Jatta Pettu Kottu Hoda

jatta kannada movie songs

ಏನಪ್ಪಾ  ಇದು ,   ಜಟ್ಟ ಪೆಟ್ಟು ಕೊಟ್ಟ ಅಂತ ಇವನು ಯಾಕೆ ಹೇಳಿದ ಅಂತ  ಯೋಚನೆ ಮಾಡ್ತಾ ಇದ್ದೀರಾ ? ಈ ಜಟ್ಟ ಪೆಟ್ಟು ಕೊಟ್ಟಿದ್ದು   ದೇಹಕ್ಕಲ್ಲ . ಆದರೆ ಮನಸಿಗೆ, ಮೆದುಳಿಗೆ . ಬಹುಷ ಈ ಲವ್ವು ಡವ್ವು  ಸಿನಿಮಾ ಬಿಟ್ಟು ನಮ್ಮ ಕನ್ನಡ  ಪ್ರೇಕ್ಷಕರು ಪ್ರಬ್ಬುದ್ದರಾಗಿ , ಬೇರೆ ಆಲೋಚನೆ , ಬೇರೆ ಕಥೆ ಯುಳ್ಳ ಸಿನಿಮ ವನ್ನು ನೋಡುತ್ತಾರೆ , ನೋಡಿ ಗೆಲ್ಲಿಸುತ್ತಾರೆ ಅನ್ನೋ ವಿಶ್ವಾಸ ವಿಟ್ಟು , ಪ್ರೀತಿಯಿಂದ ಅಷ್ಟೇ ಜಾಗರೂಕತೆಯಿಂದ ಜಟ್ಟ ವನ್ನು  ನಿರ್ದೇಶಿಸಿದ  ಗಿರಿರಾಜ್ ಗೆ ಮೊದಲು ಒಂದು ದೊಡ್ಡ ಸಲಾಮು ಕೊಡೋಣ .

ಅವತ್ತು ನಾನು , ಖನಿಜ್, ಸಂದೀಪ್, ಭರತ್ ಮತ್ತು ಸೋಮಶೇಕರ್ ಗೋಪಾಲನ್ ಸಿನಿಮಾಗೆ ಲಗ್ಗೆ ಇಟ್ಟೆವು . ಬಹುಷ  ಥಿಯೇಟರ್ನಲ್ಲಿ ೪೦-೫೦ ಜನ ಇದ್ದಿರಬಹುದು.  ನಾನು  ಸ್ವಲ್ಪ ಚಿತ್ರ  ಪ್ರೇಮಿ . ಒಳ್ಳೆ ಪ್ರಯೋಗಕ್ಕೆ ಖಂಡಿತ ಪ್ರೋತ್ಸಾಹ ಕೊಟ್ಟೆ ಕೊಡ್ತೀನಿ . ಹಾಗು ನನ್ನ ಪ್ರಕಾರ , ಕೊಡಲೇ ಬೇಕು. ನನ್ನ ಸ್ನೇಹಿತರದು ಇದೇ  ಅಭಿಮತ . ಮೊದಲಿಗೇ online  review  ನೋಡಿದೆ . ಯಾಕೋ ಚಿತ್ರ ನಾಟ್  ಬ್ಯಾಡ್ ಅಂತ ಅನ್ನಿಸಿತು. ನಂತರ ಪೇಪರ್ ರಿವ್ಯೂ ನೋಡಿದೆ . ಅದು ಓಕೆ ಅನ್ನಿಸಿತು. ಸರಿ ಇನ್ನು ತಡ ಏಕೆ ಅಂತ ನಾವೆಲ್ಲರು  ಸಿನಿಮಾಗೆ  ಹೋದ್ವಿ .

ಚಿತ್ರ ಹೇಳಬೇಕೆಂದರೆ ಒಂದು ಸರಳವಾದ ಕಥೆ. ಆದರೆ ಆ ಕಥೆಯೊಳಗೆ  ಇರುವ ನಾಯಕನ  ಅಂದರೆ ಜಟ್ಟನ ಮನಸಿನೊಳಗೆ ನಡೆಯುವ ಆಂತರಿಕ ಯುದ್ದ, ತಳಮಳ, ಯಾರನ್ನು ನಂಬುವುದು , ಯಾರನ್ನು ಬಿಡುವುದು… ಯಾವುದು ಸತ್ಯ, ಯಾವುದು ಮಿಥ್ಯ, ಕೊನೆಗೆ ತಾನು ನಂಬಿ ಕೊಂದು ಬಂದ ತಾಯಿ ದೇವರ (ಹಿಂದಿನ) ನಿಜ ಕಥೆ ತಿಳಿದಾಗ  ಅವನಿಗೆ ಆಗುವ ಸಂಕಟ .. ಅಬ್ಬ… ಅದನ್ನು ತೋರಿಸಿಕೊಟ್ಟ ಗಿರಿರಾಜ್ ರವರಿಗೆ ಮತ್ತೊಂದು  ನಮಸ್ಕಾರ.

