ನಮ್ದುಕ್ಕೆ ೫ ಎಕೆರೆ ಜಮೀನು ಐತೆ ಸ್ವಾಮಿ

ಕೆಲವರಿಗೆ ಎಣ್ಣೆ ಹೋಡಿದ್ರೆ ಕಿಕ್ ಬರುತ್ತೆ, ಕೆಲವರಿಗೆ ದಮ್ ಹೋಡಿದ್ರೆ ಕಿಕ್ ಬರುತ್ತೆ, ಇನ್ನ್ ಕೆಲವರಿಗೆ ಹಣ ನೋಡಿದ್ರೆ ಕಿಕ್ ಬರುತ್ತೆ. ಇದೆಲ್ಲರ ಮಧ್ಯ ನಮ್ಮಂತಹ ಅಬ್ಬೇಪಾರಿಗಳು ಪ್ರಕೃತಿ ಸೌಂದರ್ಯ ನೋಡಿ ಕಿಕ್ ಬರುಸ್ಕೊಲ್ತೀವಿ !! . ಇರಲಿ , ವಿಷಯ ಇಷ್ಟೇ. ಅಂದು ಭಾನುವಾರ . ಸಂಜೆ ೪ ರ ಸಮಯ. ಸುಮ್ಮನೆ ಮನೆ ಅಲ್ಲಿ ಇದ್ದು ಟೀವೀ ನೋಡಿ ಕಾಲ ಕಳೆಯಬಹುದಿತ್ತೇನೋ . ಆದರೆ ಮನಸು ಬಿಡಬೇಕಲ್ಲ. ಗೂಗಲ್ ಮಾಡಿದಾಗ , ಮನೆಯಿಂದ ಸುಮಾರು ೫೦ ಕಿಲೋ ಮೀಟರ್ ದೂರದಲ್ಲಿ ರೇವಣ ಸಿದ್ದೇಶ್ವರ ಬೆಟ್ಟ ಇದೆ ಎಂದು ತಿಳಿದುಕೊಂಡೆ. ಯಾಕೋ ಅಲ್ಲಿನ ಪಿಕ್ಚರ್ಸ್ ತುಂಬಾ ಇಷ್ಟ ಆಗೋಯಿತು . ಗಾಡಿ ಅಲ್ಲಿ ಪೆಟ್ರೋಲ್ ಇದೆ. ಬಾಡಿ ಅಲ್ಲಿ ಶಕ್ತಿ ಇದೆ. ನೋಡುವ ಹುಮ್ಮಸು ಇದೆ. ಇನ್ನೇನು ಬೇಕು ಸ್ವಾಮಿ. ರೂಯ್ ರೂಯ್ ಅಂತ ಗಾಡಿ ಸ್ಟಾರ್ಟ್ ಮಾಡಿ ಹೊರಟೆ.

ಅಲ್ಲಿನ ಸೌಂದರ್ಯದ ಬಗ್ಗೆ ಇಲ್ಲಿ ಬರೆದಿದ್ದೇನಿ ನೋಡಿ.

