ಮಂಗನ ಕೈಯಲ್ಲಿ ಮಾಣಿಕ್ಯ !

ಮಂಗನ ಕೈಯಲ್ಲಿ ಮಾಣಿಕ್ಯ !

ಈ ಘಟನೆ ನಡೆದದ್ದು ನನ್ನ ಇಂಜಿನಿಯರಿಂಗ್ ದಿನಗಳಲ್ಲಿ. ಆಗ ನಾನು ನನ್ನ ಕೊನೆಯ ಸೆಮಿಸ್ಟರ್ ನಲ್ಲಿ ಓದುತ್ತಿದೆ. ಅದು ಓದುತಿದ್ದೇನೋ ಅಥವ ಉದುತಿದ್ದೆನೊ ಕೇಳಬೇಡಿ. ಒಟ್ನಲ್ಲಿ ಏನೋ ಮಾಡುತ್ತಿದೆ. ನಮ್ಮ ಕಾಲೇಜಿನಲ್ಲಿ ಆಗ ಕ್ಯಾಂಪಸ್ ಇಂಟರ್ವ್ಯೂ ಸಮಯ. ಅಬ ಅಬ ಏನ್ ಭಯ, ಏನ್ ಗಾಬರಿ ಅಂತೀರಿ. ಕುಂತ್ರೆ ಕಷ್ಟ , ನಿಂತ್ರೆ ಇನ್ನು ಕಷ್ಟ. ಹಾಗಿತ್ತು ನಮ್ಮ ಪರಿಸ್ತಿತಿ. ಎಲ್ಲರಿಗೂ ಅವರವರ ಭವಿಷ್ಯದ ಚಿಂತೆ. ಎಲ್ಲಿ ಯಾವ ಕಂಪನಿಯಲ್ಲಿ ಕೆಲಸ ಸಿಗುತ್ತೋ ಅಂತ. ನನಗು ಸ್ವಲ್ಪ ಟೆನ್ಶನ್ ಇತ್ತು ಅನ್ನಿ.

ಆದರೆ ಹೊರಗಡೆ ತೋರಿಸಕಾಗುತ್ತದಯೇ?ಕಾಲೇಜಿನ ಹುಡುಗಿಯರು ಈವನು ಪುಕುಲ ಅಂತ ಅಂದುಕೊಂಡರೆ ?? ಅವಮಾನ ಅಲ್ಲವೇ. ! ಇರಲಿ, ಪರಿಸ್ತಿತಿ ಹೀಗಿರಬೇಕಾದರೆ , ಒಂದು ಪ್ರಾಡಕ್ಟ್ ಬೇಸ್ಡ್ ಕಂಪನಿ ಇಂಟರ್ವ್ಯೂಗೆ ನಮ್ಮ ಕಾಲೇಜಿಗೆ ಬಂತು.ಜನ ಮರುಳೋ ..ಜಾತ್ರ ಮರುಳೋ ಅನ್ನುವ ಹಾಗೆ ಎಲ್ಲರೂ ಅವರ ಮೊದಲನೆಯ ಸುತ್ತಿನ ಪರೀಕ್ಷೆಗೆ ಬರೆದದ್ದೇ ಬರೆದದ್ದು.

ನಾನು ಗುಂಪಲ್ಲಿ ಗೋವಿಂದ ಅನ್ನೋ ಹಾಗೆ ಪರೀಕ್ಷೆ ಬರೆದೆ. ಸುಮಾರು ಒಂದು ವಾರದ ನಂತರ ಅದರ ಫಲಿತಾಂಶ ಬಂತು. ಏನ್ ಆಶ್ಚರ್ಯ !.. ೨೦೦ ಜರನಲ್ಲಿ ಅವರು ಆಯಿಕೆ ಮಾಡಿದ್ದು ಬರಿ ೧೦ ಜನರನ್ನ. ಅದರಲ್ಲಿ ನಾನು ಒಬ್ಬನಾಗಿದ್ದೆ. ಒಹೋ ಸಿಕ್ಕಿತಲ್ಲಪ ಕೆಲಸ ಅಂತ ನಾನು ಖುಷಿಯಾಗಿದ್ದೆ, ಸ್ನೇಹಿತ ಬಂದು ಹೇಳಿದ.. “ ಅಣ್ಣ , ಅದು ಬರಿ ಮೊದಲನೆಯ ಸುತ್ತು. ಆ ಕಂಪನಿಯವರು ೫ ಸುತ್ತು ನಡೆಸುತ್ತಾರಂತೆ. ೫ ಸುತ್ತು ಪಾಸ್ ಮಾಡಿದರೆ ಮಾತ್ರ ಕೆಲಸ .. ತಿಳಿತ್ಹೋ “ …ಅಂದ. ಯಾಕೋ ತಲೆ ಗಿರ್ ಎಂದು ಸುತ್ತುತ್ತ ಇರುವ ಹಾಗೆ ಕಂಡಿತು.