basically ಹೆಣ್ಣು ಯೆಂದರೆ  ಬರಿ ಅಡಿಗೆ ಮಾಡಿ , ಗಂಡನ ಮತ್ತು ತನ್ನ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವ ಜೀವ ಅಲ್ಲ. ಆಕೆಗೆ ತನ್ನದೇ ಆದ ಸ್ವತಂತ್ರ ಇದೆ. ತನ್ನದೇ ಆದ ಆಸೆ , ಗುರಿ ಇದೆ . ತನಗೆ ತನ್ನದೇ ಗೌರವ ಸಂಪಾದಿಸುವ ಹಕ್ಕು ಇದೆ. ಅಂಬೇಡ್ಕರ್ ರವರು ಇದನ್ನೇ ಹೇಳಿದ್ದು . ಹೆಣ್ಣು ನಾಲ್ಕು ಗೋಡೆಯ ದಿಂದ  ಜಿಗಿದು ಹೊರಗೆ ಬಂದರೆ , ಆ ಹೆಣ್ಣನ್ನು ಸ್ವೀಕರಿಸುವ ಸಮಾಜವೆ ನಿಜವಾದ ಸ್ವಾತಂತ್ರ್ಯ ಸಮಾಜ.

ಆದರೆ ಅದೇ ಕೆಲವು ಧರ್ಮ ರಕ್ಷಕರು ಸಂಸ್ಕೃತಿ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಸುವ ದೌರ್ಜನ್ಯದಿಂದ ಹೇಗೆ ತಾನೇ ಸಮಾಜದ ಸರ್ವತೋಮುಕ ಅಭಿವೃದಿ ಸಾಧ್ಯವಾಗುವುದು ಎಂಬುದರ ಬಗ್ಗೆ ಬೆಳಕನ್ನು ಚೆಲ್ಲಿದ್ದಾರೆ . ಇಲ್ಲಿ ಗಿರಿ ರಾಜ್ ರ ಕಮ್ಯುನಿಸ್ಟ್ idealogy ಸ್ಪಷ್ಟ ವಾಗಿ ಕಾಣಬಹುದು . ಅವರು ಚಿತ್ರ ದಲ್ಲಿ ಕ್ಯಾಪಿಟಲಿಸ್ಟ್ ವಿರುದ್ದ ಮತ್ತು ಕ್ಯಾಪಿಟಲಿಸಂ ಬಗ್ಗೆ ಕಠಿಣ ಸ್ವಭಾವ ತೋರಿದ್ದರೆ . ಇರಲಿ ಅದು ಅವರ ವ್ಯಯಕ್ತಿಕ ವಿಚಾರ .

ಇಲ್ಲಿ ಜಟ್ಟ ತಾನು  , ಸಂಸ್ಕೃತಿ ರಕ್ಷಿಸುವ ಗುರುವನ್ನು ನಂಬುವುದೋ ಅಥವಾ ಪ್ರೀತಿಯ ನೆಲೆ ಮೇಲೆ ನಿಂತಿರುವ ತನ್ನ ಫಾರೆಸ್ಟ್ ಇನ್ಸ್ಪೆಕ್ಟರ್ ರವರ ಮಾತು ನಂಬುವುದೋ ಅನ್ನುವ ಜಿಜ್ಞಾಸೆ ಗೊಳ ಪಡುತ್ತಾನೆ . ಅಂತು ಕೊನೆಗೆ ತನ್ನೊಳಗೆ ಪಡೆದ ಸತ್ಯವನ್ನು ತಿಳಿದುಕೊಳ್ಳುವವೊಳಗೆ  ನಡೆಯ ಬಾರದು ನಡೆದು ಹೋಗುತ್ತದೆ . ಅದೇ ಜಟ್ಟ  !!!

ನಾನು ಇನ್ನು ಎಷ್ಟೋ ವಿಷಯಗಳು ಇಲ್ಲಿ ಬರೆದಿಲ್ಲ. ಯಾಕಂದರೆ ಅವುಗಳನ್ನು  ನೋಡಿದರೆ    ಚಂದ , ಬರೆದರೆ ಅಲ್ಲ. ಇನ್ನು ತಡ ಏಕೆ ? ಹೋಗಿ ಚಿತ್ರವನ್ನು ನೋಡಿಕೊಂಡು ಬನ್ನಿ

ಇಂತಿ ನಿಮ್ಮ

ಕಾರ್ತಿಕ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s