ಅಲ್ಲಿಂದ ವಾಪಸ್ ಬೆಂಗಳೂರು ಬರಬೇಕಾದರೆ , ಬಿಡದಿ ಹತ್ರ ನನ್ನ ಗ್ರಾಚಾರಕ್ಕೆ ಸುಯ್ಯೋ ಅಂತ ಒಂದೇ ಸಮನೆ ಮಳೆ ಶುರುವಾಗೋಯಿತು. ಏನಪ್ಪಾ ಶಿವ ಇದು ಎಂದು ಅಂದು ಕೊಂಡೆ. ಇರಲಿ ಅಂತ ಗಾಡಿ ನಿಧಾನ ವಾಗಿ ಪಕ್ಕದಲ್ಲೀ ಕಾಣುತ್ತಿದ್ದ ಉಲ್ಮಾನ್ ಗ್ಯಾರೇಜ್ ಒಳಗೆ ನಿಲ್ಲಿಸಿದೆ. ಪಾಪ ಒಳ್ಳೆ ಸಾಬಿ. ನನ್ನ್ನ ಒಳಗೆ ಕೂರಿಸಿ ಉಬಯಕುಶಲೋಪರಿ ವಿಚಾರಿಸಿದ್ರು. “ಎನ್ ಸಾರ್ ಮಳೆ ಇದು ” ಎಂದೇ. ಅದಕ್ಕೆ ಅವರು , ” ಮಳೆ ಬಂದ್ರೆ ತಾನೇ ಬೆಳೆ ” ಅಂದು ಗಣೇಶ್ ಬೀಡಿ ಹಚಿದ್ರು.
“ಅಲ್ಲ ಸಾರ್, ಪಾಪ ನಿಮಗೆ ಇಲ್ಲಿ ಬಿಸ್ನೆಸ್ ಆಗುತ್ತಾ? ಅಲ್ಲ , ಮೇನ್ ರೋಡ್ ನಲ್ಲೇನೋ ಗ್ಯಾರೇಜ್ ಇದೆ, ಆದರೆ ಗಾಡಿಗಳು ಬರ್ತಾವ ? ನಿಮಗೆ ಕಷ್ಟ ಆಗಲ್ವೆ ಜೀವನ ನಡೆಸಕ್ಕೆ? ಮಕ್ಳು ಓದ್ತಾವ್ರ ಸಾರ್ ?” ಅಂದೆ .

ಅದಕ್ಕೆ ಅವರು ” ಅಯ್ಯೋ ಬಿಡಿ ಸಾರ್. ಯಕ್ ಕೇಳ್ತೀರಾ ನಂ ಕಥೆ ನಾ. ಗಾಡಿ ಗಳು ಬರ್ತಾವೆ. ದಿನಕ್ಕೆ ೫-೬ ಬರ್ತಾವೆ. ರೆಪೇರಿ , ಸರ್ವಿಸ್ ಅಂತ ದಿನಕ್ಕೆ ಕಮ್ಮಿ ಅಂದ್ರು ೧೦೦೦ ರುಪಾಯಿಗೆ ಮೋಸ ಇಲ್ಲ ನೋಡಿ. ಆಮೇಲೆ , ಮಕ್ಕ್ಳು ಓದ್ತಾವ್ರೆ. ಎಲ್ಲ ಫ್ರೀ ಸಾರ್. ಒಬ್ಬ ಹುಡುಗ ಇಂಜಿನೀರ್ . ಇನ್ನೊಬ್ಳು ಡಿಪ್ಲೊಮಾ ಓದ್ತಾವ್ಳೇ. ನಾನು ಬೇಡ ಬೇಡ ಅಂದ್ರು ಕೇಳಲ್ಲ ಅವಳು. ಅಲ್ಲ ನೀವೇ ಹೇಳಿ ಹೆಣ್ಮಕ್ಳಿಗೆ ಓದು ಎಲ್ಲ ಬೇಕಾ ? ಸುಮ್ಮನೆ ಮನೆನಲ್ಲಿ ಚಾಕರಿ ಮಾಡೋಬಾದ್ಲು ಈ ಓದು, ಟಸ್ಸು ಪುಸ್ಸು ಅಂತ ಯಾಕೇ ಬೇಕು ಇವರಿಗೆ ? ”
ಅದ್ಕ್ಕೆ ನಾನಂದೆ , ” ಸಾರ್, ಇದು ೨೧ನೇ ಶತಮಾನ. ಗಂಡು , ಹೆಣ್ಣು ಎಲ್ಲ ಒಂದೇ. ವಿದ್ಯೆ ಯಾವತಿದ್ರು ಒಂದು ಸ್ವತ್ತು . ನಮ್ಮದೇ ಆದ ಒಂದು ಸ್ವತ್ತು. ಆಸ್ತಿ ಇದ್ದಂಗೆ ಸ್ವಾಮಿ. ಈಗ ನೋಡಿ ನಿಮ್ ಹತ್ರ ಈ ಒಂದು ಗ್ಯಾರೇಜ್ ಬಿಟ್ಟು ಬೇರೆ ಎನ್ ಇದೆ ? ಏನು ಇಲ್ಲ ಅಲ್ವಾ. ಮತ್ತೆ ಆಕೆಗೆ ಆಗ ಈ ವಿದ್ಯೆ ಅಲ್ವಾ ಆಸ್ತಿ ಆಗಿ ಉಳಿಯೋದು. ಸೊ, ನೀವು ಏನು ಯೋಚನೆ ಮಾಡದೆ , ಸುಮ್ಮನೆ ಆಕೆಗೆ ಓದಕ್ಕೆ ಬಿಟ್ಟುಬಿಡಿ. ” ಅಂದೆ.

