ಉಪ್ಪಿಟ್ಟು ರುಚಿ ಹಚ್ಬಿಟ್ರು

ಸ್ವಾಮಿ , ನಿಮ್ಮಲ್ಲಿ ಎಷ್ಟು ಜನ ಉಪ್ಪಿಟ್ಟು ಅಂದ್ರೆ ಕಾಂಕ್ರೀಟ್ ಅಂತಾರೆ ಹೇಳಿ ? ನಾನಂತೂ ಮೊದಲಿನಿಂದಲು ಅದನ್ನೇ ಹೇಳಿ ಕೊಂಡು ಬರುತ್ತಿದ್ದೆ. ಏನೇ ಹೇಳಿ ಈ ಉಪ್ಪಿಟ್ಟು ಮಾತ್ರ ಬಿರ್ಲಾ ಸೆಮೆಂಟ್ , ಜ್ ಕೇ ಸೆಮೆಂಟ್ ನಂತಹ ದೊಡ್ಡ ದೊಡ್ಡ ಕೊಂಪನಿಗಳಿಗೆ ಒಳ್ಳೆ ಸೆಡ್ಡು ಕೊಡಬಹುದು .

ಇರಲಿ , ವಿಷಯಕ್ಕೆ ಬರೋಣ . ಇವತ್ತು ನಮ್ಮ ಮನೆಯವರು ಅಡುಗೆ ಕೋಣೆಯಲ್ಲಿ ತಮ್ಮ ಮೊದಲ ಕೈ ಚಳಕ ತೋರಿಸಿಯೇಬಿಟ್ಟರು. ಅದು ಏನು ಅಂತೀರಾ ? ಅವರು ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅಡುಗೆ ಮಾಡಿದರು. ಮಾಡಿದ್ದು ಉಪ್ಪಿಟ್ಟು.

ನಮ್ಮ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಒಂದು ಮಾತಿದೆ ” The first Product Demo always fails “.
ಮೊದಲ ಸಲ ಏನೇ ಪ್ರಯೋಗ ಮಾಡಿದಾಗ ಆ ತಿರುಪತಿ ತಿಮ್ಮಪ್ಪನ ಹುಂಡಿಗೆ ದಕ್ಷಿಣೆ ಹಾಕೋದು ನನ್ನ ಸ್ವಭಾವ. (ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಅಲ್ವಾ ) . ಹಾಗೆ ನಾನು ಇವಳು :ರಿ ನಾನು ತಿಂಡಿ ಮಾಡ್ತಿದ್ದೀನಿ ಅಂದಾಗ ಯಾವುದಕ್ಕೂ ಸೇಫ್ಟೀ ಇರಲಿ ಅಂತ ಆ ಗೋವಿಂದನ ನೆನೆಸಿದೆ !!!

ಸರಿ , ೬ ಗಂಟೆಗೆ ಸರಿ ಯಾಗಿ ಟಕ ಟಕ ಅಂತ ಬಾಂದ್ಲಿ ,ಪಾತ್ರೆ , ಬನ್ಸಿ ರವೆ , ತುಪ್ಪ, ಟೊಮ್ಯಾಟೋ , ಕ್ಯಾರಾಟ್ , ಬೀನ್ಸ್ ಎಲ್ಲ ಜೋಡಿಸಿ , ತನ್ನ ಕೆಲಸದಲ್ಲಿ ಮಗ್ನ ವಾದಲು. ನಾನು ಅಲ್ಲೇ ದೇವರ ಕೋಣೆಯಲ್ಲಿ ಪೂಜೆ ಮಾಡುತ್ತಿದೆ. ಸ್ವಲ್ಪ ಹೊತ್ತಿನಲ್ಲೇ ನನ್ನ ಧ್ಯಾನ ಬಂಗವಾಯಿತು. ಅಡುಗೆ ಕೋಣೆ ಇಂದ ಘಮ ಘಮ ಪರಿಮಳ.
ಹೇಗೇ ತಾನೇ ನಾನು ಪೂಜೆ ಮಾಡಲಿ ಹೇಳಿ. ಹೊಟ್ಟೆ ಯಲ್ಲಿ ಸರಿಗಮ ತಾಳ. ಹೊರಗಡೆ ಪರಿಮಳ ಮೇಳ .

