ಹೊಸ ವರುಷ ಹೊಸ ಬಾಳು

ನಾನು ಸಾಮಾನ್ಯವಾಗಿ, ಹೊಸ ವರುಷದಲ್ಲಿ ಹೊಸ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಮನುಷ್ಯ . ಆ ಹೊಸ ಪ್ರತಿಜ್ಞೆ ಅಂತು ಚಾಚುತಪ್ಪದೆ ೧ ವಾರ ಮಾಡುತ್ತೇನೆ . ನಂತರ ಅದೇ ರಾಗ , ಆದೇ  ತಾಳ ಅನ್ನೋ ಹಾಗೆ  , ಬ್ಯಾಕ್ ಟು ಪೆವಿಲಿಯನ್ . ಇರಲಿ, ವಿಷಯಕ್ಕೆ ಬರೋಣ .

ಈ ವರುಷ ಏನೇ ಆಗಲಿ , ಈ ಕೆಳಿಗಿನ ವಿಷಯದಲ್ಲಿ  ಸ್ವಲ್ಪ ಮುನ್ನೆಚ್ಹೆರಿಕೆ ತಗೊಂಡು ಖಡಖಂಡಿತ ವಾಗಿ ಪಾಲಿಸಬೇಕೆಂದು ನಿರ್ಧರಿಸಿದ್ದೇನೆ .

  1. ಈ ವರುಷ ಹಾಫ್ ಮ್ಯಾರಥಾನ್ ಅಂದರೆ ೨೧ ಕಿಲೋ ಮೀಟರ್ ರೇಸ್ ನಲ್ಲಿ ಭಾಗವಹಿಸ ಬೇಕೆಂದು ಅಂದುಕೊಂಡಿದ್ದೇನೆ . ಇಲ್ಲ ಅಂದರೆ ಬಹುಶ ಒಂದೋ ಎರಡೋ  ೧೦ ಕಿಲೋ ಮೀಟರ್ ಇರುವ ಮ್ಯಾರಥಾನ್ಅದ್ರು ಓಡ ಬೇಕೆಂದು ನಿರ್ಧರಿಸಿದ್ದೇನೆ .
  2. ಏನೇ ಆಗಲಿ ೧೦ ಬಗೆಯ ರುಚಿ ರುಚಿ ಯಾದ ಅಡುಗೆಯ ಬಗೆ ಯನ್ನು ಕಲಿಯಬೇಕೆಂದು ನಿರ್ಧರಿಸಿದ್ದೇನೆ .
  3. ಕೆಲಸ ಬಗ್ಗೆ ಹೆಚ್ಚು ಹೆಚ್ಚು ಟೆಕ್ನಿಕಲ್ ಅನುಭವ ಪಡೆದು , ಏನಾದರು ಸ್ವಂತ ಆಪ್  ಮಾಡಬೇಕೆಂದು ಅಂದುಕೊಂಡಿದ್ದೇನೆ .
  4. ಮತ್ತೆ, ಯಥಾ ಪ್ರಕಾರ ಒಂದು ೧೦ ಕಡೆ ಚರಣ ಮುಗಿಸಬೆಕು.
  5. ೨೦ ಹೊಸ ಪುಸ್ತಕ ಮುಗಿಸಬೇಕು
  6. ೫೦ ಆರ್ಟಿಕಲ್ಸ್ ಈ ಸಲ ಬ್ಲಾಗ್ ನಲ್ಲಿ ಬರೆಯಬೇಕು .
  7. ಒಂದಿಷ್ಟು ಜನರಿಗೆ ಕೈಲಾದ ಸಹಾಯ ಮಾಡಬೇಕು.
  8. ಒಂದಷ್ಟು ಜನರನ್ನು ನಗಿಸಲಿಕ್ಕೆ ಕಲಿಸಬೇಕು .
  9. ಸಂಚಾರ ನಿಯಮ ವನ್ನು ಕಡ್ಡಾಯ ವಾಗಿ ಪಾಲಿಸಬೇಕು  ( ಅಂದ ಹಾಗೆ ೨ ಹೆಲ್ಮೆಟ್ ಖರೀದಿಸಬೇಕು )
  10. ಕೊನೆಯದಾಗಿ , ಬ್ಯಾಂಕಿನಲ್ಲಿ ಒಂದಷ್ಟು ಬ್ಯಾಲೆನ್ಸ್ ಇಡದಿದ್ದರು , ಜನರ ಮನಸಿನಲ್ಲಿ ಒಂದಷ್ಟು ನಗೆಯ ಬ್ಯಾಲೆನ್ಸ್ ಇಡಬೇಕು 🙂 .

ಅಂದ ಹಾಗೆ ನಿಮ್ಮ  ಈ ವರುಷದ resolution  ಎಂಥ ಮಾರಾಯರೇ  ?

ಇಂತಿ ನಿಮ್ಮ

ಕಾರ್ತಿಕ್  .

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s