Yella Beku Aadre Voting beda !

politician-cartoon-in-india

 

 

ಇವರನ್ನು  ನಂಬಿಕೊಂಡರೆ , ಕೈ ಗೆ ಚಿಪ್ಪು  ಸಿಗೋದಿಲ್ಲ.  ಸ್ವಾಮಿ , ನಾನು ಹೇಳ್ತ ಇರೋದು ನಮ್ಮ ಬೆಂಗಳೂರಿನ ಜನರ ಬಗ್ಗೆ.  ಆವತು ಎಲೆಕ್ಶನ್ ಕಮಿಶನ್ ರವರು ಚುನಾವಣೆ ದಿನಾಂಕ ಪ್ರಕಟ ಮಾಡಿದ್ದೆ ತಡ, ಅಬ ಅಬ ,,,ಏನು ಉತ್ಸಾಹ , ಏನು ಕಳೆ, ಎಲ್ಲಿ ನೋಡಿದರು ಬರಿ ಚುನಾವಣದ್ದೆ ಮಾತು.

ಆ, ನಾನು ಹೇಳ್ತ ಇರೋದು ಫೇಸ್ಬುಕ್ ನಲ್ಲಿ ಆಗ ನಡೀತಾ ಇದ್ದ ಚಟುವಟಿಕೆ . ೧೦೦೦ ಸ್ಟೇಟಸ್ ಅಪ್‌ಡೇಟ್ ಗಳು , ನೂರಾರು ಲೈಕ್ ಗಳು , ಅಜ್ಜನ ಗಂಟಿನಂತೆ ರಾಜಕಾರಣಿಗಳ ಏನು ಪೇಜ್ ಶೇರಿಂಗ್ ಗಳ ಗೌಜು.
ನಾನಂತು ಇವುಗಳನ್ನ ನೋಡಿ, ಈ ಸಲ ನಮ್ಮ ಜನ ೧೦೦ ರಷ್ಟು ಮತದಾನ ಮಾಡಲಿದ್ದಾರೆ ಎಂದು ಅಂದುಕೊಂಡಿದ್ದೆ. ಆದರೆ ನಾವು ಅಂದುಕೊಂಡದ್ದು ಯಾವಾಗಲು ಆದರೆ ಅದಕ್ಕೆ ಜೀವನ ಅನುತ್ತೇವೆಯೇ ? ಇಲ್ಲ ತಾನೇ ?

ಇಲ್ಲು ನಡೆದದ್ದು ಅದೇ. ನಮ್ಮ ರಾಜ್ಯದಲ್ಲಿ ಕೇವಲ  ೬೫ ರಷ್ಟು ಜನ ಮತದಾನ ಮಾಡಿದ್ದಾರೆ. ಅದರಲ್ಲೂ ಬೆಂಗಳೂರಂತು ಬರೀ ೫೫ ರಷ್ಟು.

ಚುನಾವಣೆ ಇದ್ದಿದು ಗುರುವಾರದಂದು, ಶುಕ್ರವಾರ ಗುಡ್ ಫ್ರೈಡೇ ಅಂತ ರಾಷ್ಟ್ರೀಯ ಹಬ್ಬ. ಸೊ ಅವತ್ತು ರಜಾ , ಆಮೇಲೆ ಸಾಫ್ಟ್‌ವೇರ್ ಜನರಿಗೆ ಶನಿವಾರ ಮತ್ತು ಭಾನುವಾರ ಹೇಗಿದ್ದರೂ ರಜಾ. ಆಯಿತಲ್ಲ ಅಲ್ಲೇ!! ಬೋರೋಬಾರಿ ೪ ದಿನ ರಜಾ. ಎಲ್ಲರಲ್ಲು ಸಡಗರ , ಟ್ರಿಪ್ ಹೊಡೆಯಲು ! ಪಿಕ್ನಿಕ್ ಹೋಗಲು ! ಮಜಾ ಮಾಡಲು . ಮಾಡಲಿ ಅದರಲ್ಲಿ ಏನು ತಪಿಲ್ಲ. ಆದರೆ ಸಮಯ ? ಇದೇ   ಸಮಯ ಬೇಕಿತ್ತಾ ? ದೇಶಕೋಸ್ಕರ ಒಂದು ದಿನ ಕೊಡಲು ಇವರಿಗೆ ಆಗಲ್ಲವೇ ?