ಘಮ ಘಮ ಪರಿಮಳ ಬರ್ತಾ ಇದೆ ಅಲ್ವಾ . ಸ್ವಲ್ಪ ಟೇಸ್ಟ್ ಮಾಡ್ಬಹುದಾ ಅಂದೆ? ಅದಕ್ಕೆ ಶಾಲೆಯ ಸ್ಟ್ರಿಕ್ಟ್ ಹೆಡ್ ಮೇಡಮ್ ತರ “ಇಲ್ಲ , ಮೊದಲು ಪೂಜೆ ಆಮೇಲೆ ತಿಂಡಿ ” ಅಂದಳು.

Baath

ಹಾಗೂ ಹೀಗೂ ದೇವರಿಗೆ ಒಂದು ಗತಿ ಕಾಣಿಸಿದೆ , ಅಂದರೆ ಪೂಜೆ ಮಾಡಿ ಬಂದೆ 🙂 . ಅಬ್ಬಾ ಅದಾದನಂತರ , ತಟ್ಟೆಯಲ್ಲಿ ಯಾವಾಗ ಘಮ ಘಮ ಅಂತಾ ಉಪ್ಪಿಟ್ಟು ಬಿತ್ತೋ, ನಾನು ಅಲ್ಲೇ ಅದರ ಸುವಾಸನೆ ಯಲ್ಲೇ ತೇಲಲಾರಂಬಿಸಿದೆ .  ಆ ಉಪ್ಪಿಟ್ಟಿನ  ಮೊದಲ ತುತ್ತು ಬಾಯಿಗೆ ಬಿದ್ದಾಗ … ಆಹ್ಹಾ ಸ್ವರ್ಗಕ್ಕೆ ಮೂರೇ ಗೇಣು ಅಂತ ಅನಿಸ್ತು .
ಸರಿಯಾಗಿ ವಿರಾಟ್ ಕೊಹ್ಲಿ ತರ ೬ ಮತ್ತೆ ೪ ಬಾರಿಸಿದೆ. ಎದ್ದಾಗ ಸೆಂಚುರೀ ಹೊಡೆದ ಅನುಭವ. ಆ ಉಪ್ಪಿಟ್ಟಿನ ರುಚಿ

ಆ ಅದೇನು ರುಚಿ, ಅದೇನು ಪರಿಮಳ , ಉಪ್ಪಿಟ್ಟಿಗೆ ಎಳ್ಳು ನೀರು ಬಿಟ್ಟಿದ ನನಗೆ ಮತ್ತೆ ಉಪ್ಪಿಟ್ಟಿನ ರುಚಿ ತೋರಿಸಿದ ರಂಜನೀಯವರಿಗೆ ಒಂದು ದೊಡ್ಡ ಸಲಾಮ್ .
ಅಂದ ಹಾಗೆ ನಾನು ಇನ್ನು ಅಮ್ಮ ಮಾಡಿದ ಉಪ್ಪಿಟ್ಟನ್ನು ತಿನ್ನೋದು ಬಿಟ್ಟಿಲ್ಲ. ಪ್ಲೇಯರ್ಸ್ ಟೀ ೨೦ ಮತ್ತು ವನ್ ಡೇ ಮ್ಯಾಚ್ ನಲ್ಲಿ ಎಷ್ಟೇ ರನ್ ಗಳಿಸಿದರು , ಟೆಸ್ಟ್ ಮ್ಯಾಚ್ ಅಲ್ಲೇ ತಾನೇ ಅವರ ಸಾಮರ್ಥ್ಯ ಪರಿಗಣಿಸೋದು 🙂 🙂 .

ವಿಸೂ : ಉಪ್ಪಿಟ್ಟು ತಿನ್ನುವ ಮನಸ್ಸಿದ್ದರೆ ಹಾಗೆ ಒಮ್ಮೆ ನಮ್ಮ ಮನೆಗೆ ಬನ್ನಿ 🙂 😉 .
ಇಂತಿ ನಿಮ್ಮ,
ಭಟ್ಟ

Advertisements

6 thoughts on “ಉಪ್ಪಿಟ್ಟು ರುಚಿ ಹಚ್ಬಿಟ್ರು

  1. ನೀವು 6 ಹಾಗೂ 7ನೇ “ಪ್ಯಾರಾ”ವನ್ನು ಎರಡೆರಡು ಸಲ ಬರೆದಾಗಲೇ ನಿಮಗೆ ಉಪ್ಪಿಟ್ಟು ಮತ್ತು ನಿಮ್ಮವರ ಮೇಲಿರುವ “ಪ್ಯಾರ್”ನ ಸಂಭ್ರಮದ ಸೆಂಚುರಿಯ ಅರಿವಾಗುತ್ತದೆ ಭಟ್ರೇ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s