ಚಿಕ್ಕ ಕಥೆ

ನನಗೆ ನೈಟ್ ಶಿಫ್ಟ್. ಅಜ್ಜ ಊಟ ಮುಗಿಸ್‌ಕೊಂಡು ಮಲಗಿದ್ದ. “ಚಳಿ ಕಣೋ , ಸ್ವಲ್ಪ ಹತ್ತಿ ತಕ , ಕಿವಿ ಮುಚ್ಕೊಳ್ತೀನಿ ” ಅಂದ. ನಾನು ಕೊಟ್ಟೆ. ಅವನು ಮಲಗಿದ. ಬೆಳ್ಳೆಗೆ ಮನೆಗೆ ಬಂದೆ. ಜನ ಇದ್ದರು… Read more “ಚಿಕ್ಕ ಕಥೆ”

ಫುಲ್ಲ್ ಕಾಮೆಡೀ ಸಾರ್

ಇಟ್ ಹ್ಯಾಪನ್ಸ್ ಓನ್ಲೀ ಇನ್ ಇಂಡಿಯಾ ಐ ಸೇ . ಆಗ ತಾನೇ ಮನೆಗೆ ಬಂದು ನ್ಯೂಸ್ ನೋಡ್ತಾ ಇದ್ದೇ. ಅದು ಮೈಸೂರು .ಅಲ್ಲಿ ನಂಜುಂಡಪ್ಪನ ದೇವಸ್ಥಾನ ಇದೆ ಅಂತೆ. ಅಲ್ಲಿನ ದೇವರು ವೆಂಕಟೇಶ ಅಂದ್ರೆ ಅದೇ… Read more “ಫುಲ್ಲ್ ಕಾಮೆಡೀ ಸಾರ್”

ಮಾಂಟೊ ಕಥೆಗಳು

ಪ್ರೀತಿಯ  ನನ್ನ ಗೆಳೆಯ  ಜೈ ಕುಮಾರ್ ಇತ್ತೀಚಿಗೆ ನನಗೆ ಹಲವು  ಕಿರು ಪುಸ್ತಕಗಳ್ಳನ್ನ  ತಂದು ಕೊಟ್ಟರು. ಅದರಲ್ಲಿ  ಒಂದು ಪುಸ್ತಕದ  ಹೆಸರು ಮಾಂಟೊ ಕಥೆಗಳು . ಪುಸ್ತಕದ ಹೆಸರಲ್ಲೇ “ಕಥೆಗಳು” ಇತ್ತಲ್ಲ , ಅದನ್ನ ನೋಡಿ ನಾನು… Read more “ಮಾಂಟೊ ಕಥೆಗಳು”

yuva jana payna ..yettha kadege ?

ನಮ್ ಜನ್ರು ಏನನ್ನು ಸೀರೀಯಸ್ ಆಗಿ ತಗೊಳಲ್ಲ . ಮೊನ್ನೆ ಓಲಮ್‌ಪಿಕ್ಸ್ ನಲ್ಲಿ  ಕಂಚಿನ   ಪದಕ ಗೆದ್ರಲ್ಲಪ್ಪ … ಅದನ್ನ ನೋಡಿ ನಮ್ಮ ಪಕ್ಕದ್ದ ಮನೆಯ ಆಂಟೀ…. ತು ಎನ್ ಜನ ಅಂತೀನಿ ಕಾರ್ತಿಕ್. ಅಲ್ಲ … ಹೋಗಿ ಹೋಗಿ  ಕಂಚಿನ ಪದಕನ ತಂದು ಕೊಟ್ಟಿದ್ದರಲ್ಲ …. ಚಿನ್ನದ ಪದಕ ತರೋದು ಬಿಟ್ಟು ಅಂದ್ರು. ಎನ್ ಓಲಮ್‌ಪಿಕ್ಸ್ ಇವರ ಮಾವನ ಮನೆ ನೋಡಿ ?? ಚಿನ್ನದ ಪದಕ ಬಿಟ್ಟಿಆಗಿ ಕೊಡೋಕ್ಕೆ.

