ಕಣ್ಣು ಮುಚ್ಚಿ ಕೊಳ್ಳುವುದೇ ವಾಸಿ

ಹೇಗೆ ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ನಿತ್ಯಕರ್ಮಾದಿಗಳನ್ನು ಮಾಡಬೇಕೋ, ಅದೇ ತರ ನನಗೆ ಬೆಳಗ್ಗೆ ಪತ್ರಿಕೆ ಓದಲೇ ಬೇಕು. ಅದು ಇಲ್ಲ ಅಂದರೆ, ಅವತ್ತಿನ ದಿನ ಕಲಾಹೀನ ವಾದಂತೆ. ಇರಲಿ, ಅದು ನನ್ನ ಸಮಸ್ಯೆ. ಆದರೆ ವಿಷೆಯ ಅದಲ್ಲ. ವಿಷಯ, ಇತ್ತೀಚಿಗೆ ರಾಜ್ಯದಲ್ಲಿ  ಹೆಚ್ಚುತ್ತಿರುವ ಸಾವುಗಳ ಸಂಖೆ.

ಪತ್ರಿಕೆ ಓದುತ್ತ ಇದ್ದೆ. ಶೀರ್ಷಿಕೆ ಹೀಗಿತ್ತು. ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ. ಸ್ತಳದಲ್ಲೇ  ಐವರ ದುರ್ಮರಣ .   ಇನ್ನೊಂದು ಕಡೆ, ಒಂಟಿ ಮಹಿಳೆ ದರೋಡೆ ,ಕೊಲೆ. ಶಾಲೆ ಇಂದ ವಾಪಾಸ್ ಮನೆಗೆ ಬರುತ್ತಿದ್ದ ೬ ನೆ ತರಗತಿ ಹುಡುಗಿಯನ್ನು ಅಪಹರಿಸಿ , ಅತ್ಯಾಚಾರವೆಸಗಿ  ಪರಾರಿಯಾದ ೫ ಜನರ ಸೆರೆ. watchmanನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ, foothpath ನಲ್ಲಿ ಬಸ್ಸಿಗಾಗಿ ಕಾಯುತಿದ್ದ ವೃದ್ದರ ಮೇಲೆ  , ಚಾಲಕನ ನಿಯಂತ್ರಣ  ತಪ್ಪಿ ಕಾರು ಡಿಕ್ಕಿ . ಸ್ತಳದಲ್ಲೇ ಮರಣ. ಚಾಲಕ ಪಾನಮಾತ್ತಗಿದ್ದ ಯೆಂದು ಪೋಲೀಸರ ಸ್ಪಷ್ಟನೆ .ಜೋರಾದ ಮಳೆಯಿಂದ , ಸರಕಾರೀ ಕಾಲೇಜಿನ ಗೋಡೆ ಕುಸಿದು ,ಓರ್ವ ಹುಡುಗಿ ದುರ್ಮರಣ. ಮ್ಯಾನ್ ಹೊಲ್ ಮುಚ್ಚದ್ದಿದ್ದರಿಂದ  , ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ನಿಯಂತ್ರಣ ತಪ್ಪಿ ಬಿದ್ದು ಸ್ತಳದಲ್ಲೇ ಸಾವು .

ನೋಡಿ ಈ ತರಹದ ಸುದ್ದಿಯೇ ಜೋರು. ತಮಾಷೆ ಅಂದರೆ, ಸಮಸ್ತ ಜನರಿಗೆ ಇಂಥ ವಿಷಯಗಳು ಬೇಸರ ತಂದರೆ,ನಮ್ಮ ಮಾಧ್ಯಮಗಳಿಗೆ ಮಾತ್ರ ಇಂಥ ಸುದ್ದಿಗಳು ಒಂತರ, ಗುಲಾಬ್ ಜಾಮೂನ್ ಇದ್ದಂಗೆ. ತಕ್ಷಣ ಟೀವಿ ಯಲ್ಲಿ breaking ನ್ಯೂಸ್ ಬಿತ್ತರಿಸುತ್ತರೆ. ಒಂತರ ಬಿಸಿ ಬಿಸಿ ರವೆ ಇಡ್ಲಿ ಸೇಲ್ ಆದಂಗೆ , ಈ
ತರಹದ ಸುದ್ದಿಗಳು ಅವರಿಗೆ ಬರುತ್ತಲೇ ಇರಬೇಕು .
ಇದು ಈ ಜನರೇಶನ್ ಪಡೆದ ದೌರ್ಭಾಗ್ಯ ಅಷ್ಟೇ . ಎಲ್ಲೊ ಒಂದು ಕಡೆ ಓದಿದ್ದೆ, ಫಿನ್ಲ್ಯಾಂಡ್ ನಲ್ಲಿ ಕಳೆದ ೧೦ ವರುಷಗಳಿಂದ ಒಂದೇ ಒಂದು ಕೊಲೆ,ಸುಲಿಗೆ,ಅಫಘಾತ … ಹೀಗೆ ಯಾವ ದುರ್ಘಟನೆಗಳು ನಡದೇ ಇಲ್ವಂತೆ .
ಅವರದು ಎಂಥ ಅದೃಷ್ಟ ಜೀವನ ಸ್ವಾಮಿ :). ಕೇಳಿ ಪಡೆಯಬೇಕು ಅಂತ ಕೆಲೋವೊಮ್ಮೆ ನನಗೆ ಅನ್ಸುತ್ತೆ.

 

ಸೊ, ನಾನು ಅಂತು ಒಂದು ನಿರ್ಧಾರಕ್ಕೆ ಬಂದಿದ್ದೇನೆ . ಏನೇ ಆಗಲಿ ಬರಿ positive ಸುದ್ದಿ ಓದೋದು. ಬರಿ positive ಸುದ್ದಿ ಮಾಧ್ಯಮ ನೋಡೋದು . ಋಣಾತ್ಮಕ ಅಂಶವನ್ನ ಮನಸಿನಿಂದ ಕಿತ್ತು ತೆಗೆಯೋದು 🙂 !

ಅಂದ ಹಾಗೆ, ಟೀವಿ ಯಲ್ಲಿ ಯಾವೊದೋ ಆಕ್ಸಿಡೆಂಟ್ ಸುದ್ದಿ ಬರ್ತಾ ಇದೆ. ಓಹೋ ಪ್ಲೀಸ್ ನಾನು ಹೋಗಿ ಈಗ ನೋಡಬೇಕು . ಸಮಯ ಇಲ್ಲ. ಮತ್ತೆ ಸಿಗೋಣ .

ಇಂತಿ,
ಭಟ್ಟ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s