ವರುಷಕ್ಕೆ ೫ ಟ್ರಿಪ್ ಹೊಡೆಯುವ ಇವರು , ೫ ವರುಷಕ್ಕೆ ೧ ಟ್ರಿಪ್ ಬಲಿದಾನ ಕೊಡಲು ಆಗುವುದಿಲ್ಲವೇ ?

ಮೊನ್ನೆ ನನ್ನ ಸ್ನೇಹಿತ ಸಿಕ್ಕಿದ. ಹೀಗೆ ಮಾತನಾಡುತಿರಬೇಕಾದರೆ , “ಏನೋ ಮಗ, ಮತದಾನ ಮಾಡಿದೆಯಾ? ” ಅಂತ ಕೇಳಿದೆ . ಅದಕ್ಕೆ ಅವನು ” ಇಲ್ಲ ಕಣೋ, ವರ ಪೂರ್ತಿ ಸಿಕ್ಕಾಪಟ್ಟೆ ಕೆಲಸ ಇತ್ತು. ಸೊ ಸ್ವಲ್ಪ ಚಿಲ್ ಮಾಡನ ಅಂತ , ಗೋವ ಕ್ಕೆ  ಹೋಗಿದ್ದೆ ” ಅಂದ. ಅಂಡಿನಲ್ಲಿ ಕೆಂಡಕಾರಿತು , ಸುಮ್ಮನಾದೆ .

 

ಇದು ನಮ್ಮ ದೇಶದ, ಅಥವ ಬೆಂಗಳೂರಿನ ಜನರ ಸ್ತಿತಿ. ನಮಗೆ ಬದಲಾವಣೆ ಬೇಕು , ಆದರೆ ಆ ಬದಲಾವಣೆ ತರ್ಲಿಕ್ಕೆ ಬೇಕಾಗಿರೋ ಪರಿಶ್ರಮ ಬೇಡ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಪರಿವರ್ತನೆಯ ಕೂಗು ಹಾಕುತ್ತೇವೆ ಹೊರತು, ಮತಗಟ್ಟಿಗೆ ಹೋಗಿ ನಮ್ಮ ಹಕ್ಕನ್ನು ಚಲಾಯಿಸುವುದಿಲ್ಲ.

ಒಟ್ಟಿನಲ್ಲಿ ಈ ಸಲ ನಾನಂತೂ ನನ್ನ ಕರ್ತವ್ಯ ಮಾಡಿದೆ. ನೋಡೋಣ , ನಮ್ಮ ದೇಶದ ಹಣೆಬರಹ ಹೇಗಿದೆ ಅಂತ. ಯಾಕೋ ನನಗೆ ನಮ್ಮ ಬಗ್ಗೆಯೇ ಅನುಕಂಪ ಮೂಡಿಬರುತ್ತಿದೆ.

“Lets us all hope for good!! ”

Karthik

 

 

Advertisements

3 thoughts on “Yella Beku Aadre Voting beda !

 1. Hi Karthik,

  Very nice article. Its true that Bangloreans have shown how lazy they are when it comes being responsible citizens. I myself saw few of my friends leave for tourist spots for a long vacation.

  But it is not only the people to blame. When I had been to our local BBMP office to get my new Voting Card this is what a saw –
  1. A person had two entries in the Voter’s list, current residence and previous residence. There is no way BBMP could control this!!!
  2. Another person had 2 new ID cards, with same photo, name and address information. How come the election commission doesn’t have ways to control this.
  3. People are preferring to have 2 voter cards, one in Bangalore and the other in their native place!!!

  Imagine if there are at least 30 such people for every 100 voters. What would be the bigger picture then??!! I still doubt that the number of voters in Karnataka is 4.6 crores. It might be lesser than 3.5 crores.

  Cheers
  Abhi

   1. Yes Karthik.
    Instead of wasting huge money on implementing the Aadhar Card, the government could have spent on strengthening the Voter Registration process, and making it more vigilant and error-free. For the Aadhar registration, we provide every other detail from DOB to Retina Scan. Why can’t the election commission look into this and implement the same. At least we can reduce the number of duplicates and make sure that all genuine citizens get a chance to vote.

    Also there is no proper record of disabling the Voter Registration post-death of a person.
    With all the mishaps in the current system, we cannot go with the percentage details of Polls, the Election Commission gives us.

    Cheers,
    Abhi

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s