ಬೆಳೆದಿರೋ ಮಗನ ಮೇಲೆ ಕೈ ಮಾಡಿ ಬುದ್ದಿ ಹೇಳಕ್ಕಾಗುತೋ ? ಇಲ್ಲ ಅಲ್ವೇ. ಹಾಗಂತ ಅವರು ಸುಮ್ಮನಾದರು. ಹೀಗೆ ಕೆಲವು ವರುಷಗಳು ಕಳೆದವು.

ಒಂದು ದಿನ ಮಗನು ಇದ್ದಕ್ಕಿದ್ದಂತೆ ಹಳ್ಳಿಯ ತನ್ನ ಮನೆಗೆ ಬಂದ. ಮಗನನ್ನು ನೋಡಿ ಹಿರಿಯ ಜೀವ ಹಿರಿ ಹಿರಿ ಹಿಗ್ಗಿತ್ತು. ಇನ್ನು ಇವನ ಮಾಡುವೆ ಮಾಡಿಸಿದರೆ ಅಲ್ಲಿಗೆ ನಮ್ಮ ಜವಾಬ್ದಾರಿ ಮುಗಿದ ಹಾಗೆ ಎಂದು ಮನಸಿನಲ್ಲಿ ಅಂದುಕೊಂಡರು. ಆದರೆ ಪೇಟೆಯಿಂದ ಹಳ್ಳಿಗೆ ಬಂದ ಮಗನ ನಡೆತೆಯಲ್ಲಿ ಬಹಳ ಬದಲಾವಣೆಯಾಗಿರುವುದನ್ನು ತಾಯಿ ಗಮನಿಸಿದರು.
ಮೊದಲು ಸಮಯಕ್ಕೆ ಸರಿಯಾಗಿ ಜಪ ತಪ ಮತ್ತು ಸಂಧ್ಯಾವಂದನೆಗಳನ್ನು ಮಾಡುತ್ತಿದ ಮಗ, ನಂತರ ಸೂರ್ಯ ನೆತ್ತಿಯ ಮೇಲೆ ಹೋದ ನಂತರವೇ ಎದ್ದೆಳುತ್ತಿದ್ದ. ಇತ್ತೀಚಿಗಷ್ಟೇ ಪಟ್ಟಣ ದಿಂದ ಬಂದ ಮಗನನ್ನು ಇದರ ಬಗ್ಗೆ ಕೇಳಿದರೆ ಕೋಪಿಸಿಕೊಂಡಾನು ಎಂದು ಅವರು ಸುಮ್ಮನಾದರು.

ವಾರದ ನಂತರ ಮಗನು ಮತ್ತೆ ಪಟ್ಟಣಕ್ಕೆ ಹೊರಟನು. ಆದರೆ ಮತ್ತೆ ತಿರುಗಿ ಬಂದದ್ದು ೨ ವರುಷದ ನಂತರ. ಹಾ ಅಂದ ಹಾಗೆ ಬಂದದ್ದು ಒಬ್ಬನೇ ಅಲ್ಲ, ಜೊತೆಗೆ ಹೆಂಡತಿಯನ್ನು ಕರೆದುಕೊಂಡು ಬಂದ. ಈ ಆಘಾತ ವನ್ನು ತಾಳಲಾರದೆ ಆ ಹಿರಿಯರು ಹಾಸಿಗೆ ಹಿಡಿದರು. ಅವರ ಹೆಂಡತಿ ಮೌನಕ್ಕೆ ಶರಣಾದರು. ಮನೆಗೆ ಬಂದ ಸೊಸೆ, ಒಂದು ಕಂಡೀಶನ್ ಹಾಕಿದಳು. ತಾನು ಮನೆಯಲ್ಲಿ ಇರಬೇಕೆಂದರೆ ಮೊದಲು ಈ ವಯಸ್ಸಾದ ಮುದಿಗೊಬೆಗಳನ್ನು ಮನೆಯಿಂದ ಹೊರಹಾಕಬೇಕೆಂದುಳು.
ಮುತ್ತು ಕೊಟ್ಟವಳು ಬಂದಾಗ ತುತ್ತು ಕೊಟ್ಟವಳು ಎಲ್ಲಿ ನೆನಪಿರ್ತಾರೇ ಹೇಳಿ. ಮಗ ಹೆಂಡತಿ ಹೇಳಿದ ಹಾಗೆ ಮಾಡಿದ. ಅವರಿಬ್ಬರನ್ನು ಅನಾಥಾಶ್ರಮಕ್ಕೆ ಸೇರಿಸಿದ.

