ಲಡ್ಡು ಪ್ರಸಂಗ

ಅವತ್ತು ಶುಕ್ರವಾರ. ಸಂಜೆ ಆಫೀಸ್ ನಿಂದ ಬಂದವನಿಗೆ , ಎದುರಿನಲ್ಲಿ ೨೪ ಕಾರಟ್ ಬಣ್ಣದ ಲಾಡು ಮಂಚದ ಮೇಲಿತ್ತು . ಓಹೋ , ಏನೋ ವಿಶೇಷ ಇದೆ ಅಂತ ತಾಯಿನ ಕೇಳಿದೆ. “ಒಂದು ಫಂಕ್ಶನ್ ನಲ್ಲಿ ಕೊಟ್ರು. ಇಷ್ಟ ಆದ್ರೆ ತಿನ್ನು” ಅಂದ್ರು . ಸ್ವೀಟ್ ತಿನ್ನದ ನನಗೆ ಅಂದು ಮಾತ್ರ ಯಾಕೋ ಸಿಕ್ಕಾಪಟ್ಟೆ ತಿನ್ನುವ ಚಪಲ ಆಯಿತು . ಇರಲಿ ಅಂತ , ಒಂದನ್ನ ಬಾಯಿಗೆ ಹಾಕೊಂಡೆ.ಅಲ್ಲಿಗೆ ಸಿಹಿ ತಿನುಸುಗಳ ಹನಿಮೂನ್ ಕಥೆ ಮುಗಿಯಿತು :). ಇನ್ನು ನೋಡಿ ಮಜ.

ರಾತ್ರಿ ೨ ಗಂಟೆ . ಎಲ್ಲರೂ ಬಯಂಕರ ನಿದ್ರೆಯಲ್ಲಿ ಇದ್ದರೆ , ನನಗೆ ಮಾತ್ರ ಯಾಕೋ ಹೊಟ್ಟೆ ಒಳಗೆ ಗುಳು ಗುಳು ಶಬ್ದ . ಏನಪ್ಪಾ ಇದು, BBMP ಯವರು ರೋಡ್ ಅಗೆಯೋದನ್ನ ನೋಡಿದ್ದೀನಿ. ಈಗ ಹೊಟ್ಟೆ ಯನ್ನು ಅಗೆಯೊಕ್ಕೆ ಶುರು ಮಾಡಿದಾರೋ ಹೇಗೋ ..ಅಂತ ಯೋಚನೆ ಬಂತು. ಇನ್ನು ಸ್ವಲ್ಪ ಹೊತ್ತು ಹಾಗೆ ಇದ್ದೇ. ಗುಳು ಗುಳು ಅನ್ನುತ್ತಿದ್ದ ಶಬ್ದ ಈಗ ಡಬೊ ಡಬೊ ಅನ್ನಲಿಕ್ಕೆ ಶುರುಮಾಡ್ತು. ತಕ್ಷಣ ಪುನೀತ ರಾಜ್‌ಕುಮಾರ್ ರವರ ಒಂದು ಹಾಡು ನೆನಪಾಯಿತು .

“ಎಡವಾಟ್ಆಯ್ತು , ತಲೆಕೆಟ್ ಹೋಇತು!! ” , ಆದರೆ ನನ್ನ ವಿಷದಲ್ಲಿ ಹಾಡು ಸ್ವಲ್ಪ ಟ್ವಿಸ್ಟ್ ಆಗಿ “ಎಡವಾಟ್ಆಯ್ತು , ಹೊಟ್ಟೆ ಕೆಟ್ಹೋಯ್ತು”.
ಬೇರೆ ದಾರಿ ಇರಲಿಲ್ಲ. ೨ ಗಂಟೆಗೆ ಒಂದು RD ಅಕೌಂಟ್ ಓಪನ್ ಮಾಡಿದೆ. ಗಂಟಗೆ ಒಂದು ಸಲ ಹೋಗಿ ಡೆಪಾಸಿಟ್ ಮಾಡ್ತಾ ಬಂದೆ. ಮರುದಿನ ನನ್ನ ನಿತ್ರಾಣ ನೋಡಿ ನಂ ತಾಯಿಯವರಿಗೆ ಗಾಬರಿ ಆಯಿತು.
ನಂ ದೇಶದಲ್ಲಿ ಎಷ್ಟೇ ಭಯಂಕರ ಕಾಯಿಲೆ ಇದ್ದ್ರು , ಮೊದಲು ಮಾಡೋದು ಮನೆ ಔಷದಿ . ಹಾಗೆ , ಅಮ್ಮ , ಇರೋ ಬರೋ ಮನೆ ಮಾಡೆಲ್ಲ ಮಾಡಿದ್ದ್ರು. ಆದ್ರೂ ಇದು Mostly NRI ವೈರಸ್ ಇರಬೇಕು . ಜಪಯ್ಯ ಅಂದ್ರು ನನ್ನದು  ಸುನಾಮಿ ತರ ಡೆಪಾಸಿಟ್ ನಡೀತಾನೇ ಇತ್ತು. ನಾನು ಡೆಪಾಸಿಟ್ ಮಾಡಿ ಮಾಡಿ , ಇನ್ನೂ ಇಂಟ್ರೆಸ್ಟ್ ಬೇಡ , Earnings  ಬೇಡ ಎಂದು ಕೈ ಎತ್ತಿದೆ.

