Baduku Bayalu

ಮೊನ್ನೆ ನಾನು ಸ್ನೇಹಿತ ಖನಿಜನ ಜೊತೆ ಫೋನ್ನಲ್ಲಿ ಮಾತಾಡ್ತಿದ್ದೆ. ಅದು ಇದು ಮಾತನಾಡುತಿರಬೇಕಾದರೆ , ಅವನು ಆಗ ಓದುತಿರುವ ಪುಸ್ತಕದ ಬಗ್ಗೆ ಹೇಳಿದ. ಅದರ ಹೆಸರು “ಬದುಕು ಬಯಲು” .

ಏನೋ ಟೈಟಲ್ ಒಂತರ ವಿಚಿತ್ರವಾಗಿದೆ ಅಲ್ವ ಅಂತ ಅನಿಸ್ತು. ಏನೋ ಇದು ಖನಿಜ್ ಅಂತ ಕೇಳಿದೆ. ಆಗ ಅವನು , ದೊರೆಸ್ವಾಮಿ  ಅನ್ನೋ ಮನುಷ್ಯ ಮಧ್ಯ  ವಯಸ್ಸಿನಲ್ಲಿ ರೇವತಿ ಆದ ಕಥೆ ಕಣೋ ಅಂದ.

ಅಂದ್ರೆ ,  ಇದು ಒಬ್ಬ ಪೊಟ್ತೈ ಅಥವ ಹಿಜ್ರ ಒಬ್ಬಳ ಕಥೆ ಅಂತ ಅನಿಸ್ತು. ಖನಿಜ ಇದರ ಬಗ್ಗೆ ಹೆಚ್ಚು ಮಾತಾಡದೆ, ಸಮಯ ಇದ್ದರೇ  ಖಂಡಿತ  ಪುಸ್ತಕ ಕೊಂಡು ಓದು ಅಂದ. ಸರಿ , ಏನು ಇದರ ವಿಶೇಷತೆ , ನೋಡೇ ಬಿಡೋಣ ಎಂದು ಅಂದು ಕೊಂಡು, ಪುಸ್ತಕವನ್ನ online  ಮುಖಾಂತರ ಖರೀದಿ ಮಾಡಿದೆ.

ಒಂದು ವಾರದ ನಂತರ ಪುಸ್ತಕ ಮನೆಗೆ ಬಂತು. ಮೊದಲ  ವಾರ  ಕೆಲಸದ ಒತ್ತಡ ದಲ್ಲಿ ಇದ್ದೆ. ಓದಲಿಕ್ಕೆ ಸಾಧ್ಯವಾಗಲಿಲ್ಲ . ನಂತರ ಪುಸ್ತಕವನ್ನ ಒಂದೇ ಸಮನೆ ಕೂತು ಎರೆಡು ದಿನದಲ್ಲಿ ಓದಿ ಮುಗಿಸಿದೆ.

ಮುಗಿಸಿದ ನಂತರ ಕಣ್ಣಂಚಿನಲ್ಲಿ ನೀರಿತ್ತು.

ಅವರನ್ನು ನೋಡಿದರೆ ಸದಾ ಅಸಹ್ಯ ಪಡುವ , ದೂರ ಸರಿಯುವ , ಹಿಯಾಳಿಸುವ , ನನ್ನ ಧುರ್ಬುದ್ದಿಗೆ ಈ ಪುಸ್ತಕ ಚಾಟಿಯೇಟುನಂತಿತ್ತು . ಹೌದು ನಾನು ಹೇಳಲು ಹೊರಟಿರುವುದು ಹಿಜ್ರಗಳ ಬಗ್ಗೆ.

Revathi

ನಾನು ಇದುವರೆಗೂ , ಇವರು ಸಮಾಜಕ್ಕೆ ಹೊರೆ, ಮಾಡಲು ಕೆಲಸವಿಲ್ಲದೇ ಸುಮ್ಮನೆ  ಬಿಕ್ಷೆ ಬೇಡುವರು , ರಸ್ತೆ ಯಲ್ಲಿ ಓಡಾಡುವ ಹುಡುಗರಿಗೆ ಸುಮ್ಮನೆ ಕಿರುಕುಳ ಕೊಡುವವರು ಎಂದು ಅಂದು ಕೊಂಡಿದ್ದೆ. ಆದರೆ ಪುಸ್ತಕ ಓದಿದಾ ನನಗೆ  ಇವರು ನಿಜವಾಗಲು ಇಷ್ಟು ಕಷ್ಟ ಪಡುತ್ತಿದ್ದಾರೆಯೇ  ? ಇವರುಗಳಲ್ಲಿಯು ದೇವರು -ದಿಂಡರು , ಸಂಸ್ಕೃತಿ ಅನ್ನೋ ವಿಷಯ ಇದೆಯೇ ? ಇವರುಗಳಲ್ಲು ಮದುವೆ  ನಡೆಯುವುದೇ ? “ಅದರ” ಆಪರೇಷನ್ ಮಾಡಿಸಿಕೊಂಡ ಇವರುಗಳು ಹೇಗೆ ತಾನೇ ತಮ್ಮ ಹಳೆ ಸ್ನೇಹಿತರು, ಸ್ವಂತ ತಂದೆ ,ತಾಯಿ, ಅಣ್ಣಾ , ಅತ್ತಿಗೆ, ಮಾವ ಹೀಗೆ  ರಕ್ತ ಸಂಬಂಧಿಗಳನ್ನು ಎದುರಿಸಿರಾರು  ?