ಮಗನು ಪಟ್ಟಣಕ್ಕೆ ಸೇರಿ ಬರಿ ಮಂತ್ರ ವೊಂದೇ ಅಲ್ಲ , ಕುಡಿತ , ಸಿಗರೇಟ್ ಗಳ ಚಟ ವನ್ನು ಕಲಿತ. ತಮಾಷೆ ಎಂದರೆ, ಮನೆಯನ್ನು ಬೆಳಗ ಬೇಕಿದ್ದ ಸೊಸೆ, ಗಂಡನ ಜೊತೆ ಸೇರಿ ತಾನು ಕುಡಿಯುತ್ತಿದ್ದಳು. ವ್ರುದ್ದಾಶ್ರಮಕ್ಕೆ ಸೇರಿದ ತಂದೆ, ಒಂದೇ ವರುಷದಲ್ಲಿ ತೀರಿಕೊಂಡರು. ಅವರ ಜೊತೆ ಅವರ ಧರ್ಮಪತ್ನಿಯು ಇಹಲೋಕ ತ್ಯಜಿಸಿದರು.

ಇನ್ನು ಮಗನ ಕಥೆ ಕೇಳಲೇ ಬೇಡಿ.ಸಿಕ್ಕ ಸಿಕ್ಕ ಕಡೆಯೆಲ್ಲ ಕುಡಿದು ಅವಾಂತರ ಮಾಡುತಿದ್ದ.ಒಮ್ಮೆ ಅಂತು ಕುಡಿದ ಅಮಲಿನಲ್ಲಿ ಮನೆಯ ಪಕ್ಕ ಹರಿಯುತ್ತಿದ್ದ ಚರಂಡಿಯೆಲ್ಲಿ ಬಿದ್ದು ರಾತ್ರಿಯನ್ನು ಕಳೆದ. ಹೋದ ವಾರ ನಮ್ಮ ಮನೆಗೆ ಒಂದು ಕರೆ ಬಂತು. ಹೀಗೆ ಬೆಳಗಿನ ಜಾವ ಕುಡಿದು,ನಶೆಯಲ್ಲಿ ತನ್ನ ಬೈಕ್ ಓಡಿಸುತ್ತಿರಬೇಕಾದರೆ ಎದಿರು ದಿಕ್ಕಿನಿಂದ ಬಂದ ಬಸ್ಸಿಗೆ ಮುಖಾಮುಖಿ ಡಿಕ್ಕಿ ಆಗಿ ಸ್ಥಳದಲ್ಲೇ ಸಾವನ್ನಪ್ಪಿದನಂತೆ. ವಿಪರ್ಯಾಸವೆಂದರೆ ಹೆಣವು ಮನೆಯ ಮುಂದೆ ಬಂದರು ಅಳೋದಕ್ಕೆ ಅಲ್ಲಿ ಒಬ್ಬರು ಇರಲಿಲ್ಲ. ಹೆಂಡತಿ ಆಗಲೇ ಗಂಟು ಮೂಟೆ ಕಟ್ಟಿ ತನ್ನ ತಾಯಿಯ ಮನೆಗೆ ಹೋಗಿದ್ದಳು.

ಒಂದು ಸುಂದರವಾದ ಜೀವನ ಹೀಗೆ ದುರಂತ ಅಂತ್ಯ ಕಾಣುತ್ತೆಯೆಂದು ನಾನು ಕನಸು ಮನಸ್ಸಿನಲ್ಲು ಅಂದುಕೊಂಡಿರಲಿಲ್ಲ.ಅದಕ್ಕೆ ಹೇಳೋದು , ಕುಡಿತದ ದಾಸನಾದರೆ , ಆ ಕುಡಿತದ ದಾಸ್ಯವೇ ಜೀವನದ ಅಂತ್ಯವಾಗುವುದು.

ಇಂತಿ,
ಕಾರ್ತಿಕ್ ಭಟ್

4 thoughts on “ಕುಡಿತವೇ ಜೀವನ ಆಗಬಾರದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s