ಒಂದು ವಾರದ ನಂತರ ಕಂಪನಿಯಲ್ಲಿ ಮುಂದಿನ ಸುತ್ತಿನ ಇಂಟರ್ವ್ಯೂಗೆ ಕರೆ ಬಂತು. ಸಂಕಟ ಬಂದರೆ ವೆಂಕಟರಮಣ ಎನ್ನುವ ಹಾಗೆ ದೇವರಿಗೆ ಒಂದ್ ಅದ್ ಬಿದ್ದೆ. ಬಂದದ್ದು ಬರಲಿ , ಎದುರಿಸೋಣ ಎಂಬಂತಹ ಹುಸಿ ದೈರ್ಯ ಬಂತು. ಆ ಇಂಟರ್ವ್ಯೂನ ಗಮ್ಮತ್ತನ್ನು ನಾನು ನಿಮಗೆ ಮುಂದೆ ಎಂದಾದರೂ ಹೇಳುವೆ. ಅದೇ ಒಂದು ಅಂಕಣ ವಾಗಬಹುದೇನೋ .. ಅದರ ಮಜಾ ಹೇಳತೀರದು. ಬಹುಷ ಅದರ ಮೇಲೆ ಒಂದು ಒಳ್ಳೆ ಹಾಸ್ಯ ಚಲನಚಿತ್ರ ಮಾಡಬಹುದೇನೋ !ಆದರೆ ಈಗ ವಿಷಯಕ್ಕೆ ಬರೋಣ. ಆ ೧೦ ಮಂದಿಯಲ್ಲಿ ಬರಿ ೩ ಮಂದಿಯನ್ನು ಮಾತ್ರ ಕೆಲಸಕ್ಕೆ ಆಹ್ವಾನೆ ಸಿಕಿತ್ತು.

 

ಕೋದಂಡರಾಮನ ದಶೆ ಇರಬೇಕೇನೋ… ಅದರಲ್ಲಿ ನಾನು ಒಬ್ಬನಾಗಿದ್ದೆ. ವಿಷಯ ಶುರುವಾಗುದೆ ಇಲ್ಲಿಂದ! ಆ ಕಂಪನಿಯ ಪಾಲಿಸಿ ಪ್ರಕಾರ, ಯಾವುದೇ ವಿದ್ಯಾರ್ಥಿ ತನ್ನ ಕೊನೆಯ ಸೆಮಿಸ್ಟರ್ ನಲ್ಲಿ ಕೆಲಸ ಸಿಕ್ಕರೆ (ಅಂದರೆ ತಮ್ಮದೇ ಕಂಪನಿಯಲ್ಲಿ) ಅಂತಃ ವಿದ್ಯಾರ್ಥಿಗೆ ತಿಂಗಳಿಗೆ ೩೦೦೦ ಎಂಬಂತೆ ಒಟ್ಟು ೬ ತಿಂಗಳಿಗೆ ೧೮೦೦೦ ರುಪಾಯಿ ಕೊಡಬೇಕೆಂಬ ನಿಯಮವಿದೆ. ವಿದ್ಯಾರ್ಥಿಯ ದಿನಗಳಲ್ಲಿ ನೆಟ್ಟಗೆ ಒಂದು ಸಾವಿರ ರುಪಾಯಿ ನೋಡದ ನಮಗೆ ಪುಕಟ್ಟೆಯಾಗಿ ೩೦೦೦ ಸುಗುತ್ತದೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ ? ಅಂತು ಆ ಸುದಿನ ಬಂತು. ೩೦೦೦ ರುಪಾಯಿಯ ಚೆಕ್ ಮನಗೆ ಬಂತು. ಸೀದಾ ಬ್ಯಾಂಕಿಗೆ ಹೀಗಿ ಅದನ್ನ ಡ್ರಾ ಮಾಡಿಸಿ ಹಣವನ್ನು ತೆಗೆದು ಮನೆಗೆ ಬಂದೆ.ಅದೇ ಸಮಯದಲ್ಲಿ ನಮ್ಮ ಏರಿಯಾದಲ್ಲಿ ಒಂದು ಹೊಸ ಕ್ಷೌರದ ಅಂಗಡಿ ತೆರೆಯಲ್ಪಟ್ಟಿತು. ಹೆಸರು ಏನು ಗೊತ್ತೇ ? “ಮಿರಾಕಲ್ ಟಚ್ “ ಅಂತ. ಅಬ್ಬ ಅಬ್ಬ… ಏನು ಸೊಬಗು ಅಂತಿರಿ.. ಜಿಗ ಜಿಗ ಲೈಟ್ಗಳು, ಮಿಕ ಮಿಕ ಕಣ್ಣು ಬಾಯಿ ಬಿಟ್ಟು ನಡೆದು ಹೋಗುವ ಜನಗಳು, ಟಸ್ಸು ಪುಸ್ಸು ಎಂದು ಆಂಗ್ಲ ಭಾಷೆಯಲ್ಲಿ ಮಾತನಾಡುವ ಲಲನೆಯರು ಸಹ ಒಂದು ನಿಮಿಷಕ್ಕೆ ಆ ಅಂಗಡಿಯನ್ನು ನೋಡದೆ ಹೋಗಲಿಲ್ಲ. ಅಲ್ಲ ಅಂತು ಕೈ ಯಲ್ಲಿ ದುಡ್ಡಿದೆ. ಕೆಟ್ಟ ಅಭ್ಯಾಸ ಅಂತು ಏನು ಇಲ್ಲ.