ಅಲ್ಲ ಹಿಜ್ರ ಅಂದ್ರೆ ಯಾರು ? ಈ  ನನ್ನ ಪ್ರಶ್ನೆಗೆ ಈ ಪುಸ್ತಕ ಒಂದು ಸ್ಪಷ್ಟ ಉತ್ತರ ನೀಡಿದೆ. ಇದರ ಅರ್ಥ ಇಷ್ಟೇ. ಧೈಹಿಕವಾಗಿ ಗಂಡಸಾದ್ರು , ಭಾವನೆಗಳು ಯೋಚನೆಗಳು , ರೀತಿ -ರಿವಾಜು , ಡ್ರೆಸ್ಸಿಂಗ್ ಸೆನ್ಸ್ , ಇಷ್ಟಗಳು , ಆಟಗಳು , ಆಸೆಗಳು ,ಉದ್ದೇಶಗಳು ..ಹೀಗೆ ಎಲ್ಲಾ ವಿಧದಲ್ಲೂ ಹೆಂಗಸಿನ ತರ ಇರುತ್ತದೆ.

ಇದು vice-versa ಆಗಿ ಸಹ ಗಣನೆಗೆ ತಗೋಬಹುದು. ಅಂದರೆ ದೇಹ ಹೆಂಗಸಿನದು , ಆದ್ರೆ ಮಿಕ್ಕಲ್ಲ ವಿಷಯದಲ್ಲಿ ಗಂಡಸಿನ ತರ. ಇನ್ನು ಇದಕ್ಕೆ ಕಾರಣ,

ಹಾರ್ಮೊನ್ defect.  ಒಳ ರಕ್ತ ಸಂಭಂದದಲ್ಲಿ ಮದುವೆ ಆದರೆ, ಅಥವ ಇನ್ನು ಹತ್ತು ಹಲವು ಕಾರಣಗಳಿಂದ ಹುಟ್ಟೋ ಮಗುವಿದೆ ಈ ತೊಂದರೆ ಬರಬಹುದು. ಆದರೆ ಇಲ್ಲಿ ಕೇಳಲೇ ಬೇಕಾದ ಪ್ರಶ್ನೆ ಇದು ಇವರ ತಪ್ಪೆ ?  ಇವರು ಮಾಡಿದ್ದಾದರು  ಏನು ? ದೇವರೇಕೆ ಇಂತವರಿಗೆ ಇಷ್ಟು ನೋವು ಕೊಡುತ್ತಾನೆ ? ಇದರ ಹೊರತಾಗಿ, ಸಮಾಜದ ಜನರ ದಬ್ಬಾಳಿಕೆ ಬೇರೆ.

ಚೇಲ  ಅಂದರೆ ಏನು , ಗುರು ಅಂದ್ರೆ ಏನು , ಗುರುಭಾಯಿ , ಅಮ್ಮ, ಅಂದರೆ ಏನು , “ನಿರ್ವಾಣ” ಅಂದರೆ ಏನು . ಹಿಜ್ರ ಅಂದ್ರೆ ಹುಡುಗ ಹುಡುಗಿ ತಾರಾ ಆಗ್ತಾನ ? ಅಥವ ಬರಿ ಹುಡುಗಿ ತರ ಡ್ರೆಸ್ ಮಾಕ್ಹೊತಾನ ? ಮತ್ತು ಅವರಿಗೆ ಬರಿ ಸೆಕ್ಸ್ ವರ್ಕ್ ಆಗಿ ಕೆಲಸ ಮಾಡಲು ಬಿಟ್ಟರೆ ಬೇರೆ ಕೆಲಸ ಇಲ್ವಾ? ಹೇಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಬದುಕು ಬಯಲು.

ಖಂಡಿತ ನೀವು ಓದಿ, ಒಂದು ಸಮುದಾಯದ ಬಗ್ಗೆ ತಿಳಿದುಕೊಳ್ಳಬೇಕಾದ ಪುಸ್ತಕ ಬದುಕು ಬಯಲು.

 

ಇಂತಿ,

ಕಾರ್ತಿಕ್

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s