ಅದ್ಯಾಕೋ ಆವಯ್ಯ ಉಲ್ಟಾ ಹೊಡೆಯಕ್ ಶುರು ಮಾಡಿದ. “ಸಾರ್ ಸುಂಮ್ನಿರಿ. ಇರೋದನ್ನ ಹೇಗೆ ಖರ್ಚು ಮಾಡೋದನ್ನ ನಾನು ಯೋಚನೆ ಮಾಡುತ್ತಿದ್ದೇನೆ. ನೋಡಿ, ನಂ ಮಗಂಗೆ ಎಲ್ಲ ಫ್ರೀ. ನಾವು ಮೈನೋರಿಟೀಸ್ ಅಲ್ವಾ. ಆಮೇಲೆ ನಮಗೆ ನ್ಯಾಯಬೆಲೆ ಅಂಗಡಿ ಎಲ್ಲಿ ಎಲ್ಲ ಸಿಗುತ್ತೆ. ಮತ್ತೆ ಶಾದಿ ಭಾಗ್ಯ, ಅನ್ನ ಭಾಗ್ಯ ಎಲ್ಲ ಇದೆ. ಅದು ಬಿಟ್ಟು ಈಗ ಹೊಸದಾಗಿ ದಂತ ಬಾಗ್ಯ ನು ಶುರುಮಾಡೊರ್ರೆ. ಅದಕ್ಕೆ ನಮ್ಗೆಲ್ಲಾ ಅಷ್ಟು ಕರ್ಚು ಇಲ್ಲ ಸ್ವಾಮಿ . ಸರ್ಕಾರ ಹೆಲ್ಪ್ ಮಾಡುತ್ತೆ. ”
ನಾನು ಅದಕ್ಕೆ ” ಮಾಡ್ಲಿ ಬಿಡಿ. ಸಂತೋಷ ಪಡ್ಬೇಕು ಸ್ವಾಮಿ ನೀವು. ಅಲ್ಲ ಬರೀ ಈ ಗ್ಯಾರೇಜ್ ಇಂದ ಎನ್ ತಾನೇ ಮಾಡ್ತೀರಾ ನೀವು ಹೇಳಿ ? ”