ಒಂದು ಸಲ ಈ ಸಲೂನ್ ಗೆ ಹೋಗಿ. ಜಿಗಿ ಜಿಗಿ ಅಂತ ಯಾಕೆ ತಲೆ ಕೂದಲು ಕತ್ತರಿಸಿಕೊಂಡು , ಒಂದು ಒಳ್ಳೆ ಹೆಡ್ ಮಸಾಜ್ ಮಾಡಿಸಿಕೊಳ್ಳಬಾರದು ? ಕೈ ಅಲ್ಲಿ ೩೦೦೦ ರುಪಾಯಿ ಇದೆ. ಅಬ್ಬಬ್ಬ ಅಂದರು ಅವನು ೨೫೦ ಕೇಳಿಯಾನು… ನನ್ನ ಹತ್ತಿರ ಆಗ ಇನ್ನು ೨೭೫೦ ರುಪಾಯಿ ಇರುತ್ತದೆ ಅಲ್ವ … ಇಂತ ಯೋಚನೆ ಬಂದದ್ದೆ ತಡ ಸೀದಾ ಆ ಅಂಗಡಿಯ ಒಳಗೆ ನುಗ್ಗಿದೆ. ಅಹ.. ಏನ್ ಸುಂದರ ಲೋಕ ಅಂತೀರಿ. ಗೋಡೆಯೆಲ್ಲ ನಸುಗೆಂಪು. ಸುಂದರ ಸುವಾಸನೆ. , ಮೈ ಜಲ್ ಎನ್ನುವ ಚಳಿ.