ಅಷ್ಟ್ರಲ್ಲಿ ಸಮಯ ೧೨ ಆಗಿತ್ತು. ನನ್ನ ನಿಲ್ಲದ ಡೆಪಾಸಿಟ್ ನೋಡಿ ಮನೆಯವರು ಗಾಬರಿ ಆದರು. ಸರಿ , ಹಾಗೆ ಡಾಕ್ಟರ್ ಹತ್ರ ತೋರಿಸಿದ್ವಿ. ಆಗ ಡಾಕ್ಟರ್ ,
“ಪರ್ವಾಗಿಲ್ಲ ಕಣ್ಣಯ್ಯ , ಇನ್ನೂ ಸ್ವಲ್ಪ ಲೇಟ್ ಆಗಿ ಬರ್ಬೇಕಿತ್ತು . ಬಾಂಡ್-ಉ ಮೆಚ್ಯೂರ್ ಆಗಿ ಒಳ್ಳೆ ರಿಟರ್ನ್ಸ್ ಬರ್ತಿತ್ತು” ಅಂದ್ರು. ನಾನು ” ಹೋಗಿ ಡಾಕ್ಟರ್ , ಈ ಹೊತ್ತಲ್ಲೂ ತಮಾಷೆನಾ ಅಂದೆ”.

ಅವರು ಕೊಟ್ಟ ಇಂಜೆಕ್ಶನ್ ನಿಂದ , ಆಕ್ರೋಶ ಬರೀತಾ ವಾಗಿದ್ದ ನನ್ನ ಹೊಟ್ಟೆ, ಶಾಂತ ಸಮುದ್ರ ವಾಯಿತು. ನನ್ನ ರಿಟರ್ನ್ ನೋಡಿ , ಡಾಕ್ಟರ್ ತಮ್ಮ ರಿಟರ್ನ್ ಅನ್ನು ಮನ್ನ ಮಾಡಿದರು. ಮನೆಗೆ ಬಂದು ಬಿಸಿ ಬಿಸಿ ಗಂಜಿ ಊಟ ಮಾಡಿದೆ. ಆಹಾ ಎಂತ ಆನಂದವಾಯಿತು. ನಂತರ ಒಂದು ಚಿಕ್ಕ ನಿದ್ರೆ ಮಾಡಿ ಸಂಜೆ ಎದ್ದೆ .
ಎದ್ದಾಗ ಒಂದು ತರ ಶಕ್ತಿ ದೇಹಕ್ಕೆ ಬಂದಿತು. ಮಾತ್ರೆ ಕೆಲಸ ಮಾಡಿತು ಎಂದು ಅಂದು ಕೊಂಡೆ.

ಸುಮಾರು ೨೦ ಗಂಟೆ ಅನುಬವಿಸಿದ ಯಾತನೆ , ಅಬ್ಬಾ ಯಾರಿಗೂ ಬೇಡ.. (ಆ ಅಂದ ಹಾಗೆ ಕಾಶ್ಮೀರಿನ ಉಗ್ರ್ಗ್ರಾಮಿಗಳಿಗೆ ಬಂದರೆ ನನಗೆ ಅಡ್ಡಿ ಇಲ್ಲ 🙂 ) . ಬೆಂಗಳೂರು ಮಹಾನಗರ ನೀರು ಸರಬರಾಜು ಮಂಡಳಿ ಬಿಡುವ ನೀರನ ರಬಸಕ್ಕು , ನಾನು ಡೆಪಾಸಿಟ್ ಮಾಡುವ ರಬಸಕ್ಕು ಒಂದು ತರ ರೇಸ್ ಇತ್ತು. ಯಾರು ಎಷ್ಟು ವೇಗವಾಗಿ ಬಿಡುತ್ತಾರೆಂದು :)..

ಅಂದ ಹಾಗೆ ಈ ಲಾಡು ಪ್ರಸಂಗ ದಿಂದ ಒಂದು ಒಳ್ಳೆ ವಿಚಾರ ತಿಳಿದಿದ್ದೆಂದರೆ ,ಅಜೀರ್ಣ ಆದಾಗ
೧. ನಿಂಬೆ ಹಣ್ಣಿನ ರಸ ಕುಡಿಯಿರು
೨. ಆದಷ್ಟು ನೀರು ಕುಡಿಯಿರಿ ( ೧-೨ ಲಿ)
೩. ದಾಳಿಂಬೆ ಹಣ್ಣಿನ ರಸ ಕುಡಿಯಿರಿ.
೪. ಮಜ್ಜಿಗೆ/ ಮೊಸರು ಕಲೆಸಿ ಊಟ ಮಾಡಿ.
೫. ಹಾಲು / ಟೀ /ಕಾಫೀ ಕುಡಿಯಬೇಡಿ.
೬. WHO ORS ಕುಡಿಯಿರಿ.

ಕೊನೆಯದಾಗಿ ಹಾಗು ಬಹುಮುಖ್ಯವಾಗಿ
“ಸಂಡಾಸೀನಲ್ಲಿ ಬಾನ್ಡ್ಲಿ ತುಂಬ ನೀರು ಇರಲಿ” ಎಂದು ನೋಡಿಕೊಳ್ಳಿ.

Yours,

Karthik

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s