ಪುಣ್ಯಾತ್ಮ ಹೇಳಿದ ” ಹಾಹಾ ಸಾರ್. ಏನು ಯೋಚನೆ ಮಾಡ್ಬೇಡಿ. ನಮ್ದುಕೆ ೫ ಎಕೆರೆ ಜಮೀನ್ ಇದೆ. ನೋಡಿ ಈ ಗ್ಯಾರೇಜ್ ಹಿಂಬಾಗ ಜಾಗದ ಎಲ್ಲ ಜಮೀನ್ ನಮ್ದೆ . ಈಗ ಎಕರೆಗೆ ೭೦ ಲಕ್ಷ ಇದೆ. !!!!! (ನನಗೆ ಅಲ್ಲೇ ಸ್ವಲ್ಪ ಹಾರ್ಟ್ ಅಟ್ಯಾಕ್ ಆಗೋ ಹಾಗೆ ಭಾಸವಾಯಿತು) . ಅಂದ್ರೆ ಕಡಿಮೆ ಅಂದ್ರು ೪ ಕೋಟಿ ಗೆ ಮೋಸ ಇಲ್ಲ. ಅದರಲ್ಲಿ ೫೦ ಲಕ್ಷ ನನ್ ಮಗಳ ಮದುವೆಗೆ ಖರ್ಚುಆಗುತ್ತೆ. ಆಮೇಲೆ ವರ ದಕ್ಷಿಣೆ ಒಂದು ೨೦ ಲಕ್ಷ. ಆಮೇಲೆ ಕಾರ್ , ಸೂಟ್ , ಸೈಟ್ ಆಮೇಲೆ ಒಂದು ಮನೆ. ಜಾಸ್ತಿ ಅಂದ್ರು ಒಂದು ೭೦ ಲಕ್ಷ ಕರ್ಚಾಗಬಹುದು. ಮಿಕಿದೆಲ್ಲಾ ನಮ್ದೆ ಅಲ್ವಾ…… ಹಿ ಹಿ ಹಿ 🙂 ..” ಅದಕ್ಕೆ ಈ ಗ್ಯಾರೇಜ್ ಸಮ್ನೇ ಶೋಕಿಗೆ ಮಾಡೋದು. ಇಲ್ಲ ಆಂಡ್ರೇ ಟೈಮ್ ಪಾಸ್ ಮಾಡೋದು ಕಷ್ಟ ಅಲ್ವೇ. ಏನೇ ಹೇಳಿ ನಿಮ್ಮಂಥ ಸಾಫ್ಟ್‌ವೇರ್ ಇಂಜಿನೀರ್ಗಳಿಂದ ನಮ್ಮಂತಹ ಬಡ (?) ರೈತರ ಜಮೀನಿಗೆ ಒಳ್ಳೆ ರೇಟ್ ಬಂದಿದೆ .

ನೀವ್ಗಳು ಬೆಂಗಳೂರು ಬಿಟ್ಟು ಬಿಡದಿ ,ರಾಮನಗರ ಬರ್ತೇರಾಲ್ವಾ , ಅದಕ್ಕೆ ನಮ್ಮ ಜಮೀನುಗಳಿಗೆ ಒಳ್ಳೆ ರೇಟ್. ಇಷ್ಟೇ ಸ್ವಾಮಿ ನಂ ಆಸ್ತಿ. ಜಾಸ್ತಿ ಎನ್ ಅಲ್ಲ. ನೀವುಗಳು ಸಾಫ್ಟ್‌ವೇರ್ ಗಳು ನಮ್ ಕಿಂತನು ಜಾಸ್ತಿ ಸಂಪಾದನೆ ಮಾಡ್ತೀರಾ. ಇನ್ನು ಈ ಜಮೀನೆಲ್ಲ ಯಾವ್ ಲೆಕ್ಕ ಹೇಳಿ ” ಅಂದ..

ಮಳೆ ನಿಂತಿತ್ತು. ಹೃದಯ ಮಾತ್ರ ಜೋರಾಗಿ ಬಡಿಯುತಿತ್ತು. ತಲೆ ಗಿರ್ ಅಂತ ಸುತ್ತುತಿತ್ತು . ಮಂಡೇ ಮ್ಯಾನೇಜರ್ ನ ಅಸೈನ್‌ಮೆಂಟ್ ನೆನಪಿಗೆ ಬಂತು. ಸಾಬಿಗೆ ಸಾಲಾಮ್ ಹೊಡೆದು ಅಲ್ಲಿಂದ ಜಾಗ ಖಾಲಿ ಮಾಡಿದೆ.

-Bhatta !

One thought on “ನಮ್ದುಕ್ಕೆ ೫ ಎಕೆರೆ ಜಮೀನು ಐತೆ ಸ್ವಾಮಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s