ನಾನು ನೋಡಿದ ಮೊದಲ Air Conditioned ಕ್ಷೌರದ ಅಂಗಡಿ ಅದಾಗಿತ್ತು.ಒಳೆಗೆ ಹೋದರೆ “Reception” ನಲ್ಲಿ ಒಂದು ಸುಂದರ ಹೆಣ್ಣು ಕುಳಿತ್ತಿದಳು. ಮೇಡಂ ನನಗೆ ಕಟಿಂಗ್ ಮಾಡಿಸಬೇಕು .. ಎಷ್ಟು ಚಾರ್ಜ್ ಅದಕ್ಕೆ… ಎಂದು ಕೇಳಬೇಕು ಎಂದು ಅಂದುಕೊಂಡೆ.,ಆದರೆ ಆ ರೀತಿ ಕೇಳುವುದರಿಂದ ನನಗೆ ಅವಮಾನ ಆಗುವುದು. ಏಕೆಂದರೆ …ಇಲ್ಲಿ ಬಂದು ದುಡ್ಡಿನ ಚರ್ಚೆ ಮಾಡುವ ಇವನು ಚಿಲ್ಲರೆ ಮನುಷ್ಯನೇ ಇರಬೇಕು.. ಎಂದು ಅವಳು ಅಂದುಕೊಂಡರೆ ನನಗೆ ಅವಮಾನವಲ್ಲವೇ !!?? ಸರಿ, ಏನಾದರಾಗಲಿ ಯೆಂದು ಕೊಂಡು ಸೀದಾ ಆಕೆಯ ಬಾಳಿ ಹೋದೆ. ಅಂತು ಶಾಲೆಯಲ್ಲಿ ನನಗೆ ಒಳ್ಳೆ ಇಂಗ್ಲಿಷ್ ಮೇಸ್ಟ್ರು ಇದ್ದರು..ಆದಕಾರಣ ಇಂಗ್ಲಿಷ್ ಭಾಷೆಯನ್ನು ಸುಮಾರಾಗಿ ಸಂಭಾಳಿಸ ಬಲ್ಲೆ. “Madam I need a haricut” ಅಂದೆ. ಅವಳು ನನ್ನನ್ನು ಇನ್ನೊಂದು ಕೊಠಡಿಯೊಂದಕ್ಕೆ ಕರೆದೂಯ್ದು ಅಲ್ಲಿ ಒಂದು ಕುರ್ಚಿಯ ಮೇಲೆ ಕುಳಿತಿರಲು ಹೇಳಿದಳು.

ಗುರುಗಳ ವಿದೇಯ ಶಿಷ್ಯನಂತೆ ನಾನು ಅವಳು ಹೇಳಿದ ಹಾಗೆ ಹೋಗಿ ಕುಳಿತೆ.ಸ್ವಲ್ಪ ಸಮಯದ ನಂತರ ಒಬ್ಬ ಹುಡುಗ ಬಂದ. ನೋಡಲು ಸುಮಾರು ನನ್ನ ವಯಸಿವನಾಗಿದ್ದ. ೧೮-೨೦ ಇರಬಹುದೇನೋ. ಬಂದವನೇ ಬೆಂಗಳೂರಿನ ಟೆಲಿಫೋನ್ ಪುಸ್ತಕ ಇರುವ ಹಾಗೆ ಒಂದು ದೊಡ್ಡ ಪುಸ್ತಕವನ್ನ ನನ್ನ ಕೈಗಿತ್ತು ..ಸರ್ ಇದರಲ್ಲಿ ಯಾವ ಹೀರೋ ತರ ನಾನು ನಿಮಗೆ ಹೇರ್ ಸ್ಟೈಲ್ ಮಾಡಲಿ… ಹೇಳಿ ಎಂದ. ಪರೀಕ್ಷೆಗೂ ನಾನು ಅಷ್ಟು ದೊಡ್ಡ ಹೊತ್ತಿಗೆ ಹೊರಲಿಲ್ಲವೇನೋ. ಅಷ್ಟು ಭಾರವಾಗಿತ್ತು ಈ ಹೊತ್ತಿಗೆ.ಅದರಲ್ಲಿ ಶಾರುಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಟಾಮ್ ಕ್ರೂಸ್ , ಅಕ್ಷಯ್ ಕುಮಾರ್, ಶಿವರಾಜ್ ಕುಮಾರ್ , ಪುನಿತ್ ರಾಜ್ ಕುಮಾರ್, ಯಶ್… ಮುಂತಾದ ಹಲವು ನಟರ ಬೇರೆ ಬೇರೆ ಬಗೆಯೆ ಹೇರ್ ಸ್ಟೈಲ್ ಗಳಿದ್ದವು.

ಅವುಗಳ್ಳನ್ನು ನೋಡಿದ ನನಗೆ ಇರೋ ಮೂರು ಮತ್ತೊಂದು ಕೂದಲು ಸಹ ಉದುರಕ್ಕೆ ಪ್ರಾರಂಭವಾಯಿತು. ಏನ್ ಶಿವ.. ಇಲ್ಲಿಗೆ ಬಂದು ತಪ್ಪು ಮಾಡಿದನೇ ನಾನು . ಮನೆಯ ಹತ್ತಿರ ಇರುವ ಸೋಮನ ಅಂಗಡಿಗೆ ಹೋಗುವ ಬದಲು..

ನಿಮ್ಮ,

ಕಾರ್ತಿಕ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s