ಪಾಪ ಅಲ್ಲಿ ನಮ್ಮ ಕ್ರೀಡಾಪಟುಗಳು ಹೇಗೋ ಕಷ್ಟ ಪಟ್ಟು , ತಮ್ಮ ಕಠಿಣ ಪರಿಶ್ರಮದಿಂದ ಹಾಗೋ ಹೀಗೋ ವೊಡ್ದಾಡಿ ಗುಡ್ಡಾಡಿ …ಪದಕ ತಂದ್ರೆ ..ಈ ಜನರ ದಿಮಾಕಿನ ಮಾತುಗಳು ..
ಇರಲಿ ಏನು ಮಾಡೋದಕ್ಕೆ ಆಗಲ್ಲ…. !! 🙂 ಜಡ ಮನುಷ್ಯರು. ಮೊನ್ನೆ ಹೀಗೆ ನಾನು ಕಲಾಸಿಪಾಳ್ಯಕ್ಕೆ ಹೋಗಿದ್ದೆ. ಅಲ್ಲಿ ಸುಮಾರು ಒಂದು ಗಂಟೆ ಕಾಲ ಕಳೆದು ಸಾಮಾನುಗಳನ್ನ ತಗೊಂಡು ಮನೆ ಕಡೆ ಹೊರಡ್ದಕ್ಕೆ ಅನುವಾದೆ . ಅಷ್ಟ್ರಲ್ಲಿ ಅಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತನಾಡುತಿದ್ದರು . ” ಲೇ, ಅಣ್ಣ ಹಾಜ಼ರೆ , ಏನೋ ಹಿಂಗೆ ಕೈ ಎತ್ತ್ಬಿಟ್ಟರು… ಅಲ್ಲ ಆ ಫ್ರೀಡಮ್ ಪಾರ್ಕ್ ನಲ್ಲಿ ಕಲರ್ ಕಲರ್ ಫಿಗರ್‌ಗಳು ನೋಡೋದಕ್ಕೆ ಸಿಗ್ಗ್ತಾಇದ್ದವ್ವು …. ಏನೋ ನಾವುಗಳು ಒಮ್ಮೊಮ್ಮೆ ಫಿಗರ್ಗಳನ್ನ ನೋಡಿ ಕಣ್ಣನ ತಂಪು ಮಾಡ್‌ಕೋಳ್ಳ್‌ತ್ತಾ ಇದ್ವಿ. ಈಗ ಅದು ಇಲ್ಲದಂಗೇ ಆಯಿತು . ಬಾರಿ ಡವ್ಗಳಪ್ಪಾ ಇವರದು ” ಅಂತ ಒಬ್ಬ ಗುನುಗಿದ . ಅಷ್ಟ್ರಲ್ಲಿ ಇನ್ನೊಬ್ಬ ” ಮಗ, ಬಾರೋ …ಅಲ್ಲಿ ಯಾವುದೋ ಪ್ರತಿಭಟನೆ ಇದೆ ಅಂತ.. ಸ್ವಲ್ಪ ಹೋಗಿ ಬರೋಣ … ಬೇಜಾನ್ ದಿನ ಆಯಿತು ಒಳ್ಳೇ ಹಕ್ಕಿನ ನೋಡದೇ. ” ಅಂತ ಹೇಳಿ ಹೊರಟು ಹೋದರು . ನಾನು ಮಾತ್ರ ಅವರ ಮಾತುಗಳನ್ನ ಕೇಳಿ ಮೂಕಾವಿಸ್ಮಿತನಾದೆ.

ಎಲ್ಲಿ ಹೊರಟಿದೆ ನಮ್ಮ ಯುವ ಜನ … !?

ಇಂತಿ ,
ನಿಮ್ಮ ಕಾರ್ತಿಕ್

ಮೂರು ಹೆಣ್ಣು ಐದು ಜಡೆ !

ಮೊನ್ನೆ ನಮ್ಮ ಗಾಂಧಿ ಬಜ಼ಾರ್ ಹತ್ತಿರ ಇರುವ ಅಂಕಿತ ಪುಸ್ತಕ ಅಂಗಡಿಗೆ ಹೋಗಿದ್ದೆ. ಅಲ್ಲಿ ಕಣ್ಣಿಗೆ ಬಿದ್ದ ಪುಸ್ತಕವೇ “ಮೂರು ಹೆಣ್ಣು ಐದು ಜಡೆ”. ಲೇಖಕ ನಮ್ಮ ಬೀಚಿಯವರು. ಅವರ ಬರಹ ಅಂದರೆ ಕೇಳಬೇಕೇ. ಒಂಥರ ಮಾವಿನ… Read more “ಮೂರು ಹೆಣ್ಣು ಐದು ಜಡೆ !”

ವೀಕೆಂಡ್ ಕಥೆ

ಒಂದು ಊರು. ಊರಿನಲ್ಲಿ ಒಂದು ಬಡ ಕುಟುಂಬ. ಕುಟುಂಬದಲ್ಲಿ ವಯಸ್ಸಾದ ಗಂಡ ಹೆಂಡತಿ ಇದ್ದರು. ಗಂಡನ ಹೆಸರು ಬೈರಪ್ಪ. ಹೆಂಡತಿಯ ಹೆಸರು ಲಕ್ಷ್ಮಿ. ಇವರಿಗೆ ಒಬ್ಬ ಮಗ. ಅವನ ಹೆಸರು ಕಿಶೋರ. ಗಂಡ ಕಾಡಿನಿಂದ ಕಟ್ಟಿಗೆ ತಂದು… Read more “ವೀಕೆಂಡ್ ಕಥೆ”