ತಾಳಿದವನು ಬಾಳಿಯಾನು

ನನಗೆ ಜೀವನದಲ್ಲಿ ಒಂದು ವಿಷಯ ಅಂತು ಸ್ಪಷ್ಟ ಆಗಿದೆ.  ಅದು ತಾಳಿದವನು ಬಾಳಿಯಾನು ಅಂತ. ಯಾವುದೇ ಕೆಲಸ, ಮಾತು,ಭಾವನೆ ಇರಲಿ ಅದನ್ನು ಯೋಚಿಸಿ , ಪರಾಮರ್ಶಿಸಿ ನೋಡಬೇಕೇ ವಿನಃ ಯಾವುದೇ ಕಾರಣಕ್ಕೂ ದುಡುಕಬಾರಾದು. ಇದು ನನಗು ಅನ್ವೈಸುತ್ತೆ . ಎಷ್ಟೋ ಸಂದರ್ಬದಲ್ಲಿ ನಾನು ಲೆಕ್ಕ ವಿಲ್ಲದಷ್ಟು ತಪ್ಪು ನಿರ್ದಾರಗಳನ್ನು ನನ್ನ ಜೀವನದಲ್ಲಿ ತೆಗೆದುಕೊಂಡಿದ್ದೇನೆ.  ಎಲಯಾನೋರ್ ರೂಸ್ವೆಲ್ಟ್ ಒಮ್ಮೆ ಒಂದು ಮಾತನ್ನು ಹೇಳಿದ್ದರು. “Learn from the mistakes of others. You can’t live long enough to make them all yourself. ” . ಆದರೆ ನಾನು ಮಾತ್ರ ಅವರ ಉಪದೇಶವನ್ನು ಗಣನೆಗೆ ತೆಗೆದು ಕೊಂಡೆ ಇಲ್ಲ . ಕಾರಣ ನಾನು ಎಷ್ಟು ತಪ್ಪುಗಳನ್ನ ಮಾಡಿದೆನೋ ನನಗೆ ಗೊತ್ತಿಲ್ಲ.!

ಅಂದು ನುಟನ್ ರವರು ಹೊರಗೆ ಹೋಗಿದ್ದರು. ಮೇಜಿನ ಮೇಲೆ ಹಲವಾರು ರಿಸರ್ಚ್  ದಾಖಲೆಗಳು ಇದ್ದವು.ಸುಮಾರು ೨೦ ವರುಷದ ಶ್ರಮ ಆ ದಾಖಲೆಗಳಲ್ಲಿ ಇದ್ದವು . ಆದರೆ ನಡೆಯಬಾರದ ಘಟನೆ ನಡೆದು ಹೋಯಿತು .

 

Issac Newton

 

ಹೌದು , ಅವರ ಸಾಕು ನಾಯಿ ಡೈಮಂಡ್  ನಿಂದ ಆಕಸ್ಮಿಕವಾಗಿ ಮೇಜಿನ ಮೇಲೆ ಉರಿಯುತಿದ್ದ ಮೇಣದಬತ್ತಿ  ಆ ದಾಖಲೆಗಳಿಗೆ ಆಂಟಿ , ಆ ದಾಖಲೆಗಳು ಸುಟ್ಟು ಕರಕಲಾದವು. ಆಗ ಅವರ ಪ್ರಯೋಗ ಶಾಲೆಗೆ ಬಂದ ಐಸಾಕ್ , ಈ ಘಟನೆ ನೋಡಿ ಹೌಹಾರಿದರು … ತಾಳ್ಮೆ ಸಹನೆ ಕಳೆದುಕೊಳ್ಳಲಿಲ್ಲ . ಬದಲಾಗಿ ಡೈಮಂಡ್ ನ ಮುದ್ದಿನಿಂದ ಗುದ್ದಿ , ಮತ್ತೆ ತಮ್ಮ ಪ್ರಯೋಗದಲ್ಲಿ ಮಗ್ನನಾದರು.

ಈಗ ಹೇಳಿ, ಇಂತಹ ಇಚ್ಚ ಶಕ್ತಿ ನಿಮಗಿದೆಯೇ. ಒಂದು ಚಿಕ್ಕ ಫೋನ್, ಪೆನ್ ,ಪೆನ್ ಡ್ರೈವ್   ಕಳೆದು ಹೋದರೆ , ಹಂಚು ಹರೋವಷ್ಟು ಗಲಾಟೆ ಮಾಡುವ ನಾವು , ಹೇಗೆ ತಾನೇ ಈ ಸಹನೆ ಯನ್ನ ಪಡೆಯಬಲ್ಲೆವು.? ಆದರೆ ಈ ಬರವಣಿಗೆಯ  ಉದ್ದೇಶ ಮಾತ್ರ ಸ್ಪಷ್ಟ. ಏನೇ ಮಾಡಿದರು , ಎರಡೆರಡು  ಸಲ ಯೋಚನೆ ಮಾಡಿ . ದುಡುಕಬೇಡಿ . ಯಾಕೆಂದರೆ ಅದು ಬೇರೊಬ್ಬರ ಅಥವ ನಿಮ್ಮ ಜೀವನದ ಮೇಲೆ ಭಾರಿ ಪರಿಣಾಮ ಉಂಟುಮಾಡಬಹುದು.

 

ಇಂತಿ,

ನಿಮ್ಮ ಕಾರ್ತಿಕ್

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s